ಲೋಕಸಭಾ ಚುನಾವಣೆಯನ್ನು ಧರ್ಮಯುದ್ಧಕ್ಕೆ ಹೋಲಿಸಿದ ಶಿವಕುಮಾರ್ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು!
ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ಶಿವಕುಮಾರ್ ತಮ್ಮ ಇಷ್ಟದೇವರ ಮೊರೆಹೋಗುವ ಹಲವು ವಿಡಿಯೋಗಳನ್ನು ನಾವು ಆಗಾಗ ಬಿತ್ತರಿಸಿದ್ದೇವೆ. ಮಹಾನ್ ದೈವಭಕ್ತರಾಗಿರುವ ಶಿವಕುಮಾರ್ ಲೋಕಸಭಾ ಚುನಾವಣೆಯನ್ನು ಧರ್ಮಯುದ್ಧಕ್ಕೆ ಹೋಲಿಸುತ್ತಾರೆ
ಧರ್ಮಸ್ಥಳ: ರಾಜ್ಯದ ಉಪಮುಖ್ಯಮಂತ್ರಿ (deputy chief minister) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ಧರ್ಮಸ್ಥಳದ ಮಂಜುನಾಥನಿಗೆ (Manjunath) ಪೂಜೆ ಸಲ್ಲಿಸಿದರು. ಮಂಜುನಾಥನ ಸನ್ನಿಧಿಯಿಂದ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಧರ್ಮಯುದ್ದಕ್ಕೆ ಇಳಿಯುವ ಮೊದಲು ಧರ್ಮಸ್ಥಳ ಮಂಜನಾಥನ ದರ್ಶನ ಪಡೆದಿರುವುದಾಗಿ ಹೇಳಿದರು. ಮಾತು ಬಿಡದ ಮಂಜನಾಥ ಮತ್ತು ಕಾಸ ಬಿಡದ ತಿಮ್ಮಪ್ಪ ಅನ್ನುವ ಮಾತಿದೆ ಎಂದ ಶಿವಕುಮಾರ್ ತಮಗೆ ಮಂಜುನಾಥ, ಈಶ್ವರ ಮತ್ತು ಗಂಗಾಧರಜ್ಜನ ರಕ್ಷಣೆ ಸದಾ ಇದೆ ಎಂದು ಹೇಳಿದರು. ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ಶಿವಕುಮಾರ್ ತಮ್ಮ ಇಷ್ಟದೇವರ ಮೊರೆಹೋಗುವ ಹಲವು ವಿಡಿಯೋಗಳನ್ನು ನಾವು ಆಗಾಗ ಬಿತ್ತರಿಸಿದ್ದೇವೆ. ಮಹಾನ್ ದೈವಭಕ್ತರಾಗಿರುವ ಶಿವಕುಮಾರ್ ಲೋಕಸಭಾ ಚುನಾವಣೆಯನ್ನು ಧರ್ಮಯುದ್ಧಕ್ಕೆ ಹೋಲಿಸುತ್ತಾರೆ. ಧರ್ಮಯುದ್ದಕ್ಕೆ ಅಣಿಯಾಗುವ ಮೊದಲು ಮಂಜುನಾಥ, ಅಣ್ಣಪ್ಪಸ್ವಾಮಿಯ ದರ್ಶನಕ್ಕೆ ತೆರಳಿ, ಆಶೀರ್ವಾದ ಪಡೆಯುವುದು ತಾನು ಅನುಸರಿಸಿಕೊಂಡು ಬಂದಿರುವ ಪರಂಪರೆ ಮತ್ತು ಪದ್ಧತಿ ಎಂದು ಶಿವಕುಮಾರ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಆನೆ ಲತಾ