Padmakar Valvi: ಕಾಂಗ್ರೆಸ್ನ ಹಿರಿಯ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರ್ಪಡೆ
ಮಹಾರಾಷ್ಟ್ರ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಪದ್ಮಾಕರ್ ವಾಲ್ವಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಪದ್ಮಾಕರ್ ವಾಲ್ವಿ(Padmakar Valvi) ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಂದೂರ್‌ಬಾರ್‌ನ ಶಾಹದಾ ಕ್ಷೇತ್ರದ ಮಾಜಿ ಶಾಸಕ ವಾಲ್ವಿ ಅವರು ಮುಂಬೈನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಾಂಕುಲೆ ಮತ್ತು ಪಕ್ಷದ ಮುಖಂಡ ಅಶೋಕ್ ಚವ್ಹಾಣ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಮಿಲಿಂದ್ ದಿಯೋರಾ ಮತ್ತು ಅಶೋಕ್ ಚವಾಣ್ ನಂತರ ಕಾಂಗ್ರೆಸ್ನಿಂದ ನಿರ್ಗಮಿಸಿದ ಮೂರನೇ ನಾಯಕರು ಇವರಾಗಿದ್ದಾರೆ. ದೇವೋರಾ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಂಡರೆ, ಅಶೋಕ್ ಚವಾಣ್ ಬಿಜೆಪಿಗೆ ಸೇರಿ ರಾಜ್ಯಸಭೆಗೆ ಹೋಗಿದ್ದಾರೆ. ರಾಜ್ಯದಲ್ಲಿ ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ನಿನ್ನೆಯೇ ನಂದೂರ್ಬಾರ್ ಜಿಲ್ಲೆಗೆ ತಲುಪಿತ್ತು. ಪದ್ಮಾಕರ್ ವಾಲ್ವಿ ಬಿಜೆಪಿ ಸೇರುವ ಮೂಲಕ ನಂದೂರಬಾರ್‌ನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಪದ್ಮಾಕರ್ ವಾಲ್ವಿ ಅವರು ನಂದೂರ್ಬಾರ್ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಪ್ರಮುಖ ಮುಖಗಳಲ್ಲಿ ಒಬ್ಬರು ಎಂದು ಕರೆಯುತ್ತಾರೆ . 2009 ರಲ್ಲಿ, ಅವರು ಶಾಹದಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಆದರೆ 2014ರಲ್ಲಿ ಸೋಲು ಕಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Wed, 13 March 24