ನಮ್ಮನ್ನು ಏಕೆ ಅನರ್ಹಗೊಳಿಸಿಲ್ಲ?: ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿದ ಉದ್ದವ್ ಠಾಕ್ರೆ

ಸುಪ್ರೀಂ ಕೋರ್ಟ್‌ನ ಸಂಕ್ಷಿಪ್ತ ನಿರ್ಣಯವನ್ನು ಮೀರಿದ ನಿರ್ಧಾರವನ್ನು ಅವರು ನೀಡಿದ್ದಾರೆ. ನ್ಯಾಯಾಲಯವು ಒಂದು ಚೌಕಟ್ಟನ್ನು ನೀಡಿತ್ತು, ಆದರೆ ಅವರು ಅದನ್ನು ವಿರೂಪಗೊಳಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್‌ಗಿಂತ ಮೇಲಿದ್ದಾರೆ ಎಂದು ಅವರು ಭಾವಿಸುತ್ತಾರೆ. ನ್ಯಾಯಾಧಿಕರಣವು ನ್ಯಾಯಾಲಯಕ್ಕಿಂತ ಮೇಲೆ ಹೇಗೆ ಇರುತ್ತದೆ? ಅವರು ಪಕ್ಷಾಂತರ ವಿರುದ್ಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಮಾಡಬೇಕಾಗಿತ್ತು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ನಮ್ಮನ್ನು ಏಕೆ ಅನರ್ಹಗೊಳಿಸಿಲ್ಲ?: ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿದ ಉದ್ದವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
ರಶ್ಮಿ ಕಲ್ಲಕಟ್ಟ
|

Updated on:Jan 10, 2024 | 9:00 PM

ಮುಂಬೈ ಜನವರಿ 10: ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde )ನೇತೃತ್ವದ ಶಿವಸೇನಾ (Shiv Sena) ಬಣವನ್ನು ನಿಜವಾದ ಪಕ್ಷ ಎಂದು ಘೋಷಿಸಿದ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್  (Rahul Narwkar) ನಿರ್ಧಾರವು “ಸುಪ್ರೀಂ ಕೋರ್ಟ್‌ಗೆ ಅವಮಾನ ಮತ್ತು ಪ್ರಜಾಪ್ರಭುತ್ವದ ಕೊಲೆಯಾಗಿದೆ” ಎಂದು ಉದ್ಧವ್ ಠಾಕ್ರೆ (Uddhav Thackeray) ಬುಧವಾರ ಹೇಳಿದ್ದಾರೆ. ಸ್ಪೀಕರ್  ತೀರ್ಪು ಪ್ರಕಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ತಮ್ಮ ಶಿವಸೇನಾ ಯುಬಿಟಿ ಬಣ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಿದೆ ಎಂದಿದ್ದಾರೆ.

ನಾರ್ವೇಕರ್ ಅವರನ್ನು ಶಿಂಧೆ ಬಣವು ದುರುದ್ದೇಶದಿಂದ ಸ್ಥಳದಲ್ಲಿ ಇರಿಸಿದೆ ಎಂದು ಠಾಕ್ರೆ ಆರೋಪಿಸಿದರು. ನಾರ್ವೇಕರ್ ಅವರನ್ನು ಕೂರಿಸಿದ ರೀತಿ ನೋಡಿದರೆ, ಅವರು ಷಡ್ಯಂತ್ರ ನಡೆಸಿರುವುದು ಸ್ಪಷ್ಟವಾಗಿದೆ. ಇದು ಪ್ರಜಾಪ್ರಭುತ್ವವನ್ನು ಕೊಲ್ಲುವ ತಂತ್ರ ಎಂದು ನಾನು ನಿನ್ನೆ ನನ್ನ ಅನುಮಾನವನ್ನು ವ್ಯಕ್ತಪಡಿಸಿದ್ದೆ .ಸುಪ್ರೀಂ ಕೋರ್ಟ್ ನಿಂದನೆ ಪ್ರಕರಣ ಆಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಠಾಕ್ರೆ ಗುಡುಗಿದ್ದಾರೆ.

ನಾರ್ವೇಕರ್ ಇಂದು ಏಕನಾಥ್ ಶಿಂಧೆಯವರ ಬಣವನ್ನು “ನಿಜವಾದ ಶಿವಸೇನಾ” ಎಂದು ಹೇಳಿದ್ದಾರೆ. ಚುನಾವಣಾ ಆಯೋಗದ ಬಳಿ ಇರುವ ಪಕ್ಷದ ಸಂವಿಧಾನದ 1999 ರ ಆವೃತ್ತಿಯ ಮೇಲೆ ಅವರ ನಿರ್ಧಾರವನ್ನು ಆಧರಿಸಿದೆ. ಠಾಕ್ರೆ ಅವರು 2018 ರಲ್ಲಿ ನೀಡಿದ ಸಂವಿಧಾನದ ಆವೃತ್ತಿಯು “ದಾಖಲೆಯಲ್ಲಿಲ್ಲ” ಎಂದು ಅವರು ಹೇಳಿದರು.

ಆ ಸಂವಿಧಾನದ ಪ್ರಕಾರ, ಉದ್ಧವ್ ಠಾಕ್ರೆ ಅವರಿಗೆ ಶಿವಸೇನೆಯಿಂದ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕುವ ಅಧಿಕಾರವಿಲ್ಲ ಎಂದು ನಾರ್ವೇಕರ್ ಹೇಳಿದ್ದು, ಎರಡೂ ಬಣಗಳ ಅನರ್ಹತೆ ಅರ್ಜಿಗಳನ್ನು ಸ್ಪೀಕರ್ ವಜಾಗೊಳಿಸಿದರು. “ನಮ್ಮ ಸಂವಿಧಾನವು ಮಾನ್ಯವಾಗಿಲ್ಲದಿದ್ದರೆ, ನಮ್ಮನ್ನು ಏಕೆ ಅನರ್ಹಗೊಳಿಸಲಿಲ್ಲ” ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

ಅವರು (ಸ್ಪೀಕರ್) ಕಳ್ಳನನ್ನು ಸದನದ ಯಜಮಾನನನ್ನಾಗಿ ಮಾಡಿದ್ದಾರೆ. ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಏನು ವಹಿಸಿದೆ ಎಂಬುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ ಎಂದು ನನಗನಿಸುತ್ತದೆ ಎಂದಿದ್ದಾರೆ ಠಾಕ್ರೆ.

ಇದನ್ನೂ ಓದಿ: Sena Vs Sena Verdict: ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್

”ಸುಪ್ರೀಂ ಕೋರ್ಟ್‌ನ ಸಂಕ್ಷಿಪ್ತ ನಿರ್ಣಯವನ್ನು ಮೀರಿದ ನಿರ್ಧಾರವನ್ನು ಅವರು ನೀಡಿದ್ದಾರೆ. ನ್ಯಾಯಾಲಯವು ಒಂದು ಚೌಕಟ್ಟನ್ನು ನೀಡಿತ್ತು, ಆದರೆ ಅವರು ಅದನ್ನು ವಿರೂಪಗೊಳಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್‌ಗಿಂತ ಮೇಲಿದ್ದಾರೆ ಎಂದು ಅವರು ಭಾವಿಸುತ್ತಾರೆ. ನ್ಯಾಯಾಧಿಕರಣವು ನ್ಯಾಯಾಲಯಕ್ಕಿಂತ ಮೇಲೆ ಹೇಗೆ ಇರುತ್ತದೆ? ಅವರು ಪಕ್ಷಾಂತರ ವಿರುದ್ಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಮಾಡಬೇಕಾಗಿತ್ತು. ಬದಲಿಗೆ, ಅವರು ತನಗಾಗಿ ಒಂದು ಮಾರ್ಗವನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದರು ಎಂದ ಠಾಕ್ರೆ ನಾರ್ವೇಕರ್ ಹಲವು ಬಾರಿ ಪಕ್ಷಗಳನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಶಿಂಧೆ ಗುಂಪು ಕಳೆದ ವರ್ಷ ಜೂನ್‌ನಲ್ಲಿ ಬಂಡಾಯವೆದ್ದು, ಬಿಜೆಪಿಯಿಂದ ಬೇರ್ಪಟ್ಟು ಸರ್ಕಾರ ರಚಿಸಿತ್ತು. ಕಳೆದ ವರ್ಷ ಮೇ 11 ರಂದು, ಶಿಂಧೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ, ಏಕೆಂದರೆ ಅವರು ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಆದರೆ ರಾಜ್ಯಪಾಲ ಬಿಎಸ್ ಕೋಶ್ಯಾರಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ನ್ಯಾಯಾಲಯ ಟೀಕಿಸಿದೆ. ಪಕ್ಷದೊಳಗಿನ ವಿವಾದವನ್ನು ಪರಿಹರಿಸಲು ವಿಶ್ವಾಸಮತ ಯಾಚನೆ ಮಾರ್ಗವಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 10 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ