ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್(Jitendra Awhad) ವಿರುದ್ಧ ಅಯೋಧ್ಯೆಯ ಪರಮಹಂಸ ಆಚಾರ್ಯ ಕಿಡಿಕಾರಿದ್ದಾರೆ. ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಜಿತೇಂದ್ರನನ್ನು ನಾನೇ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಶ್ರೀರಾಮ ಕ್ಷತ್ರಿಯ ಆತ ಸಸ್ಯಾಹಾರಿಯಲ್ಲ, ಮಾಂಸಾಹಾರಿ ನಾವು ಅವರನ್ನೇ ಅನಸರಿಸುತ್ತಿದ್ದೇವೆ ಎಂದು ಜಿತೇಂದ್ರ ಹೇಳಿಕೆ ನೀಡಿದ್ದರು.
ಶ್ರೀರಾಮ ವನವಾಸಕ್ಕೆ ಹೋದಾಗ ಮಾಂಸಾಹಾರ ಸೇವನೆ ಮಾಡಿದ್ದಾನೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಜಿತೇಂದ್ರ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದಾರೆ. ಗಡ್ಡೆ, ಬೇರು, ಹಣ್ಣುಗಳನ್ನು ತಿಂದು ಬದುಕಿದ್ದರು ಎಂದು ಹಲವು ಗ್ರಂಥಗಳಲ್ಲಿ ಉಲ್ಲೇಖವಿದೆ.
ಈ ಹೇಳಿಕೆಯಿಂದ ರಾಮ ಭಕ್ತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ, ಜಿತೇಂದ್ರ ಅವ್ಹಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ, ಇಲ್ಲವಾದಲ್ಲಿ ಆತನನ್ನು ನಾನೇ ಹತ್ಯೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಓದಿ: ಶ್ರೀರಾಮ ಸಸ್ಯಾಹಾರಿಯಲ್ಲ, ಮಾಂಸಾಹಾರಿ: ಎನ್ಸಿಪಿ ನಾಯಕನ ವಿವಾದಾತ್ಮಕ ಹೇಳಿಕೆ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಮ್ ಕದಂ, ಇದು ಜಿತೇಂದ್ರ ಆವ್ಹಾದ್ ಅವರ ಹಾಸ್ಯಾಸ್ಪದ ಹೇಳಿಕೆಯಾಗಿದೆ, ಅವರು ಶ್ರೀರಾಮ ಕಾಡಿನಲ್ಲಿ ಏನು ತಿನ್ನುತ್ತಿದ್ದರು ಎಂಬುದನ್ನು ನೋಡಲು ಹೋಗಿದ್ದರೇ? 22ರಂದು ರಾಮ ಮಂದಿರದ ಅದ್ಧೂರಿ ಉದ್ಘಾಟನೆ ನಡೆಯುತ್ತಿರುವುದರಿಂದ ಈ ಜನರಿಗೆ ಹೊಟ್ಟೆನೋವು ಅಷ್ಟೆ, ಇಷ್ಟು ದೊಡ್ಡ ಹೇಳಿಕೆ ನೀಡಿದ ನಂತರವೂ ರಾಹುಲ್ ಗಾಂಧಿ ಮತ್ತು ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಖಿಲ ಭಾರತ ಸಂತ ಸಮಿತಿ, ಧರ್ಮ ಸಮಾಜದ ಮಹಾರಾಷ್ಟ್ರ ರಾಜ್ಯ ಮುಖ್ಯಸ್ಥ ಮಹಂತ್ ಅನಿಕೇತಶಾಸ್ತ್ರಿ ಮಾತನಾಡಿ, ಜಿತೇಂದ್ರ ಆವ್ಹಾದ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಶ್ರೀರಾಮನ ವಿರುದ್ಧ ಇದನ್ನೆಲ್ಲಾ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ