AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷ ವಿರೋಧಿ ಚಟುವಟಿಕೆ; ಬಿಎಸ್​​​ಪಿಯಿಂದ ಸಂಸದ ಡ್ಯಾನಿಶ್ ಅಲಿಯನ್ನು ಉಚ್ಛಾಟಿಸಿದ ಮಾಯಾವತಿ

Danish Ali: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಳೆಯ ವಿದ್ಯಾರ್ಥಿಯಾಗಿದ್ದ ಅಲಿ, ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದಲ್ಲಿ 2017 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಜೆಡಿ (ಎಸ್) ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯ ಹಿಂದಿನ ಪ್ರಮುಖ ಶಕ್ತಿ ಮತ್ತು ಮುಖವಾಗಿ ಅಲಿ ಅವರ ಹೆಸರು ಹೊರಹೊಮ್ಮಿತ್ತು

ಪಕ್ಷ ವಿರೋಧಿ ಚಟುವಟಿಕೆ; ಬಿಎಸ್​​​ಪಿಯಿಂದ ಸಂಸದ ಡ್ಯಾನಿಶ್ ಅಲಿಯನ್ನು ಉಚ್ಛಾಟಿಸಿದ ಮಾಯಾವತಿ
ಡ್ಯಾನಿಶ್ ಅಲಿ
ರಶ್ಮಿ ಕಲ್ಲಕಟ್ಟ
|

Updated on: Dec 09, 2023 | 5:25 PM

Share

ದೆಹಲಿ ಡಿಸೆಂಬರ್ 09: ಕೆಲವು ತಿಂಗಳ ಹಿಂದೆ ಬಿಜೆಪಿ(BJP) ಮುಖಂಡರಿಂದ ಸದನದಲ್ಲಿ ನಿಂದನೆಗೊಳಗಾಗಿದ್ದ ಲೋಕಸಭೆ ಸಂಸದ ಡ್ಯಾನಿಶ್ ಅಲಿ (Danish Ali)ಅವರನ್ನು ಮಾಯಾವತಿ ತಮ್ಮ ಬಹುಜನ ಸಮಾಜ ಪಕ್ಷದಿಂದ (BSP)ಉಚ್ಛಾಟಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯೇ ಈ ಕ್ರಮಕ್ಕೆ ಕಾರಣ ಎಂದು ಹೇಳಲಾಗಿದೆ. “ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆಗಳು ಅಥವಾ ಕ್ರಮಗಳ ವಿರುದ್ಧ ನಿಮಗೆ ಎಚ್ಚರಿಕೆ ನೀಡಲಾಗಿದೆ. ಆದರೆ, ನೀವು ನಿರಂತರವಾಗಿ ಪಕ್ಷದ ವಿರುದ್ಧ ವರ್ತಿಸುತ್ತಿದ್ದೀರಿ” ಎಂದು ಬಿಎಸ್ಪಿ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಸಂಸತ್ತಿನಲ್ಲಿ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ನಂತರ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾದರು. ಲೋಕಸಭೆಯಿಂದ ಉಚ್ಛಾಟಿಸಲಾಗಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಅವರು ನಿನ್ನೆ ಸಂಸತ್ತಿನ ಹೊರಗೆ ಏಕವ್ಯಕ್ತಿ ಪ್ರತಿಭಟನೆ ನಡೆಸಿದ್ದರು ಅಲಿ. ಸಂತ್ರಸ್ತರನ್ನು ಅಪರಾಧಿಯನ್ನಾಗಿ ಮಾಡಬೇಡಿ ಎಂಬ ಫಲಕವನ್ನು ಕುತ್ತಿಗೆಗೆ ನೇತುಹಾಕಿ ಅವರು ಪ್ರತಿಭಟಿಸಿದ್ದರು.

ರಮೇಶ್ ಬಿಧುರಿ ಅವರು ಆ ಕಾಮೆಂಟ್ ಗಳನ್ನು ಮಾಡಿದಾಗಲೇ ಸಂಸತ್​​​ನ ಸಭ್ಯತೆ ಸೆಪ್ಟೆಂಬರ್ ನಲ್ಲಿ ಸತ್ತು ಹೋಯಿತು. ಈಗ ಅವರು ಅದನ್ನು ಹೇಳುತ್ತಿದ್ದಾರೆಯೇ? ಇಂದು, (ಮಹಾತ್ಮ) ಗಾಂಧಿ ಮತ್ತು ಅಂಬೇಡ್ಕರ್ ಅಳುತ್ತಿದ್ದಾರೆ ಎಂದು ಎಎನ್ಐ ಜತೆ ಮಾತನಾಡಿದ ಅಲಿ ಹೇಳಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಳೆಯ ವಿದ್ಯಾರ್ಥಿಯಾಗಿದ್ದ ಅಲಿ, ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದಲ್ಲಿ 2017 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಜೆಡಿ (ಎಸ್) ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯ ಹಿಂದಿನ ಪ್ರಮುಖ ಶಕ್ತಿ ಮತ್ತು ಮುಖವಾಗಿ ಅಲಿ ಅವರ ಹೆಸರು ಹೊರಹೊಮ್ಮಿತ್ತು. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ, ಆ ಸಮಯದಲ್ಲಿ ಕೇವಲ 42 ವರ್ಷದ ಅಲಿ ಅವರನ್ನು ನಂಬಿ, ಎರಡು ಪಕ್ಷಗಳು ಸ್ಥಾಪಿಸಿದ ಐದು ಸದಸ್ಯರ ಒಕ್ಕೂಟದ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯ ಸಂಚಾಲಕರಾಗಿ ಹೆಸರಿಸಲಾಯಿತು.ಅದು  ಅಲ್ಪಾವಧಿಯ ಜೆಡಿ(ಎಸ್)-ಕಾಂಗ್ರೆಸ್ ಸರ್ಕಾರ ಆಗಿತ್ತು.

2019 ರ ಲೋಕಸಭಾ ಚುನಾವಣೆಯಲ್ಲಿ, ಡ್ಯಾನಿಶ್ ಅಲಿ ಅವರು ತಮ್ಮ ಹುಟ್ಟೂರಾದ ಹಾಪುರ್‌ನಿಂದ ಬಹಳ ದೂರದಲ್ಲಿರುವ ಯುಪಿಯ ಅಮ್ರೋಹಾದಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ನಿಂತರು. ಇದು ಅವರ ಮೊದಲ ಚುನಾವಣಾ ಸ್ಪರ್ಧೆಯಾಗಿದ್ದರೂ,  ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರವಾದ ಅಮ್ರೋಹಾದಿಂದ ದೊಡ್ಡ ಗೆಲುವು ಸಾಧಿಸಿದ್ದರು. ಪ್ರಸ್ತುತ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯ ದಲಿತರು ಇದ್ದಾರೆ. ಅಲಿ ಅವರು ಸುಮಾರು 51% ಮತಗಳನ್ನು ಗಳಿಸಿದರು. ಈ ಚುನಾವಣೆಯಲ್ಲಿ ಅಲಿ ಅವರು ಹಾಲಿ ಬಿಜೆಪಿ ಸಂಸದ ಕುನ್ವರ್ ಸಿಂಗ್ ತನ್ವರ್ ಅವರನ್ನು 63,000 ಕ್ಕಿಂತ ಹೆಚ್ಚು ಅಂತರದಿಂದ ಸೋಲಿಸಿದರು.

ಇದನ್ನೂ ಓದಿ: ಈ ದೇಶದ ಪ್ರತಿಯೊಬ್ಬ ಬಡವನೂ ವಿಐಪಿ: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಮೋದಿ ಸಂವಾದ

ಬಿಎಸ್‌ಪಿಗೆ ಹೋದಾಗಿನಿಂದ ಅಲಿ ತಮ್ಮ ಹಿಡಿತ ಸಾಧಿಸಿದ್ದರು. ಮಾಯಾವತಿಯವ ಪಕ್ಷದಲ್ಲಿ, ಅವರು ತಮ್ಮ ಕ್ಷೇತ್ರದಲ್ಲಿ ಅಥವಾ ದೆಹಲಿಯಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ರಾಷ್ಟ್ರೀಯ ರಾಜಕೀಯದಲ್ಲಿ ಬಿಎಸ್‌ಪಿಯ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಸ್ವಲ್ಪ ಸಮಯದವರೆಗೆ, ಅಲಿ ಲೋಕಸಭೆಯಲ್ಲಿ 10 ಸದಸ್ಯರ BSP ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿದ್ದರು.

PRS ಲೆಜಿಸ್ಲೇಟಿವ್ ರಿಸರ್ಚ್ ಡೇಟಾದ ಪ್ರಕಾರ, ಅಲಿ ಸಕ್ರಿಯ ಸಂಸದರಾಗಿದ್ದಾರೆ. ಅವರು ಶೇ 98ಹಾಜರಾತಿಯನ್ನು ದಾಖಲಿಸಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ