ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದರ ನಿಧನಕ್ಕೆ ಆರ್ಎಸ್ಎಸ್ ಸಂತಾಪ
ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ(Swami Smaranananda) ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಸಂತಾಪ ವ್ಯಕ್ತಪಡಿಸಿದೆ. ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ(Swami Smaranananda) ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಸಂತಾಪ ವ್ಯಕ್ತಪಡಿಸಿದೆ. ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಳಿಕ ಶ್ರೇಷ್ಠ ಮತ್ತು ಸ್ಫೂರ್ತಿದಾಯಕ ಸಂಪ್ರದಾಯದಲ್ಲಿ ಮಿಷನ್ ಹಾಗೂ ಮಠವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ನೆನಪಿಸಿಕೊಂಡರು. ರಾಮಕೃಷ್ಣ ಮಠದ ಮಹತ್ಕಾರ್ಯ ನಿರಂತರವಾಗಿ ಬೆಳೆಯಲಿ ಎಂದು ಹಾರೈಸಿದರು. ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಸ್ವಾಮಿ ಸ್ಮರಣಾನಂದರು 1929ರಲ್ಲಿ ತಮಿಳುನಾಡಿನ ತಾಂಜಾವೂರು ಜಿಲ್ಲೆಯ ಅಂಡಮಿ ಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. 1946ರಲ್ಲಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಾಸಿಕ್ನಿಂದ ವಾಣಿಜ್ಯದಲ್ಲಿ ಡಿಪ್ಲೊಮಾ ಮಾಡಿದರು. 1949ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು.
ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರೇರಿತರಾಗಿ ಮುಂಬೈನ ರಾಮಕೃಷ್ಣ ಮಿಷನ್ಗೆ ಸೇರಿದರು. 1952ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಸ್ವಾಮಿಗಳು ಶಂಕರಾನಂದರಿಂದ ಧೀಕ್ಷೆ ಪಡೆದರು. ಸ್ವಾಮಿ ಸ್ಮರಣಾನಂದರು 1956ರಲ್ಲಿ ಬ್ರಹ್ಮಚರ್ಯವನ್ನು ಸ್ವೀಕರಿಸಿದರು.
ಮತ್ತಷ್ಟು ಓದಿ: Swami Smaranananda Demise: ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ, ಪ್ರಧಾನಿ ಮೋದಿ ಸಂತಾಪ
1958ರಲ್ಲಿ ಅವರು ಅದ್ವೈತ ಆಶ್ರಮದ ಕೋಲ್ಕತ್ತಾ ಶಾಖೆಯನ್ನು ತಲುಪಿದರು, ಅದ್ವೈತ ಶ್ರಮದ ವಿವಿಧ ಶಾಖೆಗಳಲ್ಲಿ 18 ವರ್ಷಗಳ ಕಾಲ ಕೆಲಸ ಮಾಡಿದರು. ವಿವೇಕಾನಂದರು ಆರಂಭಿಸಿದ್ದ ಪ್ರಬುದ್ಧ ಭಾರತ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿ ಕೆಲವ ವರ್ಷಗಳ ಕಾಲ ಕೆಲಸ ಮಾಡಿದ್ದರು.
ಸುಮಾರು 15 ವರ್ಷಗಳ ಕಾಲ ಕಾಮಕೃಷ್ಣ ಮಿಷನ್ ಶರದಾಪೀಠದ ಕಾರ್ಯದರ್ಶಿಯಾಗಿದ್ದರು. 1983ರಲ್ಲಿ ಅವರು ರಾಮಕೃಷ್ಣ ಮಿಷನ್ನ ಆಡಳಿತ ಮಂಡಳಿಯ ಸದಸ್ಯರಾದರು. ಅವರು 1991ರಲ್ಲಿ ಚೆನ್ನೈನ ರಾಮಕೃಷ್ಣ ಮಿಷನ್ ಮುಖ್ಯಸ್ಥರಾಗಿ ನೇಮಕಗೊಂಡರು.
ರಾಮಕೃಷ್ಣ ಮಠ ಮತ್ತು ಧರ್ಮ ಪ್ರಚಾರದ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಅವರು ಇಹಲೋಕ ತ್ಯಜಿಸಿರುವ ಸುದ್ದಿ ಕೇಳಿ ರಾಮಕೃಷ್ಣ ಮಠದ ಅಸಂಖ್ಯಾತ ಭಕ್ತರು ತೀವ್ರ ದುಃಖಿತರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ