ಗ್ವಾಲಿಯರ್: 3 ವರ್ಷದ ಮಗು ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ

ಮೂರು ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗ ಸ್ನೇಹಿತನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಇಬ್ಬರೂ ಚಾಕೊಲೇಟ್​ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆಸೊಯ್ದು ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಗ್ವಾಲಿಯರ್‌ನ ದಾಬ್ರಾ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೋನಿಯಲ್ಲಿ ನಡೆದಿದೆ. ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿತ್ತು.

ಗ್ವಾಲಿಯರ್: 3 ವರ್ಷದ ಮಗು ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ
ಮಗು-ಸಾಂದರ್ಭಿಕ ಚಿತ್ರ
Image Credit source: India Today

Updated on: Apr 23, 2025 | 3:15 PM

ಗ್ವಾಲಿಯರ್, ಏಪ್ರಿಲ್ 23: ಮೂರು ವರ್ಷದ ಮಗು(Baby)ವಿನ ಮೇಲೆ ಮನೆ ಮಾಲೀಕನ ಮಗ ಸ್ನೇಹಿತನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಇಬ್ಬರೂ ಚಾಕೊಲೇಟ್​ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆಸೊಯ್ದು ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಗ್ವಾಲಿಯರ್‌ನ ದಾಬ್ರಾ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೋನಿಯಲ್ಲಿ ನಡೆದಿದೆ. ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿತ್ತು.

ಆರೋಪಿಗಳಲ್ಲಿ ಒಬ್ಬ ಮನೆ ಮಾಲೀಕನ ಮಗ, ಮಾಹಿತಿ ಪ್ರಕಾರ ಇಬ್ಬರು ಹುಡುಗರು ಬಾಲಕಿಗೆ ಚಾಕೊಲೇಟ್​ ಕೊಟ್ಟು ಕಾರಿನಲ್ಲಿ ಕೂರಿಸಿ ಕೊರೆದೊಯ್ದಿದ್ದಾರೆ. ಕಾರಿನೊಳಗೆ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಆ ಮಗುವಿನ ಬಳಿ ಮನೆಯಲ್ಲಿ ಯಾರಿಗೂ ಏನೂ ಹೇಳಬೇಡ ಎಂದು ಹೇಳಿ ಮನೆಯ ಬಳಿ ಬಿಟ್ಟು ಹೋಗಿದ್ದಾರೆ. ಆದರೆ, ಹುಡುಗಿ ತನ್ನ ತಾಯಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದಳು. ನಂತರ ಆಕೆಯ ಪೋಷಕರು ನೇರವಾಗಿ ದಾಬ್ರಾ ನಗರ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರೂ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದರು.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಮತ್ತಷ್ಟು ಓದಿ: ವರನ ಮುಂದೆಯೇ ವಧುವಿನ ಮೇಲೆ ಸಾಮೂಹಿಕ ಅತ್ಯಾಚಾರ

ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಎಸ್‌ಡಿಒಪಿ ದಬ್ರಾ ಜಿತೇಂದ್ರ ನಾಗೈಚ್, ಸಿಎಸ್‌ಪಿ ಕಿರಣ್ ಅಹಿರ್ವಾರ್ ಮತ್ತು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಬಲ್ವಿಂದರ್ ಧಿಲ್ಲೋನ್ ಸ್ಥಳಕ್ಕೆ ತಲುಪಿದರು
ಪೋಕ್ಸೋ ಕಾಯ್ದೆ ಮತ್ತು ಅತ್ಯಾಚಾರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್ಪಿ ನಿರಂಜನ್ ಶರ್ಮಾ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಹಲವಾರು ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ