ಲೋಕಸಭೆಗೆ ಮಹಾವಿಕಾಸ್ ಅಘಾಡಿ ಸೀಟು ಹಂಚಿಕೆ ಬಹುತೇಕ ಖಚಿತ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಮಹಾವಿಕಾಸ್ ಅಘಾಡಿಯಲ್ಲಿ 2 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಕೋಲ ಮತ್ತು ಹಾತಕಣಂಗಲೆ ಸೀಟುಗಳನ್ನು ಕಾಯ್ದಿರಿಸಲಾಗಿದೆ. ವಂಚಿತ್ ಬಹುಜನ ಅಘಾಡಿ ಬಂದರೆ ಅಕೋಲಾ ಸ್ಥಾನವನ್ನು ವಂಚಿತ್ ಬಹುಜನ ಅಘಾಡಿಗೆ ಮೀಸಲಿಡಲಾಗಿದೆ. ಸ್ವಾಭಿಮಾನಿ ರೈತ ಸಂಘದ ಮುಖಂಡ ರಾಜು ಶೆಟ್ಟಿ ಅವರಿಗೆ ಹಾತಕಣಂಗಲೆ ಸ್ಥಾನ ಮೀಸಲಾಗಿದೆ.
ಮುಂಬೈ ನವೆಂಬರ್ 14 : ಮಹಾರಾಷ್ಟ್ರ (Maharashtra) ರಾಜಕೀಯದಲ್ಲಿ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಲೋಕಸಭೆಗೆ (Loksabha) ಮಹಾ ವಿಕಾಸ್ ಅಘಾಡಿ (Maha vikas aghadi) ಸೀಟು ಹಂಚಿಕೆ ಅಂತಿಮ ಹಂತ ತಲುಪಿದೆ. 44 ಲೋಕಸಭಾ ಸ್ಥಾನಗಳ ಕುರಿತು ಮಹಾ ವಿಕಾಸ್ ಅಘಾಡಿ ಮಾತುಕತೆ ಬಹುತೇಕ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಠಾಕ್ರೆ ಗುಂಪು 19 ರಿಂದ 21 ಸ್ಥಾನಗಳಲ್ಲಿ, ಕಾಂಗ್ರೆಸ್ 13 ರಿಂದ 15 ಸ್ಥಾನಗಳಲ್ಲಿ ಮತ್ತು ಶರದ್ ಪವಾರ್ ಗುಂಪು 10 ರಿಂದ 15 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. 4 ಸ್ಥಾನಗಳನ್ನು ಚರ್ಚೆ ಮೂಲಕ ನಿರ್ಧರಿಸಲಾಗುವುದು.
ಮಹಾವಿಕಾಸ್ ಅಘಾಡಿಯಲ್ಲಿ 2 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಕೋಲ ಮತ್ತು ಹಾತಕಣಂಗಲೆ ಸೀಟುಗಳನ್ನು ಕಾಯ್ದಿರಿಸಲಾಗಿದೆ. ವಂಚಿತ್ ಬಹುಜನ ಅಘಾಡಿ ಬಂದರೆ ಅಕೋಲಾ ಸ್ಥಾನವನ್ನು ವಂಚಿತ್ ಬಹುಜನ ಅಘಾಡಿಗೆ ಮೀಸಲಿಡಲಾಗಿದೆ. ಸ್ವಾಭಿಮಾನಿ ರೈತ ಸಂಘದ ಮುಖಂಡ ರಾಜು ಶೆಟ್ಟಿ ಅವರಿಗೆ ಹಾತಕಣಂಗಲೆ ಸ್ಥಾನ ಮೀಸಲಾಗಿದೆ.
ವಂಚಿತ್ ಬಹುಜನ ಅಘಾಡಿ ಬರದಿದ್ದರೆ ಅಕೋಲಾ ಸೀಟು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ. ಹಟಕಣಂಗಲೆಯ ಸ್ಥಾನ ರಾಜು ಶೆಟ್ಟಿ ಅವರಿಗೆ ಮೀಸಲಾಗಿದೆ. ಶೆಟ್ಟಿ ಬರದಿದ್ದರೆ ಶರದ್ ಪವಾರ್ ಗುಂಪು ಈ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲಿದೆ. ಜಲನಾ, ಹಿಂಗೋಲಿ, ಭಂಡಾರ-ಗೊಂಡಿಯಾ, ಅಮರಾವತಿ ಸ್ಥಾನಕ್ಕೆ ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಭಂಡಾರಾ-ಗೊಂಡಿಯಾ ಸ್ಥಾನವನ್ನು ಕಾಂಗ್ರೆಸ್ ಅಥವಾ ಎನ್‌ಸಿಪಿ ನಡುವೆ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ. ಅಮರಾವತಿಯ ಸ್ಥಾನವನ್ನು ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ.
ಶೀಘ್ರದಲ್ಲೇ ಅಂತಿಮ ನಿರ್ಧಾರ
ಕೆಲವು ದಿನಗಳ ಹಿಂದೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಠಾಕ್ರೆ ಗುಂಪಿನ ಮುಖ್ಯಸ್ಥ ಉದ್ಧವ್ ಠಾಕ್ರೆ ಭೇಟಿಯಾಗಿದ್ದರು. ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 44 ಸ್ಥಾನಗಳ ಮಾತುಕತೆ ಪೂರ್ಣಗೊಂಡಿದೆ. ಆದರೆ 4 ಸ್ಥಾನಗಳಲ್ಲಿ ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು 5 ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚುನಾವಣೆಗಳ ಫಲಿತಾಂಶ ಡಿಸೆಂಬರ್ 3 ರಂದು. ಆ ಬಳಿಕ ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಮಹಾರಾಷ್ಟ್ರ: ಶರದ್ ಪವಾರ್ ಭೇಟಿ ನಂತರ ದೆಹಲಿಗೆ ತೆರಳಿದ ಅಜಿತ್ ಪವಾರ್
2019ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನಾ ಮತ್ತು ಬಿಜೆಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಈ ಚುನಾವಣೆಯಲ್ಲಿ ಶಿವಸೇನೆ 23 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಅದರ ನಂತರ, ಠಾಕ್ರೆ ಗುಂಪು ಮಹಾವಿಕಾಸ್ ಅಘಾಡಿಯಿಂದ 19 ರಿಂದ 21 ಸ್ಥಾನಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಮುಂಬೈನಲ್ಲಿ ಸಂಭವನೀಯ ಹಂಚಿಕೆ ಹೀಗಿರಲಿದೆ
- ಉದ್ಧವ್ ಠಾಕ್ರೆ ಗುಂಪು ಮುಂಬೈನಲ್ಲಿ 4 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ
- ಮುಂಬೈನಿಂದ 2 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಸಾಧ್ಯತೆ ಇದೆ
- ಮುಂಬೈ, ಮಧ್ಯ, ಈಶಾನ್ಯ ಮುಂಬೈ ಠಾಕ್ರೆ ಗುಂಪು ಸೆಣಸಾಡುವ ಸಾಧ್ಯತೆ ಇದೆ
- ವಾಯವ್ಯ ಮುಂಬೈ ಸ್ಥಾನ ಉದ್ಧವ್ ಠಾಕ್ರೆ ಗುಂಪಿನ ಸಾಧ್ಯತೆ
- ಉತ್ತರ ಮಧ್ಯ ಮುಂಬೈ, ಉತ್ತರ ಮುಂಬೈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಸಾಧ್ಯತೆ ಇದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ