ತಿರುಪತಿಯಲ್ಲಿ ಆಷಾಢ ಶನಿವಾರ ಪೂಜೆ ಸಲ್ಲಿಸಿದ MP ಮುಖ್ಯಮಂತ್ರಿ ಶಿವರಾಜ್‌ಸಿಂಗ್

ತಿರುಪತಿ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಧಾರ್ಮಿಕ ತೀರ್ಥಯಾತ್ರೆ ಈಗ ಆಂಧ್ರ ಪ್ರದೇಶದ ತಿರುಪತಿ ತಲುಪಿದೆ. ನಿನ್ನೆಯಷ್ಟೇ ಕರ್ನಾಟಕದ ಮಂಡ್ಯದಲ್ಲಿರುವ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದಿದ್ರು ಶಿವರಾಜ್‌ ಸಿಂಗ್‌ ಚೌಹಾಣ್‌. ಈಗ ತಿರುಪತಿಗೆ ಆಗಮಿಸಿದ್ದು, ತಿರುಮಲ ಬೆಟ್ಟದ ಮೇಲಿರುವ ಶ್ರೀವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಬಾಲಾಜಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್‌ಸಿಂಗ್‌ ಚೌಹಾಣ್‌ ಜತೆ ಅವರ ಪತ್ನಿ ಮತ್ತು ಇತರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ತಿರುಪತಿಯಲ್ಲಿ ಆಷಾಢ ಶನಿವಾರ ಪೂಜೆ ಸಲ್ಲಿಸಿದ MP ಮುಖ್ಯಮಂತ್ರಿ ಶಿವರಾಜ್‌ಸಿಂಗ್
Updated By: ಸಾಧು ಶ್ರೀನಾಥ್​

Updated on: Jul 25, 2020 | 1:09 PM

ತಿರುಪತಿ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಧಾರ್ಮಿಕ ತೀರ್ಥಯಾತ್ರೆ ಈಗ ಆಂಧ್ರ ಪ್ರದೇಶದ ತಿರುಪತಿ ತಲುಪಿದೆ. ನಿನ್ನೆಯಷ್ಟೇ ಕರ್ನಾಟಕದ ಮಂಡ್ಯದಲ್ಲಿರುವ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದಿದ್ರು ಶಿವರಾಜ್‌ ಸಿಂಗ್‌ ಚೌಹಾಣ್‌.

ಈಗ ತಿರುಪತಿಗೆ ಆಗಮಿಸಿದ್ದು, ತಿರುಮಲ ಬೆಟ್ಟದ ಮೇಲಿರುವ ಶ್ರೀವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಬಾಲಾಜಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್‌ಸಿಂಗ್‌ ಚೌಹಾಣ್‌ ಜತೆ ಅವರ ಪತ್ನಿ ಮತ್ತು ಇತರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

Published On - 2:08 pm, Sat, 27 June 20