AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​​ಬುಕ್​​ನಲ್ಲಿ ಪರಿಚಯವಾದ ಗೆಳತಿಯನ್ನು ನೋಡಲು ಬಂದು ಫಜೀತಿಗೆ ಸಿಲುಕಿದ ಯುವಕ

ಫೇಸ್​​ಬುಕ್​​ನಲ್ಲಿ ಪರಿಚಯವಾದ ಗೆಳತಿಯನ್ನು ಹುಡುಕಿ ಬಂದ ಯುವಕ ಫಜೀತಿಗೆ ಸಿಲುಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹುಡುಗನನ್ನು ಜನ ಕಟ್ಟಿ ಹಾಕಿ, 13 ಗಂಟೆಗಳ ಕಾಲ ಥಳಿಸಿರುವ ಘಟನೆ ನಡೆದಿದೆ. ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ ಹುಡುಗಿಯನ್ನು ಭೇಟಿಯಾಗಲು 100 ಕಿ.ಮೀ ಪ್ರಯಾಣಿಸಿದ ಮಧ್ಯಪ್ರದೇಶದ ವ್ಯಕ್ತಿಯೊಬ್ಬನನ್ನು ಆಕೆಯ ಕುಟುಂಬದವರು ಕಟ್ಟಿಹಾಕಿ 13 ಗಂಟೆಗಳ ಕಾಲ ಥಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಫೇಸ್​​ಬುಕ್​​ನಲ್ಲಿ ಪರಿಚಯವಾದ ಗೆಳತಿಯನ್ನು ನೋಡಲು ಬಂದು ಫಜೀತಿಗೆ ಸಿಲುಕಿದ ಯುವಕ
ಯುವಕImage Credit source: NDTV
ನಯನಾ ರಾಜೀವ್
|

Updated on: Aug 21, 2025 | 7:49 AM

Share

ಭೋಪಾಲ್, ಆಗಸ್ಟ್ 21: ಇತ್ತೀಚಿನ ದಿನಗಳಲ್ಲಿ ಫೇಸ್​​ಬುಕ್​​, ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದವರು ಮದುವೆ(Marriage)ಯಾದ ಹಲವು ಘಟನೆಗಳನ್ನು ನೋಡಿದ್ದೇವೆ. ಕೇವಲ ಆ ದೇಶದವರಲ್ಲ ವಿದೇಶಿದಿಂದ ಸಂಗಾತಿಯನ್ನು ಅರಸಿ ಬಂದಿರುವ ನಿದರ್ಶನಗಳು ಹಲವಿವೆ. ಹಾಗೆಯೇ ಫೇಸ್​​ಬುಕ್​​ನಲ್ಲಿ ಪರಿಚಯವಾದ ಗೆಳತಿಯನ್ನು ಹುಡುಕಿ ಬಂದ ಯುವಕ ಫಜೀತಿಗೆ ಸಿಲುಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹುಡುಗನನ್ನು  ಕುಟುಂಬದವರು ಕಟ್ಟಿ ಹಾಕಿ, 13 ಗಂಟೆಗಳ ಕಾಲ ಥಳಿಸಿರುವ ಘಟನೆ ನಡೆದಿದೆ.

ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ ಹುಡುಗಿಯನ್ನು ಭೇಟಿಯಾಗಲು 100 ಕಿ.ಮೀ ಪ್ರಯಾಣಿಸಿದ ಮಧ್ಯಪ್ರದೇಶದ ವ್ಯಕ್ತಿಯೊಬ್ಬನನ್ನು ಆಕೆಯ ಕುಟುಂಬದವರು ಕಟ್ಟಿಹಾಕಿ 13 ಗಂಟೆಗಳ ಕಾಲ ಥಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ರೇವಾ ಜಿಲ್ಲೆಯ ವ್ಯಕ್ತಿ ಶನಿವಾರ ಬಾಲಕಿಯನ್ನು ಭೇಟಿಯಾಗಲು ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಹೋದಾಗ ಆಕೆಯ ಕುಟುಂಬ ಸದಸ್ಯರು ಆತನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಒಂದು ವರ್ಷದ ಮಗುವನ್ನು ಬಸ್​​ಸ್ಟ್ಯಾಂಡ್​ನಲ್ಲಿ ಬಿಟ್ಟು, ಇನ್​ಸ್ಟಾಗ್ರಾಂ ಲವರ್​ ಜತೆ ಮಹಿಳೆ ಪರಾರಿ

13 ಗಂಟೆಗಳ ಕಾಲ ನಡೆದ ಈ ಹಲ್ಲೆಯನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಹಲವಾರು ಕ್ಲಿಪ್‌ಗಳನ್ನು ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ಹುಡುಗ ಬೈಕುಂತ್‌ಪುರದವನಾಗಿದ್ದು, ಫೇಸ್‌ಬುಕ್‌ನಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಲ್ಲದೇ ಭೇಟಿಯಾಗಲು ಬಂದಿದ್ದ.

ಆದರೆ, ಹನುಮಾನ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಆದರೂ, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್. ಪ್ರಜಾಪತಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ