ಬಿಎಸ್ಪಿ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುವಂತೆ ಯೋಗಿ ಬಳಿ ಮಾಯಾವತಿ ಮನವಿ
ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿರುವ ತಮ್ಮ ಪಕ್ಷದ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಮನವಿ ಮಾಡಿದ್ದಾರೆ. ಬಿಎಸ್ಪಿ ಕಚೇರಿ ಅಲ್ಲಿರುವುದು ಸುರಕ್ಷಿತವಲ್ಲ, ಯಾವ ಸಮಯದಲ್ಲಿ ಬೇಕಾದರೂ ಅಹಿತಕರ ಘಟನೆಗಳು ಸಂಭವಿಸಬಹುದು. ಅಭದ್ರತೆಯ ಭಾವನೆಯಿಂದಾಗಿ ಪಕ್ಷದ ಬಹುತೇಕ ಸಭೆಗಳನ್ನು ನಮ್ಮ ನಿವಾಸದಲ್ಲಿಯೇ ನಡೆಸಲಾಗುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.
ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ(Mayawati) ಲಕ್ನೋದಲ್ಲಿರುವ ತಮ್ಮ ಪಕ್ಷದ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಮನವಿ ಮಾಡಿದ್ದಾರೆ. ಬಿಎಸ್ಪಿ ಕಚೇರಿ ಅಲ್ಲಿರುವುದು ಸುರಕ್ಷಿತವಲ್ಲ, ಯಾವ ಸಮಯದಲ್ಲಿ ಬೇಕಾದರೂ ಅಹಿತಕರ ಘಟನೆಗಳು ಸಂಭವಿಸಬಹುದು. ಅಭದ್ರತೆಯ ಭಾವನೆಯಿಂದಾಗಿ ಪಕ್ಷದ ಬಹುತೇಕ ಸಭೆಗಳನ್ನು ನಮ್ಮ ನಿವಾಸದಲ್ಲಿಯೇ ನಡೆಸಲಾಗುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಯಾವತಿ ಎಕ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿದ್ದಾರೆ, ಹಾಗೂ ಅಭದ್ರತೆಗೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಸರ್ಕಾರವು ದಲಿತ ವಿರೋಧಿಗಳೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು, ಪ್ರಸ್ತುತ ಕಚೇರಿ ಇರುವ ಸ್ಥಳದ ಬದಲು ಸುರಕ್ಷಿತ ಸ್ಥಳದಲ್ಲಿ ಕಚೇರಿ ಸ್ಥಳಾಂತರಿಸಬೇಕು, ಇಲ್ಲದಿದ್ದರೆ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎಂದು ಹೇಳಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ, ದಶಕಗಳ ನಂತರ ಮೈತ್ರಿ ಮಾಡಿಕೊಳ್ಳುವ ಮೂಲಕ ಯುಪಿಯಲ್ಲಿ ಬಿಜೆಪಿಯ ಗೆಲುವಿನ ರಥಕ್ಕೆ ಬ್ರೇಕ್ ಹಾಕಲು ಬಿಎಸ್ಪಿ ಮತ್ತು ಎಸ್ಪಿ ಪ್ರಯತ್ನಿಸಿದ್ದವು. ಆದರೆ, ಚುನಾವಣೆ ಮುಗಿದ ನಂತರ ಬಿಎಸ್ಪಿ ಅಖಿಲೇಶ್ ಯಾದವ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿತ್ತು.
ಮತ್ತಷ್ಟು ಓದಿ: ಬಿಎಸ್ಪಿಗೆ ತನ್ನ ಸೋದರಳಿಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಮಾಯಾವತಿ
2024 ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಯಾವತಿಯವರ ನಿಲುವು ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷದ ಮೈತ್ರಿ ಇಂಡಿಯಾ ಮೈತ್ರಿಕೂಟದಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವುದಾಗಿದೆ. ಆದರೆ ಆಗಾಗ ಬಿಎಸ್‌ಪಿ ಜತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿರುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:04 am, Tue, 9 January 24