ಶರ್ಟ್​ನಲ್ಲಿ ಸಿಲುಕಿದ್ದ ನೊಣದಿಂದ ಸಿಕ್ಕಿಬಿದ್ದ ಕೊಲೆ ಆರೋಪಿ

|

Updated on: Nov 06, 2024 | 9:01 AM

ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದೆ. ಶಂಕಿತ ಯುವಕ ಧರಿಸಿದ್ದ ಬಟ್ಟೆಯ ಮೇಲೆ ಸಿಲುಕಿಕೊಂಡಿದ್ದ ನೊಣದಿಂದ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಶರ್ಟ್​ನಲ್ಲಿ ಸಿಲುಕಿದ್ದ ನೊಣದಿಂದ ಸಿಕ್ಕಿಬಿದ್ದ ಕೊಲೆ ಆರೋಪಿ
ನೊಣ-ಸಾಂದರ್ಭಿಕ ಚಿತ್ರ
Image Credit source: Britannica
Follow us on

ಕೊಲೆಯಂತಹ ಅಪರಾಧ ಕೃತ್ಯವೆಸಗುವವರು ಸಾಮಾನ್ಯವಾಗಿ ಯಾವುದೇ ಕುರುಹು ಸಿಗದಂತೆ ನೋಡಿಕೊಳ್ಳುತ್ತಾರೆ. ಆದರೆ ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದೆ. ಶಂಕಿತ ಯುವಕ ಧರಿಸಿದ್ದ ಬಟ್ಟೆಯ ಮೇಲೆ ಸಿಲುಕಿಕೊಂಡಿದ್ದ ನೊಣದಿಂದ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಆಸ್ತಿ, ಹಣದ ವಿವಾದದ ನಂತರ ಆರೋಪಿ ಧರಮ್​ ಠಾಕೂರ್ ಎಂಬಾತ ತನ್ನ ಚಿಕ್ಕಪ್ಪ ಮನೋಜ್ ಠಾಕೂರ್​ನನ್ನು ಹತ್ಯೆ ಮಾಡಿದ್ದ. ಆರೋಪಿ ಧರಮ್​ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮನೋಜ್ ಠಾಕೂರ್ ಕೆಲಸದ ನಿಮಿತ್ತ ಮನೆಯಿಂದ ಹೋದವರು ರಾತ್ರಿಯಾದರೂ ಹಿಂದಿರುಗಿರಲಿಲ್ಲ, ಅಕ್ಟೋಬರ್ 31 ರಂದು ದೇವೋರಿ ತಪ್ರಿಯಾ ಗ್ರಾಮದ ಕೃಷಿ ಭೂಮಿಯಲ್ಲಿ ಶವ ಪತ್ತೆಯಾಗಿತ್ತು.

ಚಾರ್ಗಾವಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಮೃತ ಮನೋಜ್ ಜತೆ ಕೊನೆಯದಾಗಿ ಕಾಣಿಸಿಕೊಂಡಿದ್ದು ಧರಮ್ ಎನ್ನುವುದು ತಿಳಿದುಬಂದಿತ್ತು. ಕೊಲೆಯಾದ ಸ್ಥಳಕ್ಕೆ ಬಂದಿದ್ದ ಆರೋಪಿಯ ಕಣ್ಣುಗಳು ಕೆಂಪಾಗಿದ್ದವು, ಆತನ ಎದೆಯ ಮೇಲೆ ಕೆಲವು ಗುರುತುಗಳಿದ್ದವು.

ಮತ್ತಷ್ಟು ಓದಿ: ಜಾಮೀನಿನ ಮೇಲೆ ಹೊರ ಬಂದು ಪತ್ನಿ, ಮೂವರು ಮಕ್ಕಳನ್ನು ಹತ್ಯೆಗೈದು ಆರೋಪಿ ಆತ್ಮಹತ್ಯೆ

ಆಗ ಆತನ ಬಟ್ಟೆಯ ಮೇಲಿದ್ದ ನೊಣಗಳನ್ನು ಗಮನಿಸಿದಾಗ ಅನುಮಾನ ಮೂಡಿತ್ತು, ಬಳಿಕ ನೊಣವನ್ನು ಸರಿಯಾಗಿ ಪರಿಶೀಲಿಸಿದಾಗ ಅದರ ಮೇಲೆ ರಕ್ತದ ಕಲೆಗಳಿರುವುದು ಕಂಡುಬಂದಿತ್ತು. ಆರೋಪಿ ಕಪ್ಪು ಶರ್ಟ್​ ಧರಿಸಿದ್ದರಿಂದ ರಕ್ತದ ಕಲೆಗಳು ಕಾಣಿಸಿರಲಿಲ್ಲ. ಸ್ಥಳದಲ್ಲಿದ್ದ ಫೋರೆನ್ಸಿಕ್ ತಂಡವು ಆರೋಪಿಗಳ ಬಟ್ಟೆಗಳನ್ನು ಪರೀಕ್ಷಿಸಿದ್ದು, ಅವುಗಳ ಮೇಲೆ ರಕ್ತದ ಕಲೆಗಳಿರುವುದು ಖಚಿತವಾಯಿತು ಎಂದು ಅಧಿಕಾರಿ ಹೇಳಿದರು.

ಆರೋಪಿಯು ಆರಂಭದಲ್ಲಿ ನಿರಪರಾಧಿ ಎಂದು ಹೇಳಿಕೊಂಡಿದ್ದರೂ ನಂತರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಫೋರೆನ್ಸಿಕ್ ಲ್ಯಾಬ್ ತಂಡವು ದೇಹದ ಸಮೀಪವಿರುವ ಮರದ ಸಣ್ಣ ತುಂಡುಗಳಲ್ಲಿ ಕೆಲವು ರಕ್ತದ ಕಲೆಗಳನ್ನು ಪತ್ತೆಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯು ವ್ಯಕ್ತಿಗೆ ಮೊಳೆ ಇರುವ ವಸ್ತುವಿನಿಂದ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ