Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Election: ಮಹಾರಾಷ್ಟ್ರದಲ್ಲಿ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಠಾಕ್ರೆ ನೇತೃತ್ವದ ಶಿವಸೇನೆ

ಮುಣಬರಲಿರುವ ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅಭ್ಯರ್ಥಿಗಳನ್ನು ಘೋಷಿಸಿದೆ. ಉದ್ಧವ್ ಠಾಕ್ರೆ ಅವರ ಪಕ್ಷದ 17 ಲೋಕಸಭಾ ಅಭ್ಯರ್ಥಿಗಳಲ್ಲಿ ದೇಸಾಯಿ ಹೊರತುಪಡಿಸಿ, ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಮತ್ತು ಅರವಿಂದ್ ಸಾವಂತ್ ಪ್ರಮುಖ ಹೆಸರುಗಳಲ್ಲಿದ್ದಾರೆ. ಪಕ್ಷದ ಸಂಸದ ಗಜಾನನ ಕೀರ್ತಿಕರ್ ಅವರ ಪುತ್ರ ಅಮೋಲ್ ಕೀರ್ತಿಕರ್ ಅವರನ್ನೂ ಲೋಕಸಭೆ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

Lok Sabha Election: ಮಹಾರಾಷ್ಟ್ರದಲ್ಲಿ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಠಾಕ್ರೆ ನೇತೃತ್ವದ ಶಿವಸೇನೆ
ಉದ್ಧವ್ ಠಾಕ್ರೆ
Follow us
ನಯನಾ ರಾಜೀವ್
|

Updated on: Mar 27, 2024 | 10:49 AM

ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭೆ ಚುನಾವಣೆ(Lok Sabha Election)ಗೆ ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನಾ(Shiv Sena) ಬಣವು ಬುಧವಾರ 17 ಅಭ್ಯರ್ಥಿಗಳನ್ನು ಘೋಷಿಸಿದೆ. ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಹಿರಿಯ ನಾಯಕ ಅನಿಲ್ ದೇಸಾಯಿ ಅವರ ಹೆಸರನ್ನು ಮೊದಲೇ ಘೋಷಿಸಲಾಗಿತ್ತು.

ಉದ್ಧವ್ ಠಾಕ್ರೆ ಅವರ ಪಕ್ಷದ 17 ಲೋಕಸಭಾ ಅಭ್ಯರ್ಥಿಗಳಲ್ಲಿ ದೇಸಾಯಿ ಹೊರತುಪಡಿಸಿ, ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಮತ್ತು ಅರವಿಂದ್ ಸಾವಂತ್ ಪ್ರಮುಖ ಹೆಸರುಗಳಲ್ಲಿದ್ದಾರೆ. ಪಕ್ಷದ ಸಂಸದ ಗಜಾನನ ಕೀರ್ತಿಕರ್ ಅವರ ಪುತ್ರ ಅಮೋಲ್ ಕೀರ್ತಿಕರ್ ಅವರನ್ನೂ ಲೋಕಸಭೆ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

ಮುಂಬೈ ದಕ್ಷಿಣ ಮಧ್ಯ ಲೋಕಸಭೆ ಕ್ಷೇತ್ರದಲ್ಲಿ ಅನಿಲ್ ದೇಸಾಯಿ ಅಭ್ಯರ್ಥಿಯಾಗಿ, ವಾಯುವ್ಯ ಮುಂಬೈನಲ್ಲಿ ಅಮೋಲ್ ಕೀರ್ತಿಕರ್ ಮತ್ತು ದಕ್ಷಿಣ ಮುಂಬೈನಲ್ಲಿ ಅರವಿಂದ್ ಸಾವಂತ್ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

ಶಿವಸೇನಾ (UBT) ಲೋಕಸಭೆಯ ಅಭ್ಯರ್ಥಿಗಳು ಅರವಿಂದ್ ಸಾವಂತ್ – ದಕ್ಷಿಣ ಮುಂಬೈ ಅಮೋಲ್ ಕೀರ್ತಿಕರ್ – ವಾಯುವ್ಯ ಮುಂಬೈ ಸಂಜಯ್ ದಿನ ಪಾಟೀಲ್ – ಈಶಾನ್ಯ ಮುಂಬೈ ಅನಿಲ್ ದೇಸಾಯಿ – ದಕ್ಷಿಣ ಮಧ್ಯ ಮುಂಬೈ ಅನಂತ್ ಗೀತೆ – ರಾಯಗಡ

ವಿನಾಯಕ್ ರಾವತ್ – ರತ್ನಗಿರಿ ಸಿಂಧುದುರ್ಗ

ಭೌಸಾಹೇಬ್ ವಾಕ್ಚೌರೆ – ಶಿರಡಿ

ಚಂದ್ರಹರ ಪಾಟೀಲ್ – ಸಾಂಗ್ಲಿ

ಸಂಜಯ್ ಜಾಧವ್ – ಪರ್ಭಾನಿ

ಸಂಜೋಗ್ ವಾಘೆರೆ – ಮಾವಲ್

ಬುಲ್ಧಾನ – ನರೇಂದ್ರ ಖೇಡೇಕರ್

ನಾಗೇಶ ಪಾಟೀಲ ಅಷ್ಟಿಕರ್ – ಹಿಂಗೋಳಿ

ಸಂಜಯ್ ದೇಶಮುಖ್ – ಯವತ್ಮಲ್ ವಾಶಿಮ್

ಓಂರಾಜೆ ನಿಂಬಾಳ್ಕರ್ – ಧಾರಶಿವ್

ಚಂದ್ರಕಾಂತ್ ಖೈರೆ – ಛತ್ರಪತಿ ಸಂಭಾಜಿನಗರ

ರಾಜಭೌ ವಾಜೆ – ನಾಸಿಕ್

ರಾಜನ್ ವಿಚಾರೆ – ಥಾಣೆ

ಮತ್ತಷ್ಟು ಓದಿ: ನಮ್ಮನ್ನು ಏಕೆ ಅನರ್ಹಗೊಳಿಸಿಲ್ಲ?: ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿದ ಉದ್ದವ್ ಠಾಕ್ರೆ

ಮಹಾರಾಷ್ಟ್ರದ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆ ಒಪ್ಪಂದವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಎಂವಿಎ 44 ಕ್ಷೇತ್ರಗಳಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ, ಉಳಿದ ನಾಲ್ಕು ಸ್ಥಾನಗಳನ್ನು ನಿರ್ಧರಿಸಲಾಗಿಲ್ಲ ಮತ್ತು ಇನ್ನೂ ಚರ್ಚೆಗಳು ನಡೆಯುತ್ತಿವೆ.

ಅಂತಿಮಗೊಂಡ 44 ಸ್ಥಾನಗಳಲ್ಲಿ ಶಿವಸೇನೆ 19, ಕಾಂಗ್ರೆಸ್ 16 ಮತ್ತು ಶರದ್ ಪವಾರ್ ಅವರ ಎನ್‌ಸಿಪಿ 9 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಏತನ್ಮಧ್ಯೆ, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಪಕ್ಷವು 22 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದ ಕ್ಷೇತ್ರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿದ್ದು, ಏಪ್ರಿಲ್ 19 ರಿಂದ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ಐದು ಸ್ಥಾನಗಳಿಗೆ ನಡೆಯಲಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು 8 ಕ್ಷೇತ್ರಗಳಿಗೆ ನಡೆಯಲಿದೆ. ಇದಲ್ಲದೇ ಮೂರನೇ ಹಂತದಲ್ಲಿ ಮೇ 7 ರಂದು 11 ಕ್ಷೇತ್ರಗಳಿಗೆ ಹಾಗೂ ನಾಲ್ಕನೇ ಹಂತದಲ್ಲಿ 11 ಕ್ಷೇತ್ರಗಳಿಗೆ ಮೇ 13 ರಂದು ಮತದಾನ ನಡೆಯಲಿದೆ. ಅಲ್ಲದೆ, ಐದನೇ ಹಂತದಲ್ಲಿ ಮೇ 20 ರಂದು 13 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!