Ludhiana Blast: ತಪ್ಪಿತಸ್ಥರನ್ನು ಬಿಡುವ ಮಾತೇ ಇಲ್ಲ; ಲುಧಿಯಾನ ಕೋರ್ಟ್​ ಸ್ಫೋಟಕ್ಕೆ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಆಕ್ರೋಶ

| Updated By: ಸುಷ್ಮಾ ಚಕ್ರೆ

Updated on: Dec 23, 2021 | 2:46 PM

ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಇಂತಹ ಕೃತ್ಯಗಳ ಹಿಂದೆ ಈ ದೇಶವಿರೋಧಿಗಳು ಇರಬಹುದು. ತಪ್ಪಿತಸ್ಥರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

Ludhiana Blast: ತಪ್ಪಿತಸ್ಥರನ್ನು ಬಿಡುವ ಮಾತೇ ಇಲ್ಲ; ಲುಧಿಯಾನ ಕೋರ್ಟ್​ ಸ್ಫೋಟಕ್ಕೆ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಆಕ್ರೋಶ
ಚರಣ್​​ಜಿತ್ ಸಿಂಗ್ ಚನ್ನಿ
Follow us on

ಲುಧಿಯಾನ: ಪಂಜಾಬ್​ನ ಲುಧಿಯಾನ ಕೋರ್ಟ್​ ಕಾಂಪ್ಲೆಕ್ಸ್​ನ ಒಳಗೆ ದಿಢೀರಾಗಿ ಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ಚುನಾವಣೆ ನಡೆಯಲಿರುವ ಪಂಜಾಬ್‌ನ ಲುಧಿಯಾನ ಕೋರ್ಟ್​ ಕಾಂಪ್ಲೆಕ್ಸ್​ನಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ, ಲುಧಿಯಾನದಲ್ಲಿ ಸ್ಫೋಟ ಸಂಭವಿಸಿದೆ. ನಾನು ತುರ್ತಾಗಿ ಸಭೆಯನ್ನು ಮುಗಿಸಿ ಲೂಧಿಯಾನಕ್ಕೆ ಹೋಗುತ್ತೇನೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಮಾಡಿದವರನ್ನು ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ 12.22ರ ಸುಮಾರಿಗೆ ಲುಧಿಯಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ವಕೀಲರ ಮುಷ್ಕರ ನಡೆದಿದ್ದು, ಸ್ಫೋಟದ ವೇಳೆ ನ್ಯಾಯಾಲಯದ ಕಾಂಪ್ಲೆಕ್ಸ್​ನಲ್ಲಿ ಕೆಲವೇ ಜನರು ಇದ್ದರು. ಹೀಗಾಗಿ, ಇನ್ನಷ್ಟು ಜನರು ಈ ಸ್ಫೋಟಕ್ಕೆ ಬಲಿಯಾಗುವುದು ತಪ್ಪಿದಂತಾಗಿದೆ. ಬಾಂಬ್ ಸ್ಫೋಟದಲ್ಲಿ ಬಾತ್​ರೂಮಿನ ಗೋಡೆಗಳು ನೆಲಸಮಗೊಂಡಿದ್ದು, ಕಿಟಕಿಯ ಗಾಜು ಕೂಡ ಒಡೆದು ಹೋಗಿದೆ.

ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಇಂತಹ ಕೃತ್ಯಗಳ ಹಿಂದೆ ಈ ದೇಶವಿರೋಧಿಗಳು ಇರಬಹುದು. ತಪ್ಪಿತಸ್ಥರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಪಂಜಾಬ್ ಚುನಾವಣೆ ಹತ್ತಿರದಲ್ಲಿದೆ ಮತ್ತು ಇಂತಹ ಘಟನೆಗಳ ಬಗ್ಗೆ ಸರ್ಕಾರವು ಎಚ್ಚರವಾಗಿದೆ ಎಂದು ಸಿಎಂ ಚರಣ್​ಜಿತ್ ಸಿಂಗ್ ಹೇಳಿದ್ದಾರೆ.


ದುರಂತ ಘಟನೆಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಮತ್ತು ನಾನು ಲೂಧಿಯಾನಕ್ಕೆ ತೆರಳುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ.

ಹಾಗೇ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಇಬ್ಬರು ಸದಸ್ಯರ ತಂಡವು ಲುಧಿಯಾನದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಲು ಸಜ್ಜಾಗಿದೆ. ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ತಂಡವೂ ಸ್ಥಳಕ್ಕೆ ಧಾವಿಸಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕೂಡ ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ಕಳುಹಿಸಲಿದೆ. ಈ ಸ್ಫೋಟಕ್ಕೆ ಕಾರಣವೇನೆಂಬ ಬಗ್ಗೆ ಇನ್ನೂ ನಿಖರ ಕಾರಣ ಹಾಗೂ ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಖಚಿತವಾಗಿಲ್ಲ.

ಇದನ್ನೂ ಓದಿ: Pakistan Bomb Blast: ಪಾಕಿಸ್ತಾನದ ಕರಾಚಿಯಲ್ಲಿ ಕಾರ್ ಬಾಂಬ್ ಸ್ಫೋಟ; 10 ಜನ ಸಾವು, 13ಕ್ಕೂ ಹೆಚ್ಚು ಮಂದಿಗೆ ಗಾಯ

ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ