ಮಣಿಪುರದಲ್ಲಿ ಗುಂಡಿನ ದಾಳಿ, ನಾಲ್ವರು ನಾಪತ್ತೆ, ಉಗ್ರರ ಕೈವಾಡ ಶಂಕೆ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ, ಬಿಷ್ಣುಪುರ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಿಷ್ಣುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ. ಬಂದೂಕುಗಳಿಂದ ಗುಂಡು ಹಾರಿಸುವ ಮೊದಲು ಆರು ಸುತ್ತಿನ ಮಾರ್ಟರ್ ಫೈರಿಂಗ್ ನಡೆದಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ನಾಪತ್ತೆಯಾದ ನಾಲ್ವರನ್ನು ಓಯಿನಮ್ ರೋಮೆನ್ ಮೈತಿ (45), ಅಹಾಂತೇಮ್ ದಾರಾ ಮೈತಿ (56), ತೌಡಮ್ ಇಬೊಮ್ಚಾ ಮೈತಿ (53) ಮತ್ತು ತೌದಮ್ ಆನಂದ್ ಮೈತಿ (27) ಎಂದು ಗುರುತಿಸಲಾಗಿದೆ. ಘಟನೆಯ ನಂತರ ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ.
ಇದಕ್ಕೂ ಮೊದಲು ಜನವರಿ 1 ರಂದು ತೌಬಲ್‌ನ ಲಿಲಾಂಗ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮತ್ತು ಸ್ಥಳೀಯರ ನಡುವೆ ಘರ್ಷಣೆಗಳು ನಡೆದಿತ್ತು . ಪೊಲೀಸರ ಪ್ರಕಾರ, ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ, ಇದು ಇದುವರೆಗೆ 180 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಮತ್ತಷ್ಟು ಓದಿ: Manipur violence: ಮಣಿಪುರದ 5 ಜಿಲ್ಲೆಗಳಲ್ಲಿ ಕರ್ಫ್ಯೂ ವಾಪಸ್, ಇತರ ಜಿಲ್ಲೆಗಳಲ್ಲಿ ಕೆಲವು ಗಂಟೆಗಳ ಕಾಲ ಸಡಿಲಿಕೆ
ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಆಯೋಜಿಸಿದ ನಂತರ ಘರ್ಷಣೆಗಳು ಭುಗಿಲೆದ್ದವು. ಹಿಂಸಾಚಾರದ ಮೊದಲು ಕುಕಿ ಗ್ರಾಮಸ್ಥರನ್ನು ಮೀಸಲು ಅರಣ್ಯ ಭೂಮಿಯಿಂದ ಹೊರಹಾಕುವ ಉದ್ವಿಗ್ನತೆ ಉಂಟಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ