ಬಿಹಾರ: ಟ್ರ್ಯಾಕ್ಟರ್ ಹಾಗೂ ಕಾರು ನಡುವೆ ಡಿಕ್ಕಿ, ಮೂವರು ಮಕ್ಕಳು ಸೇರಿ 7 ಮಂದಿ ಸಾವು
ಸಂಭವಿಸಿದ ಅಪಘಾತದಲ್ಲಿ ಮೂವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಚೌತಮ್ ಬ್ಲಾಕ್ ಪ್ರದೇಶದಲ್ಲಿ ಮದುವೆ ಮುಗಿಸಿ ಸಂಬಂಧಿಕರು ಕಾರಿನಲ್ಲಿ ಹಿಂದಿರುಗುತ್ತಿದ್ದರು. ಅಪಘಾತವು ಎನ್ಎಚ್-31ನಲ್ಲಿ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಬಿಹಾರದ ಖಗಾರಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸವನ್ನಪ್ಪಿದ್ದಾರೆ. ಮದುವೆ ಮನೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ. ಮೂವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಚೌತಮ್ ಬ್ಲಾಕ್ ಪ್ರದೇಶದಲ್ಲಿ ಮದುವೆ ಮುಗಿಸಿ ಸಂಬಂಧಿಕರು ಕಾರಿನಲ್ಲಿ ಹಿಂದಿರುಗುತ್ತಿದ್ದರು. ಅಪಘಾತವು ಎನ್ಎಚ್-31ನಲ್ಲಿ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದ ಬಗ್ಗೆ ತಕ್ಷಣ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಹೊರ ತೆಗೆದಿದ್ದಾರೆ. ಪಸ್ರಾಹ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರತ್ನ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ.
ಮತ್ತಷ್ಟು ಓದಿ: ಬೆಳಗಾವಿಯಲ್ಲಿ ಹೆಚ್ಚಾದ ಅಪಘಾತ ಪ್ರಕರಣಗಳು; ಕೇವಲ ಮೂರು ದಿನದಲ್ಲಿ 25 ಸಾವು
ಮಾರ್ಚ್ 13ರಂದು ನಡೆದ ಮತ್ತೊಂದು ಘಟನೆ ಮಜಾಫರ್ಪರದಲ್ಲಿ ಕಾರು ಹಾಗೂ ಟ್ರಕ್ಗೆ ಡಿಕ್ಕಿ, ಐವರು ಸಾವು ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಕಳೆದ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದರು. ಅಪಘಾತದಲ್ಲಿ 6 ಮಂದಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮದುವೆ ಮುಗಿಸಿ ಬರುವಾಗ ಘಟನೆ ನಡೆದಿದೆ. ಮೃತರೆಲ್ಲರೂ ಸೀತಾರ್ಹಿ ನಿವಾಸಿಯಾಗಿದ್ದಾರೆ. ಬೊಲೆರೋ ಕಾರು ಎನ್ಎಚ್77ರಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಬೊಲೆರೋದಲ್ಲಿ 11 ಮಂದಿ ಇದ್ದರು.
ಗೋವಾದಲ್ಲಿ ಟ್ರಕ್ ಕಂದಕಕ್ಕೆ ಉರುಳಿ ಓರ್ವ ಸಾವು, 13 ಮಂದಿಗೆ ಗಾಯ ಟ್ರಕ್ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಗೋವಾದಲ್ಲಿ ನಡೆದಿದೆ. ತಕ್ಷಣವೇ ಸಿಎಂ ಪ್ರಮೋದ್ ಸಾವಂತ್ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾದರು. ಆಯುರ್ವೇದ ವೈದ್ಯರಾಗಿರುವ ಸಾವಂತ್ ಅವರು ಸಂತ್ರಸ್ತರ ನಾಡಿಮಿಡಿತವನ್ನು ಪರಿಶೀಲಿಸಿದರು, ಫಲ್ ದೇಸಾಯಿ ಅವರು ಕಂದಕಕ್ಕೆ ಇಳಿದು ಅಪಘಾತಕ್ಕೀಡಾದ ವಾಹನದಿಂದ ಗಾಯಅಳುಗಳನ್ನು ಹೊರತೆಗೆಯಲು ಸಹಾಯ ಮಾಡಿದರು.
ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರಕ್ ತಿರುಗಿ ಕಂದಕಕ್ಕೆ ಬಿದ್ದಿತ್ತು. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಮಕ್ಕಳು ಸೇರಿದಂತೆ 13 ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಎಂ ಸಾವಂತ್ ಮತ್ತು ಸಚಿವ ಫಲ್ ದೇಸಾಯಿ ಅವರು ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಮತ್ತು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ