LPG Cylinder Price: ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಲಿಂಡರ್ ದರ ಇಷ್ಟಾಗಿದೆ

| Updated By: Digi Tech Desk

Updated on: Feb 25, 2021 | 2:32 PM

Domestic Gas Cylinder Price: ಕಳೆದ ಮೂರು ತಿಂಗಳಲ್ಲಿ ಪ್ರತಿ ಸಿಲಿಂಡರ್​ನ ಬೆಲೆ ಒಟ್ಟು ₹ 200 ಹೆಚ್ಚಾಗಿದೆ. ಡಿಸೆಂಬರ್ ತಿಂಗಳಲ್ಲಿ ₹ 100 ಹೆಚ್ಚಾಗಿತ್ತು. ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ.

LPG Cylinder Price: ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಲಿಂಡರ್ ದರ ಇಷ್ಟಾಗಿದೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ತೈಲ ಮಾರಾಟ ಕಂಪನಿಗಳು ಗುರುವಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ ₹ 25ರಷ್ಟು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ನ ಬೆಲೆ ₹ 794 ಮುಟ್ಟಿದೆ. ಬೆಲೆ ಏರಿಕೆಗೂ ಮುನ್ನ ಸಿಲಿಂಡರ್​ ಬೆಲೆ ₹ 769 ಇತ್ತು. ಫೆಬ್ರುವರಿ ತಿಂಗಳಲ್ಲಿ 3ನೇ ಬಾರಿಗೆ ಬೆಲೆ ಹೆಚ್ಚಿಸಲಾಗಿದೆ. ಫೆ.4ರಂದು ₹ 25, ಫೆ.15ರಂದು ₹ 50 ಹೆಚ್ಚಿಸಲಾಗಿತ್ತು. ಸಿಲಿಂಡರ್​ ಬೆಲೆಯು ಬೆಂಗಳೂರಿನಲ್ಲಿ ₹ 794 (₹ 679), ಕೊಲ್ಕತ್ತಾದಲ್ಲಿ ₹ 820 (₹ 795), ಮುಂಬೈನಲ್ಲಿ ₹ 794 (₹ 769), ಚೆನ್ನೈನಲ್ಲಿ ₹ 810 (₹ 785), ಹೈದರಾಬಾದ್​ನಲ್ಲಿ ₹ 846.50 (₹ 821.50) ಇದೆ. (ಆವರಣದಲ್ಲಿರುವುದು ಹಿಂದಿನ ದರ)

ಕಳೆದ ಮೂರು ತಿಂಗಳಲ್ಲಿ ಪ್ರತಿ ಸಿಲಿಂಡರ್​ನ ಬೆಲೆ ಒಟ್ಟು ₹ 200 ಹೆಚ್ಚಾಗಿದೆ. ಡಿಸೆಂಬರ್ ತಿಂಗಳಲ್ಲಿ ₹ 100 ಹೆಚ್ಚಾಗಿತ್ತು. ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದ ಈ ಸಿಲಿಂಡರ್ ಬೆಲೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಪೆಟ್ರೋಲ್-ಡೀಸೆಲ್ ಜೊತೆಗೆ ಸಿಲಿಂಡರ್ ಬರೆ
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್​ಡೌನ್​​ ಅವಧಿಯಲ್ಲಿ ತೈಲ ಬೆಲೆ ಯಾವುದೇ ಏರಿಳಿತ ಕಂಡಿರಲಿಲ್ಲ. ಆದರೆ, ಲಾಕ್​ಡೌನ್​ ಪೂರ್ಣಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಪೆಟ್ರೋಲ್​ ದರವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಲೀಟರ್ ಪೆಟ್ರೋಲ್​ ದರ ದೇಶಾದ್ಯಂತ 100 ರೂಪಾಯಿ ಸಮೀಪಕ್ಕೆ ಬಂದಿದೆ. ಈಗ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್​ಗೆ ₹ 25 ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರತಿ ಸಿಲಿಂಡರ್​ ಬೆಲೆ ₹ 25 ರೂಪಾಯಿ ಹೆಚ್ಚಾಗಲಿದೆ. 2020ರ ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ಜೂನ್​, ಜುಲೈನಲ್ಲಿ ಮತ್ತೆ ಏರಿಕೆ ಕಂಡಿದ್ದ ದರ, ನಂತರ ನಾಲ್ಕು ತಿಂಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ. 2020ರ ಡಿಸೆಂಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್​ ದರ 100 ರೂಪಾಯಿ ಏರಿಕೆ ಆಗಿತ್ತು. ಫೆಬ್ರುವರಿ ತಿಂಗಳಲ್ಲಿ ಈವರೆಗೆ ಮೂರು ಬಾರಿ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿದೆ.

ಪೆಟ್ರೋಲ್​ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗಲೇ ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಬಗ್ಗೆ ಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Tv9 Digital Live | ಪೆಟ್ರೋಲ್, ಡೀಸೆಲ್ ಬೆಲೆಗಳು ಏಕೆ ಒಂದೇ ಸಮನೆ ಏರುತ್ತಿವೆ?

Published On - 1:55 pm, Thu, 25 February 21