Lok Sabha Election: ರಾಯ್​ಬರೇಲಿಯಿಂದ ಸ್ಪರ್ಧೆ, ರಾಹುಲ್​ ವಿರುದ್ಧ ದೂರು ದಾಖಲು, ನಾಮಪತ್ರ ರದ್ದುಪಡಿಸುವಂತೆ ಆಗ್ರಹ

|

Updated on: May 05, 2024 | 10:43 AM

ರಾಹುಲ್​ ಗಾಂಧಿ ರಾಯ್​ಬರೇಲಿಯಿಂದ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಅನಿರುದ್ಧ ಪ್ರತಾಪ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದು, ಅವರ ನಾಮಪತ್ರ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

Lok Sabha Election: ರಾಯ್​ಬರೇಲಿಯಿಂದ ಸ್ಪರ್ಧೆ, ರಾಹುಲ್​ ವಿರುದ್ಧ ದೂರು ದಾಖಲು, ನಾಮಪತ್ರ ರದ್ದುಪಡಿಸುವಂತೆ ಆಗ್ರಹ
ರಾಹುಲ್ ಗಾಂಧಿ
Follow us on

ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಪೌರತ್ವ ಮತ್ತು ಮಾನನಷ್ಟ ಮೊಕದ್ದಮೆಯಲ್ಲಿ ಇತ್ತೀಚಿಗೆ ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಷ್ಟು ಮಾತ್ರವಲ್ಲದೆ, ಚುನಾವಣಾ ಆಯೋಗದ ಮೂಲಕ ರಾಹುಲ್ ಅವರ ನಾಮನಿರ್ದೇಶನವನ್ನು ಹೇಗೆ ಮಾನ್ಯ ಎಂದು ಪರಿಗಣಿಸಬಹುದು ಎಂಬ ಪ್ರಶ್ನೆಗಳು ಎದ್ದಿವೆ. ರಾಹುಲ್ ಶುಕ್ರವಾರ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ರಾಹುಲ್ ವಿರುದ್ಧ ದೂರು ದಾಖಲಿಸಿರುವವರ ಹೆಸರು ಅನಿರುದ್ಧ ಪ್ರತಾಪ್ ಸಿಂಗ್ ಆಗಿದ್ದು, ಅವರ ಪರವಾಗಿ ವಕೀಲ ಅಶೋಕ್ ಪಾಂಡೆ ದೂರು ಸಲ್ಲಿಸಿದ್ದಾರೆ. ರಾಹುಲ್ ವಿರುದ್ಧ ವಕೀಲರು ರಾಯ್ ಬರೇಲಿಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಇದರಲ್ಲಿ ಕಾಂಗ್ರೆಸ್ ನಾಯಕನ ಪೌರತ್ವ ಮತ್ತು ಶಿಕ್ಷೆಯ ಆಧಾರದ ಮೇಲೆ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಮತ್ತಷ್ಟು ಓದಿ: Rahul Gandhi: ರಾಹುಲ್ ಗಾಂಧಿ ಹೇಳಿದ 10 ಸುಳ್ಳುಗಳು

ವಕೀಲ ಅಶೋಕ್ ಪಾಂಡೆ, ಮೊದಲು ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆ ವಿಧಿಸಲಾಗಿದೆ. ಅವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರು. ಎರಡನೆಯ ವಿಷಯವೆಂದರೆ 2006 ರಲ್ಲಿ ಒಮ್ಮೆ ರಾಹುಲ್ ಗಾಂಧಿ ಅವರು ತಮ್ಮ ಪೌರತ್ವವನ್ನು ಬ್ರಿಟಿಷ್ ಎಂದು ಘೋಷಿಸಿದ್ದರು. ಅವರು ಬ್ರಿಟಿಷ್ ಪ್ರಜೆಯಾಗಿರುವುದರಿಂದ ಅವರು ಸಾಂವಿಧಾನಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನ್ನ ದೂರಿನ ನಂತರ ರಾಹುಲ್ ಗಾಂಧಿ ಅವರ ಪ್ರತಿನಿಧಿ ಕರೆ ಮಾಡಿ ನನ್ನ ದೂರನ್ನು ಸ್ವೀಕರಿಸಲಾಗಿದೆ.

ಕಾಂಗ್ರೆಸ್ ನಾಯಕ ಅಜಯ್ ಪಾಲ್ ಸಿಂಗ್ ಅವರು ರಾಹುಲ್ ಗಾಂಧಿ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅವರ ನಾಮಪತ್ರವನ್ನು ಈ ಹಿಂದೆ ಮಾನ್ಯವೆಂದು ಪರಿಗಣಿಸಲಾಗಿದೆ ಮತ್ತು ಈಗಲೂ ಮಾನ್ಯವಾಗಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಶುಕ್ರವಾರ ರಾಯ್‌ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಅಮೇಥಿಯಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಅವರು ಕೇಂದ್ರ ಸಚಿವೆ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಅಮೇಥಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ