ಪ್ರಕಾಶ್ ಅಂಬೇಡ್ಕರ್(Prakash Ambedkar) ಅವರು ತಮ್ಮ ವಂಚಿತ್ ಬಹುಜನ ಅಘಾಡಿ ಪಕ್ಷವು ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಮಹಾ ವಿಕಾಸ್ ಅಘಾಡಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಹೋಗಲಿದೆ ಎಂದು ಘೋಷಿಸಿದ್ದಾರೆ. ಅವರ ಸೀಟುಗಳ ಬೇಡಿಕೆಗಳನ್ನು ನಿರ್ಧರಿಸುವ ಬಗ್ಗೆ ಪಕ್ಷವು ಅಲ್ಟಿಮೇಟಮ್ ನೀಡಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ.
ಅಕೋಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಪ್ರಕಾಶ್ ಅಂಬೇಡ್ಕರ್ ಎಂಟು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು ಮತ್ತು ರಾಮ್‌ಟೆಕ್‌ಗೆ ಒಬ್ಬರನ್ನು ಮಧ್ಯಾಹ್ನದ ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು. ಎಂವಿಎ ಒಬಿಸಿ ಫೆಡರೇಶನ್ ಮತ್ತು ಮರಾಠ ಸಮುದಾಯದಂತಹ ಸಮುದಾಯ ಆಧಾರಿತ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ.
ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರೊಂದಿಗೆ ನಡೆದ ಸಭೆಯ ಬಗ್ಗೆ ಮಾಹಿತಿ ನೀಡಿದ ಪ್ರಕಾಶ್, ನಿನ್ನೆ ವಿಸ್ತೃತ ಚರ್ಚೆ ನಡೆಸಿದ್ದೇವೆ. ಒಬಿಸಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ, ಅವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದೇವೆ. ಅಲ್ಲದೆ ಮುಸ್ಲಿಂ ಹಾಗೂ ಜೈನ ಸಮುದಾಯದವರಿಗೂ ಪಾಲು ಸಿಕ್ಕಿದೆ. ಎಂವಿಎ ಬಳಿ ಜಾರಂಗೆ ಅವರ ಅಂಶಗಳನ್ನು ನಿರ್ಲಕ್ಷಿಸಬೇಡಿ ಎಂದು ಹೇಳಿದ್ದೆವು ಆದರೂ ಕೇಳಲಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: ಉದ್ಧವ್ ಠಾಕ್ರೆ ಜೊತೆ ಮೈತ್ರಿ ಮುರಿದ ಪ್ರಕಾಶ್ ಅಂಬೇಡ್ಕರ್
ಪ್ರಕಾಶ್ ಅಂಬೇಡ್ಕರ್ (Prakash Ambedkar) ಅವರ ವಂಚಿತ್ ಬಹುಜನ ಅಘಾಡಿ ಉದ್ಧವ್ ಠಾಕ್ರೆ ಅವರ ಶಿವಸೇನಾದ (ShivSena) ಮೈತ್ರಿಯಿಂದ ಹೊರಬಂದಿತ್ತು.
ಇನ್ನು ಉದ್ಧವ್ ಠಾಕ್ರೆ ಜೊತೆ ಮೈತ್ರಿ ಇಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಮಹಾವಿಕಾಸ್ ಅಘಾಡಿಯಲ್ಲಿ ಸಂಚಲನ ಮೂಡಿದೆ. ಠಾಕ್ರೆ ಮತ್ತು ಮಹಾವಿಕಾಸ್ ಅಘಾಡಿ ಜೊತೆಗಿನ ಮೈತ್ರಿಯಿಂದ ಪ್ರಕಾಶ್ ಅಂಬೇಡ್ಕರ್ ಹೊರಬಂದರೆ, ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಸಮೀಕರಣಗಳು ಉಲ್ಟಾಪಲ್ಟಾ ಆಗಲಿವೆ.
ಅಂಬೇಡ್ಕರ್ ಅವರ ನಿರ್ಧಾರವು ಮಹಾವಿಕಾಸ್ ಅಘಾಡಿಗೆ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಂಚಿತ್ ಬಹುಜನ ಅಘಾಡಿ ಮುಖಂಡ ಪ್ರಕಾಶ್ ಅಂಬೇಡ್ಕರ್ ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಮಹಾವಿಕಾಸ್ ಅಘಾಡಿ ಜತೆಗಿನ ಸೀಟು ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯ ಬಗೆಹರಿದಿಲ್ಲ. ಹಾಗಾಗಿ ಮಾರ್ಚ್ 26 ರಂದು ನಮ್ಮ ನಿಲುವನ್ನು ಪ್ರಕಟಿಸುತ್ತೇವೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಪ್ರಕಾಶ್ ಅಂಬೇಡ್ಕರ್ ಒಂದು ರೀತಿಯಲ್ಲಿ ಮಹಾವಿಕಾಸ್ ಅಘಾಡಿಗೆ ಮೂರು ದಿನಗಳ ಗಡುವು ನೀಡಿದ್ದಾರೆ.ಇತ್ತ ಕೊಲ್ಲಾಪುರದ ಮಹಾವಿಕಾಸ ಅಘಾಡಿ ಅಭ್ಯರ್ಥಿ ಶಾಹು ಮಹಾರಾಜ್ ಅವರನ್ನು ಬೆಂಬಲಿಸುವುದಾಗಿ ಅಂಬೇಡ್ಕರ್ ಘೋಷಿಸಿದ್ದಾರೆ.
ಶಾಹು ಮಹಾರಾಜರಿಗೆ ಬೆಂಬಲ
ಕೊಲ್ಲಾಪುರದಲ್ಲಿ ನಮಗೆ ಉತ್ತಮ ಬೆಂಬಲ ಇದೆ. ಪಶ್ಚಿಮ ಮಹಾರಾಷ್ಟ್ರದಲ್ಲೂ ನಮಗೆ ಬಲವಿದೆ. ಕೊಲ್ಲಾಪುರದಿಂದ ಶಾಹು ಮಹಾರಾಜರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಶಾಹು ಮಹಾರಾಜರ ವಿಚಾರಧಾರೆ ಮತ್ತು ನಮ್ಮ ವಿಚಾರಧಾರೆಗಳು ನಿಕಟವಾಗಿವೆ. ಹಾಗಾಗಿ ನಾವು ಶಾಹು ಮಹಾರಾಜರನ್ನು ಬೆಂಬಲಿಸುತ್ತಿದ್ದೇವೆ. ಶಾಹು ಮಹಾರಾಜರನ್ನು ಆಯ್ಕೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಅಂಬೇಡ್ಕರ್ ಅವರು ಈ ಹಿಂದೆ ನಡೆದದ್ದು ಮತ್ತೆ ನಡೆಯದಂತೆ ಮುಂಜಾಗ್ರತೆ ವಹಿಸಲಿದ್ದೇವೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ