ನರೇಂದ್ರ ಮೋದಿ(Narendra Modi) ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಹಾರೈಸುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದು ಒಮ್ಮೆ ಸಭಿಕರಲ್ಲಿ ಅಚ್ಚರಿಯುಂಟು ಮಾಡಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ದಾನಿಯಾವಾನ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದರು.
ಈ ವೇಳೆ ನಿತೀಶ್ ಕುಮಾರ್ ಅವರ ನಾಲಿಗೆ ಹೊರಳಿತ್ತು, ಬಿಹಾರದ ಎಲ್ಲಾ 40 ಸ್ಥಾನಗಳನ್ನು ಹಾಗೂ ದೇಶದ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ನಾವು ಬಯಸುತ್ತೇವೆ. ನರೇಂದ್ರ ಮೋದಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ, ಇದರಿಂದ ದೇಶ ಅಭಿವೃದ್ಧಿಯಾಗುತ್ತದೆ, ಬಿಹಾರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.
ತಕ್ಷಣವೇ ಅಲ್ಲಿ ವೇದಿಕೆಯಲ್ಲಿದ್ದವರು ಅವರ ಹೇಳಿಕೆಯನ್ನು ಸರಿಪಡಿಸಿದ್ದಾರೆ. 2005ಕ್ಕೂ ಮೊದಲು ಸಂಜೆಯ ವೇಳೆ ಯಾರೂ ಮನೆಯಿಂದ ಹೊರಬರಲು ಧೈರ್ಯ ಮಾಡುತ್ತಿರಲಿಲ್ಲ. ಸಾಕಷ್ಟು ಹೋರಾಟಗಳು ನಡೆದಿವೆ, ಆರೋಗ್ಯ ಮತ್ತು ಶಿಕ್ಷಣ ಕೆಟ್ಟ ಸ್ಥಿತಿಯಲ್ಲಿತ್ತು. ರಸ್ತೆಗಳ ಸ್ಥಿತಿ ಹದಗೆಟ್ಟಿತ್ತು.
ನಾನು ಸಂಸದನಾಗಿದ್ದಾಗ ಕೆಲವೆಡೆ ರಸ್ತೆಗಳಿದ್ದವು, ಕಾಲ್ನಡಿಗೆಯಲ್ಲೇ ಬೇರೆ ಕಡೆ ಹೋಗಬೇಕಿತ್ತು, ಆದರೆ ಆರ್ಜೆಡಿಗೆ ಅವಕಾಶ ಸಿಕ್ಕಿತ್ತು ಆದರೆ ಯಾವುದೇ ಕೆಲಸ ಮಾಡಿಲ್ಲ ಎಂದರು.
ಮತ್ತಷ್ಟು ಓದಿ: CM Nitish Kumar Resigns: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಎನ್‌ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಮುಖಂಡ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬೆಂಬಲಿಸಿ ಇಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು.
ನಿತೀಶ್ ಕುಮಾರ್ ಹಲವು ಬಾರಿ ನಗೆಪಾಟಲಿಗೆ ಗುರಿಯಾಗಿದ್ದಾರೆ, ಮೇ 19 ರಂದು ವೈಶಾಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಭ್ಯರ್ಥಿ ವೀಣಾ ದೇವಿ ಪರ ಭಾಷಣ ಮಾಡುತ್ತಿದ್ದ ಅವರು ಬಿಹಾರ ಮತ್ತು ರಾಜ್ಯಾದ್ಯಂತ ಎಲ್ಲಾ 40 ಸ್ಥಾನಗಳನ್ನು ಎನ್‌ಡಿಎ ಗೆಲ್ಲಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದರು. ನಮ್ಮ ಮೈತ್ರಿಕೂಟ ನಾಲ್ಕು ಸಾವಿರ ಸೀಟುಗಳನ್ನು ಗೆಲ್ಲಬೇಕು ಎಂದಿದ್ದರು.
ಏಪ್ರಿಲ್ 7 ರಂದು ನಾವಡಾ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ನಿತೀಶ್ ತಮ್ಮ ಭಾಷಣದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಎನ್‌ಡಿಎ ಸಂಸದರ ಗೆಲುವಿನ ಬಗ್ಗೆ ಮಾತನಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ