AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಬೈಕ್​​​ಗೆ ಡಿಕ್ಕಿ ಹೊಡೆದ ಕಾರನ್ನು ಹಿಂಬಾಲಿಸಿದ ಬೈಕ್ ಸವಾರರು; ಹಿಟ್ ಆ್ಯಂಡ್ ರನ್ ಘಟನೆ ವಿಡಿಯೊದಲ್ಲಿ ಸೆರೆ

ದೆಹಲಿ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ವಿಡಿಯೊದಲ್ಲಿ ಬೈಕ್ ಸವಾರರೊಬ್ಬರು ಇಟ್ಟಿಗೆಯನ್ನು ಕಾರು ಚಾಲಕನ ಸೀಟಿನ ಕಿಟಕಿಯತ್ತ ಎಸೆದು ಗಾಜು ಒಡೆದು ಚಾಲಕನ್ನು ಹೊರ ಎಳೆದಿದ್ದಾನೆ. ಇತರೆ ಪ್ರಯಾಣಿಕರು ತಮ್ಮ ವಾಹನಗಳಿಂದ ಇಳಿದು ಚಾಲಕನ ಮೇಲೆ ದಾಳಿ ನಡೆಸುವುದನ್ನು ಕಾಣಬಹುದು. ಆದಾಗ್ಯೂ, ಘಟನೆಯ ದಿನಾಂಕ ಮತ್ತು ನಿಖರವಾದ ಸ್ಥಳವನ್ನು ದೃಢೀಕರಿಸಲಾಗಿಲ್ಲ.

ದೆಹಲಿ: ಬೈಕ್​​​ಗೆ ಡಿಕ್ಕಿ ಹೊಡೆದ ಕಾರನ್ನು ಹಿಂಬಾಲಿಸಿದ ಬೈಕ್ ಸವಾರರು; ಹಿಟ್ ಆ್ಯಂಡ್ ರನ್ ಘಟನೆ ವಿಡಿಯೊದಲ್ಲಿ ಸೆರೆ
ದೆಹಲಿ ಹೆದ್ದಾರಿಯಲ್ಲಿ ನಡೆದ ಹಿಟ್ ಆ್ಯಂಡ್ ರನ್ ಘಟನೆ ವಿಡಿಯೊ
Follow us
ರಶ್ಮಿ ಕಲ್ಲಕಟ್ಟ
|

Updated on:Mar 27, 2024 | 1:09 PM

ದೆಹಲಿ ಮಾರ್ಚ್ 27: ದೆಹಲಿ (Delhi) ಹೆದ್ದಾರಿಗಳಲ್ಲಿ ಅಜಾಗರೂಕ ವಾಹನ ಚಾಲನೆ ಮತ್ತು ಸಂಚಾರ ನಿಯಮಗಳ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೊದಲ್ಲಿ ದೆಹಲಿ ಹೆದ್ದಾರಿಯಲ್ಲಿ ನಡೆದ ಹಿಟ್ ಆ್ಯಂಡ್ ರನ್ (Hit and Run) ಘಟನೆಯನ್ನು ಕಾಣಬಹುದು.’paganhindu ಎಂಬ ಎಕ್ಸ್ ಹ್ಯಾಂಡಲ್ ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ. ಬೈಕ್ ಸವಾರರು ಶೂಟ್ ಮಾಡಿದ ವಿಡಿಯೊ ಇದಾಗಿದ್ದು, ಕಾರೊಂದು ಬೈಕ್​​​ಗೆ ಡಿಕ್ಕಿ ಹೊಡೆದು ಹೋಗುತ್ತಿರುವುದು, ಆ ಕಾರನ್ನು ಹಿಂಬಾಲಿಸಿ ಬೈಕ್ ಸವಾರರು ಹೋಗಿ ಅದನ್ನು ಅಡ್ಡಗಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ವರದಿಗಳ ಪ್ರಕಾರ, ವಿಡಿಯೊವನ್ನು ರೆಕಾರ್ಡ್ ಮಾಡುವ ಮೊದಲು ಕಾರ್ ಡ್ರೈವರ್ ಬೈಕ್​​​ಗೆ ಡಿಕ್ಕಿ ಹೊಡೆದಿದ್ದು ನಂತರ ಬೈಕ್ ಸವಾರರು ಆತನನ್ನು  ಚೇಸ್ ಮಾಡಿದ್ದಾರೆ. ದೃಶ್ಯಗಳಲ್ಲಿ, ಕಾರು ಚಾಲಕ ಹೆದ್ದಾರಿಯಲ್ಲಿ ಲೇನ್ ಬದಲಾಯಿಸಿ ಇನ್ನೊಬ್ಬ ಬೈಕರ್‌ಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ನಂತರ ಆತನನ್ನು ಹಿಂಬಾಲಿಸಿದ ಬೈಕ್ ಸವಾರರು ಕಾರು ಚಾಲಕನನ್ನು ಅಡ್ಡಗಟ್ಟಿ ನಿಲ್ಲಿಸಿ, ಆತನನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ

ಬೈಕ್ ಸವಾರರೊಬ್ಬರು ಇಟ್ಟಿಗೆಯನ್ನು ಕಾರು ಚಾಲಕನ ಸೀಟಿನ ಕಿಟಕಿಯತ್ತ ಎಸೆದು ಗಾಜು ಒಡೆದು ಚಾಲಕನ್ನು ಹೊರ ಎಳೆದಿದ್ದಾನೆ. ಇತರೆ ಪ್ರಯಾಣಿಕರು ತಮ್ಮ ವಾಹನಗಳಿಂದ ಇಳಿದು ಚಾಲಕನ ಮೇಲೆ ದಾಳಿ ನಡೆಸುವುದನ್ನು ಕಾಣಬಹುದು. ಆದಾಗ್ಯೂ, ಘಟನೆಯ ದಿನಾಂಕ ಮತ್ತು ನಿಖರವಾದ ಸ್ಥಳವನ್ನು ದೃಢೀಕರಿಸಲಾಗಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬೈಕ್ ಸವಾರರ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಡಿಕ್ಕಿಯಾಗುವ ಮೊದಲು ಕಾರು ಚಾಲಕನ ಅನುಮಾನಾಸ್ಪದ ವರ್ತನೆಯನ್ನು, ಹಠಾತ್ ಲೇನ್ ಬದಲಾವಣೆಗೆ ಬೈಕ್ ಸವಾರರನ್ನು ದೂಷಿಸಿದರು. ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು “ಬೈಕ್ ಸವಾರರು ಇಲ್ಲಿ ಸಂಪೂರ್ಣವಾಗಿ ತಪ್ಪು ಮಾಡಿದ್ದಾರೆ. ಹಠಾತ್ತಾಗಿ ಲೇನ್‌ಗಳನ್ನು ಬದಲಾಯಿಸಬೇಡಿ,ಅದು ಡಿಕ್ಕಿ ಹೊಡೆಯುವಂತೆ ಮಾಡುತ್ತದೆ ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರರು ವಿಡಿಯೊದಲ್ಲಿರುವ ಕಾರ್ ಡ್ರೈವರ್ ಈಗಾಗಲೇ ವಿಡಿಯೊಗೆ ಮುಂಚೆಯೇ ಇತರ  ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅವನು ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಆ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ ಎಂದಿದ್ದಾರೆ. ಆದಾಗ್ಯೂ ಇನ್ನೂ ಕೆಲವರು ಬೈಕ್ ಸವಾರರು ಮತ್ತು ಕಾರು ಚಾಲಕನ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Lok Sabha Election: ಮಹಾರಾಷ್ಟ್ರದಲ್ಲಿ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಠಾಕ್ರೆ ನೇತೃತ್ವದ ಶಿವಸೇನೆ

“ಬೈಕರ್ ಇದ್ದಕ್ಕಿದ್ದಂತೆ ಕಾರಿನ ಮಾರ್ಗಕ್ಕೆ ಲೇನ್ ಅನ್ನು ಬದಲಾಯಿಸಿದಂತಿದೆ. ಸಮಯಕ್ಕೆ ಕಾರಿಗೆ ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ. ಮೊದಲ ನೋಟದಲ್ಲಿ ಇದು ಬೈಕ್ ಸವಾರನ ತಪ್ಪಿನಂತೆ ಕಾಣುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಳವಳ ವ್ಯಕ್ತಪಡಿಸುತ್ತಾ, “ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವ ಮೊದಲೇ ಕಾರ್ ಡ್ರೈವರ್ ಏನೋ ತಪ್ಪು ಮಾಡಿ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ ಹಾಗೆ ತೋರುತ್ತಿದೆ ಏಕೆ?” ಎಂದು ಕೇಳಿದ್ದಾರೆ. ಕೆಲವರು ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಒತ್ತಿ ಹೇಳಿದರು.

“ಬೈಕಿನ ನಂಬರ್ ನೋಟ್ ಮಾಡಿಕೊಳ್ಳಿ.ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಅವರು ತುರ್ತು ಪರಿಸ್ಥಿತಿಯಲ್ಲಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Wed, 27 March 24

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ