ಮಧ್ಯ ಪ್ರದೇಶ ಚುನಾವಣೆ; ಬಿಜೆಪಿ 2ನೇ ಪಟ್ಟಿಯಲ್ಲಿ ನರೇಂದ್ರ ಸಿಂಗ್ ತೋಮರ್ ಸೇರಿ ಮೂವರು ಕೇಂದ್ರ ಸಚಿವರಿಗೆ ಟಿಕೆಟ್!

BJP 2nd list for Madhya Pradesh Assembly election; ಅಚ್ಚರಿಯ ನಡೆಯಲ್ಲಿ ಬಿಜೆಪಿಯು ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವರು ಮತ್ತು ಸಂಸದರನ್ನು ತನ್ನ ಅಭ್ಯರ್ಥಿಗಳನ್ನಾಗಿ ಮಾಡಿದ್ದು, ಅದರಲ್ಲಿ ಮೂವರು ಕೇಂದ್ರ ಸಚಿವರಿಗೆ ಟಿಕೆಟ್ ನೀಡಿದೆ. ಇದಲ್ಲದೇ ಇನ್ನೂ 4 ಸಂಸದರನ್ನು ಕಣಕ್ಕಿಳಿಸಲಾಗಿದೆ. ಒಟ್ಟು 7 ಸಂಸದರಿಗೆ ಟಿಕೆಟ್ ನೀಡಲಾಗಿದೆ.

ಮಧ್ಯ ಪ್ರದೇಶ ಚುನಾವಣೆ; ಬಿಜೆಪಿ 2ನೇ ಪಟ್ಟಿಯಲ್ಲಿ ನರೇಂದ್ರ ಸಿಂಗ್ ತೋಮರ್ ಸೇರಿ ಮೂವರು ಕೇಂದ್ರ ಸಚಿವರಿಗೆ ಟಿಕೆಟ್!
ನರೇಂದ್ರ ಸಿಂಗ್ ತೋಮರ್
Follow us
Ganapathi Sharma
|

Updated on:Sep 25, 2023 | 9:58 PM

ನವದೆಹಲಿ, ಸೆಪ್ಟೆಂಬರ್ 25: ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Madhya Pradesh Assembly election) ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (BJP Candidate List) ಸೋಮವಾರ ಬಿಡುಗಡೆ ಮಾಡಿದೆ. ಈ ಬಾರಿಯೂ ಪಕ್ಷ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಬಿಜೆಪಿಯ ಈ ಪಟ್ಟಿಯಲ್ಲಿ ಹಲವು ಅಚ್ಚರಿಯ ಹೆಸರುಗಳು ಹೊರಹೊಮ್ಮಿವೆ. ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವರು ಮತ್ತು ಸಂಸದರನ್ನು ಪಕ್ಷವು ತನ್ನ ಅಭ್ಯರ್ಥಿಗಳನ್ನಾಗಿ ಮಾಡಿದ್ದು, ಅದರಲ್ಲಿ ಮೂವರು ಕೇಂದ್ರ ಸಚಿವರಿಗೆ ಟಿಕೆಟ್ ನೀಡಿದೆ. ಇದಲ್ಲದೇ ಇನ್ನೂ 4 ಸಂಸದರನ್ನು ಕಣಕ್ಕಿಳಿಸಲಾಗಿದೆ. ಒಟ್ಟು 7 ಸಂಸದರಿಗೆ ಟಿಕೆಟ್ ನೀಡಲಾಗಿದೆ.

ಎರಡನೇ ಪಟ್ಟಿಯಲ್ಲಿ 39 ಮಂದಿ ಪೈಕಿ 6 ಮಂದಿ ಮಹಿಳೆಯರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೇ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತರಾಗಿರುವ ಇಮಾರ್ತಿ ದೇವಿ ಅವರಿಗೂ ಟಿಕೆಟ್ ಸಿಕ್ಕಿದೆ. ದಾಬ್ರಾ ವಿಧಾನಸಭಾ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಅವರು ಸೋತಿದ್ದರು. ‘ಇಂದೋರ್‌ 1’ ಕ್ಷೇತ್ರದಿಂದ ಕೈಲಾಶ್ ವಿಜಯವರ್ಗಿಯಾ ಅವರನ್ನು ಕಣಕ್ಕಿಳಿಸಲಾಗಿದೆ.

ಕೈಲಾಶ್ ವಿಜಯವರ್ಗಿಯ ಅವರ ಮಗ ಆಕಾಶ್ ವಿಹವರ್ಗಿಯ ‘ಇಂದೋರ್‌ 3’ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಸಂಸದ ಗಣೇಶ್ ಮಂತ್ರಿ, ಸಂಸದ ರಾಕೇಶ್ ಸಿಂಗ್ ಮತ್ತು ಸಂಸದೆ ರೀತಿ ಪಾಠಕ್ ಅವರಿಗೂ ಟಿಕೆಟ್ ನೀಡಲಾಗಿದೆ. ವಿವೇಕ್ ಬಂಟಿ ಸಾಹು ಅವರನ್ನು ಕಮಲ್ ನಾಥ್ ವಿರುದ್ಧ ಚಿಂದ್ವಾರದಿಂದ ಕಣಕ್ಕಿಳಿಸಲಾಗಿದೆ. ಈ ಹಿಂದೆ ಬಿಜೆಪಿ ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದುವರೆಗೆ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 76 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಈ ಕೇಂದ್ರ ಸಚಿವರು ಮತ್ತು ಸಂಸದರಿಗೆ ಬಿಜೆಪಿ ಟಿಕೆಟ್

  • ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್
  • ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್
  • ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ
  • ಸಂಸದ ಗಣೇಶ್ ಸಿಂಗ್
  • ಸಂಸದ ರಾಕೇಶ್ ಸಿಂಗ್
  • ಸಂಸದೆ ರೀತಿ ಪಾಠಕ್
  • ಸಂಸದ ಉದಯ್ ಪ್ರತಾಪ್ ಸಿಂಗ್

ಜಬಲ್‌ಪುರ ಪಶ್ಚಿಮ ಕ್ಷೇತ್ರದಿಂದ ರಾಕೇಶ್‌ ಸಿಂಗ್‌ಗೆ ಏಕೆ ಟಿಕೆಟ್?

ಸಂಸದ ಮತ್ತು ಲೋಕಸಭೆಯ ಮುಖ್ಯ ಸಚೇತಕ ರಾಕೇಶ್ ಸಿಂಗ್ ಅವರನ್ನು ಜಬಲ್ಪುರದ ಪಶ್ಚಿಮ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇದು ಕಾಂಗ್ರೆಸ್‌ನ ಪ್ರಬಲ ಕ್ಷೇತ್ರ. ಸತತ ಎರಡು ಚುನಾವಣೆಗಳಲ್ಲಿ ಬಿಜೆಪಿ ಪಶ್ಚಿಮ ಕ್ಷೇತ್ರವನ್ನು ಕಳೆದುಕೊಳ್ಳುತ್ತಿದೆ. ಮಾಜಿ ಹಣಕಾಸು ಸಚಿವ ತರುಣ್ ಭಾನೋಟ್ ಈ ಕ್ಷೇತ್ರದ ಶಾಸಕರಾಗಿದ್ದಾರೆ. ರಾಕೇಶ್ ಸಿಂಗ್ ಜಬಲ್ಪುರದಿಂದ ನಾಲ್ಕು ಬಾರಿ ಸಂಸದರಾಗಿದ್ದಾರೆ. ವಿಡಿ ಶರ್ಮಾ ಅವರಿಗಿಂತ ಮೊದಲು ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ವಿವೇಕ್ ಟಂಖಾ ಸೋಲನುಭವಿಸಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೆಗಾ ರ‍್ಯಾಲಿ: ಎಲ್ಲಾ ಖಾತರಿಗಳನ್ನು ಪೂರೈಸುವ ಭರವಸೆ ನೀಡಿದ ಪ್ರಧಾನಿ ಮೋದಿ

ನರಸಿಂಗಪುರ ಕ್ಷೇತ್ರದಿಂದ ಪ್ರಹ್ಲಾದ್ ಸಿಂಗ್ ಪಟೇಲ್

ನರಸಿಂಗ್‌ಪುರ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಪ್ರಸ್ತುತ ಈ ಕ್ಷೇತ್ರದಿಂದ ಜಲಮ್ ಸಿಂಗ್ ಪಟೇಲ್ ಶಾಸಕರಾಗಿದ್ದಾರೆ. ಜಲಮ್ ಸಿಂಗ್ ಪ್ರಹ್ಲಾದ್ ಪಟೇಲ್ ಅವರ ಕಿರಿಯ ಸಹೋದರ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Mon, 25 September 23