ಮಧ್ಯಪ್ರದೇಶ: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಿಂದ (Kuno National Park) ಸುಮಾರು 20 ಕಿಮೀ ದೂರದಲ್ಲಿರುವ ಝಾರ್ ಬರೋಡಾ ಗ್ರಾಮದ ಪಕ್ಕದ ಕೃಷಿ ಜಮೀನಿಗೆ ಚೀತಾ (Cheetah) ಒಂದು ಭಾನುವಾರ ನುಗ್ಗಿದೆ. ಅರಣ್ಯ ಪ್ರದೇಶ ಬಿಟ್ಟು ಚೀತಾ ಗ್ರಾಮಕ್ಕೆ ನುಗ್ಗಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಚಾರ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿರುವ ನಿಗಾವಣಾ ತಂಡವು ಒಬಾನ್ ಎಂಬ ಹೆಸರಿನ ಚೀತಾವನ್ನು ಮರಳಿ ಅರಣ್ಯಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಆ ಪೈಕಿ ಒಬಾನ್ ಕೂಡ ಒಂದು. ಮಾರ್ಚ್ 11ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿತ್ತು ಎಂದು ಶಿಯೋಪುರ್ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಪಿ.ಕೆ.ವರ್ಮಾ ಹೇಳಿದ್ದಾರೆ.
ಚೀತಾದ ಕೊರಳಿಗೆ ಹಾಕಿರುವ ಸಾಧನದಿಂದ ಬಂದ ಸಂಕೇತಗಳ ಪ್ರಕಾರ, ಚೀತಾ ಶನಿವಾರ ರಾತ್ರಿಯಿಂದ ಗ್ರಾಮದ ಕಡೆಗೆ ನುಗ್ಗಿದ್ದು, ಸ್ಥಳದಲ್ಲಿಯೇ ಭೇಟಿ ಕಾದುಕುಳಿತಿದೆ. ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಚೀತಾವಿರುವ ಪ್ರದೇಶದಿಂದ ಗ್ರಾಮಸ್ಥರಿಗೆ ನಿರ್ಬಂಧ ವಿಧಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚೀತಾವನ್ನು ಮತ್ತೆ ಉದ್ಯಾನವನ ಪ್ರದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Sheopur, Madhya Pradesh | Cheetah Oban, one of the cheetahs brought from Namibia, entered Jhar Baroda village of Vijaypur which is 20 kms away from Kuno National Park. Monitoring team has also reached the village. Efforts are underway to bring the cheetah back: DFO
(Video… pic.twitter.com/4iQAoB6tcz
— ANI MP/CG/Rajasthan (@ANI_MP_CG_RJ) April 2, 2023
ಇದನ್ನೂ ಓದಿ: Uttarakhand: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಬಸ್, 22 ಮಂದಿಗೆ ಗಂಭೀರ ಗಾಯ
ಸದ್ಯ ಒಬಾನ್ನನ್ನು ಮತ್ತೆ ಕಾಡಿಗೆ ಕರೆತರಲು ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿರುವಂತಹ ವಿಡಿಯೋ ಒಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 8 ಚೀತಾಗಳಲ್ಲಿ, 4 ಚೀತಾಗಳನ್ನು ಬೇಟೆಯಾಡುವ ಆವರಣಗಳಿಂದ ಮುಕ್ತ ವ್ಯಾಪ್ತಿಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿತ್ತು. ಚೀತಾ ಸಂತತಿ ಉಳಿವಿಗಾಗಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಕೆಎನ್ಪಿಗೆ ತರಲಾಗಿದೆ.
ಇದನ್ನೂ ಓದಿ: Viral Video: ಪಿಸ್ತೂಲಿನಿಂದ ಕೇಕ್ ಕಟ್ ಮಾಡಿ ಹುಟ್ಟು ಹಬ್ಬದಂದೇ ಜೈಲು ಸೇರಿದ ವ್ಯಕ್ತಿ
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ವಿಶೇಷ ಆವರಣಗಳಲ್ಲಿ ಬಿಡುಗಡೆ ಮಾಡಿದ್ದರು. ಸಿಯಾಯಾ ಎಂಬ ಮತ್ತೊಂದು ಹೆಣ್ಣು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು ಮಾರ್ಚ್ 29 ರಂದು ಮೊದಲ ಬಾರಿಗೆ ತಿಳಿದುಬಂದಿತ್ತು. ಇದಕ್ಕೂ ಮುನ್ನ ಮಾರ್ಚ್ 27 ರಂದು ಸಾಶಾ ಎಂದು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಈ ವರ್ಷದ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ 7 ಗಂಡು ಮತ್ತು 5 ಹೆಣ್ಣು ಚೀತಾಗಳನ್ನು ಒಳಗೊಂಡ 12 ಚೀತಾಗಳ ಮತ್ತೊಂದು ಗುಂಪನ್ನು ಭಾರತಕ್ಕೆ ತರಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Sun, 2 April 23