AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವರ್ಷದ ಮಗುವನ್ನು ಬಸ್​​ಸ್ಟ್ಯಾಂಡ್​ನಲ್ಲಿ ಬಿಟ್ಟು, ಇನ್​ಸ್ಟಾಗ್ರಾಂ ಲವರ್​ ಜತೆ ಮಹಿಳೆ ಪರಾರಿ

ಪ್ರಿಯಕರನ ಜತೆಗೆ ಹೋಗಲು ತಾಯಿಯೊಬ್ಬಳು ಮಗುವನ್ನು ಬಸ್​​ಸ್ಟ್ಯಾಂಡ್​​ನಲ್ಲಿ ಬಿಟ್ಟು ಹೋಗಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ. ವಿವಾಹಿತ ಮಹಿಳೆಗೆ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಪ್ರೀತಿ ಚಿಗುರಿತ್ತು. ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಜತೆ ಮಹಿಳೆಗೆ ಸ್ನೇಹ ಬೆಳೆದು ಬಳಿಕ ಅದು ಪ್ರೀತಿಯಾಗಿದ್ದು, ತನ್ನ ಸಂಬಂಧಕ್ಕೆ ಮಗು ಅಡ್ಡಬರುವುದೆಂದು ಮಗುವನ್ನು ಬಸ್​​ಸ್ಟ್ಯಾಂಡ್​​ನಲ್ಲಿ ಬಿಟ್ಟು ಆಕೆ ಲವರ್ ಜತೆ ಪರಾರಿಯಾಗಿದ್ದಾಳೆ.

ಒಂದು ವರ್ಷದ ಮಗುವನ್ನು ಬಸ್​​ಸ್ಟ್ಯಾಂಡ್​ನಲ್ಲಿ ಬಿಟ್ಟು, ಇನ್​ಸ್ಟಾಗ್ರಾಂ ಲವರ್​ ಜತೆ ಮಹಿಳೆ ಪರಾರಿ
ಮಗು
ನಯನಾ ರಾಜೀವ್
|

Updated on: Jul 31, 2025 | 9:22 AM

Share

ನಲ್ಗೊಂಡ, ಜುಲೈ 31: ಮಗುವಿಗೋಸ್ಕರ ಸಮಾಜವನ್ನೇ ಬೇಕಾದರೂ ಎದುರು ಹಾಕಿಕೊಂಡು ಹೋರಾಡುವ ತಾಯಿ (Mother)ಒಂದೆಡೆಯಾದರೆ, ತನ್ನ ಪ್ರಿಯಕರನಿಗಾಗಿ ಒಂದು ವರ್ಷದ ಮಗುವನ್ನು ಬಸ್​​ಸ್ಟ್ಯಾಂಡ್​​ನಲ್ಲಿ ಬಿಟ್ಟು ಹೋದ ತಾಯಿ ಮತ್ತೊಂದೆಡೆ. ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಜತೆ ಮಹಿಳೆಗೆ ಸ್ನೇಹ ಬೆಳೆದು ಬಳಿಕ ಅದು ಪ್ರೀತಿಯಾಗಿದ್ದು, ತನ್ನ ಸಂಬಂಧಕ್ಕೆ ಮಗು ಅಡ್ಡಬರುವುದೆಂದು ಮಗುವನ್ನು ಬಸ್​​ಸ್ಟ್ಯಾಂಡ್​​ನಲ್ಲಿ ಬಿಟ್ಟು ಆಕೆ ಲವರ್ ಜತೆ ಪರಾರಿಯಾಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ವೈರಲ್ ಆಗಿದೆ. ಮಗು ಅಳುತ್ತಿರುವುದನ್ನು ಡಿಪೋ ಸಿಬ್ಬಂದಿ ನೋಡಿ, ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಪ್ರಕಾರ, ಟೂ ಟೌನ್ ಪೊಲೀಸ್ ಠಾಣೆಯ ಸಬ್​​-ಇನ್ಸ್​​ಪೆಕ್ಟರ್ ವಿ ಸೈದುಲು ಮಾತನಾಡಿ, ಹೈದರಾಬಾದ್​ನ ವಿವಾಹಿತ ಮಹಿಳೆ ಮಗುವನ್ನು ಬಸ್ ಸ್ಟ್ಯಾಂಡ್ನಲ್ಲಿ ಬಿಟ್ಟು ಓಲ್ಡ್​ ಸಿಟಿ ಪ್ರದೇಶದ ವ್ಯಕ್ತಿಯೊಂದಿಗೆ ಬೈಕ್​​ನಲ್ಲಿ ಪರಾರಿಯಾಗಿದ್ದಾಳೆ. ಆ ಮಹಿಳೆ ಇನ್​​ಸ್ಟಾಗ್ರಾಂ ಮೂಲಕ ಆ ವ್ಯಕ್ತಿಯನ್ನು ಭೇಟಿಯಾಗಿದ್ದಳು. ತನ್ನ ಪತಿ ಹಾಗೂ ಮಗುವನ್ನು ಬಿಟ್ಟು ಆತನೊಂದಿಗೆ ಇರಲು ಬಯಸಿದ್ದಳು ಎಂದು ತಿಳಿಸಿದ್ದಾರೆ.

ಬಸ್​ ಡಿಪೋದ ಸಿಸಿಟಿವಿ ದೃಶ್ಯಾವಳಿಗಳು ನಿರ್ಣಾಯಕ ಸಾಕ್ಷ್ಯಗಳನ್ನು ಒದಗಿಸಿವೆ.ಅಳುತ್ತಿದ್ದ ಮಗುವಿನಿಂದ ಮಹಿಳೆ ದೂರ ಹೋಗುತ್ತಿರುವುದನ್ನು ಕಾಣಬಹುದು. ಅದೇ ದೃಶ್ಯಗಳು ಅವಳು ಬೈಕ್ ಹತ್ತಿ ಆ ವ್ಯಕ್ತಿಯೊಂದಿಗೆ ಸವಾರಿ ಮಾಡುವುದನ್ನು ಸಹ ಸೆರೆಹಿಡಿದಿವೆ.

ಸಿಸಿಟಿವಿ ಫೂಟೇಜ್ ಮಗುವಿಗೆ ತೋರಿಸಿದಾಗ ಅಮ್ಮ ಎಂದು ಕರೆದು ಅದು ಅತ್ತಿದೆ. ದೃಶ್ಯ ಸಾಕ್ಷ್ಯಗಳನ್ನು ಬಳಸಿಕೊಂಡು, ಪೊಲೀಸರು ಪರಾರಿಯಾಗಲು ಬಳಸಿದ್ದ ವಾಹನವನ್ನು ಪತ್ತೆಹಚ್ಚಿದರು. ಘಟನೆಯ ದಿನದಂದು ಬೈಕ್ ಅನ್ನು ಮಹಿಳೆಯ ಸ್ನೇಹಿತ ಆಕೆಯ ಪ್ರಿಯಕರನಿಗೆ ನೀಡಿದ್ದ.

ಪೊಲೀಸರು ಮಹಿಳೆ, ಆಕೆಯ ಪ್ರಿಯಕರ ಮತ್ತು ಆಕೆಯ ಪತಿಯನ್ನು ಕೌನ್ಸೆಲಿಂಗ್‌ಗಾಗಿ ಕರೆಸಿದರು. ಅಧಿಕಾರಿಗಳ ಸಂಪೂರ್ಣ ವಿಚಾರಣೆ ಮತ್ತು ಹಸ್ತಕ್ಷೇಪದ ನಂತರ, 15 ತಿಂಗಳ ಬಾಲಕನ ಕಸ್ಟಡಿಯನ್ನು ಅವನ ತಂದೆಗೆ ಹಸ್ತಾಂತರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ