
ಭೋಪಾಲ್, ಆಗಸ್ಟ್ 21: ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಪರಿಚಯವಾದವರು ಮದುವೆ(Marriage)ಯಾದ ಹಲವು ಘಟನೆಗಳನ್ನು ನೋಡಿದ್ದೇವೆ. ಕೇವಲ ಆ ದೇಶದವರಲ್ಲ ವಿದೇಶಿದಿಂದ ಸಂಗಾತಿಯನ್ನು ಅರಸಿ ಬಂದಿರುವ ನಿದರ್ಶನಗಳು ಹಲವಿವೆ. ಹಾಗೆಯೇ ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳತಿಯನ್ನು ಹುಡುಕಿ ಬಂದ ಯುವಕ ಫಜೀತಿಗೆ ಸಿಲುಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹುಡುಗನನ್ನು ಕುಟುಂಬದವರು ಕಟ್ಟಿ ಹಾಕಿ, 13 ಗಂಟೆಗಳ ಕಾಲ ಥಳಿಸಿರುವ ಘಟನೆ ನಡೆದಿದೆ.
ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ ಹುಡುಗಿಯನ್ನು ಭೇಟಿಯಾಗಲು 100 ಕಿ.ಮೀ ಪ್ರಯಾಣಿಸಿದ ಮಧ್ಯಪ್ರದೇಶದ ವ್ಯಕ್ತಿಯೊಬ್ಬನನ್ನು ಆಕೆಯ ಕುಟುಂಬದವರು ಕಟ್ಟಿಹಾಕಿ 13 ಗಂಟೆಗಳ ಕಾಲ ಥಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ರೇವಾ ಜಿಲ್ಲೆಯ ವ್ಯಕ್ತಿ ಶನಿವಾರ ಬಾಲಕಿಯನ್ನು ಭೇಟಿಯಾಗಲು ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಹೋದಾಗ ಆಕೆಯ ಕುಟುಂಬ ಸದಸ್ಯರು ಆತನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಓದಿ: ಒಂದು ವರ್ಷದ ಮಗುವನ್ನು ಬಸ್ಸ್ಟ್ಯಾಂಡ್ನಲ್ಲಿ ಬಿಟ್ಟು, ಇನ್ಸ್ಟಾಗ್ರಾಂ ಲವರ್ ಜತೆ ಮಹಿಳೆ ಪರಾರಿ
13 ಗಂಟೆಗಳ ಕಾಲ ನಡೆದ ಈ ಹಲ್ಲೆಯನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಹಲವಾರು ಕ್ಲಿಪ್‌ಗಳನ್ನು ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ಹುಡುಗ ಬೈಕುಂತ್‌ಪುರದವನಾಗಿದ್ದು, ಫೇಸ್‌ಬುಕ್‌ನಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಲ್ಲದೇ ಭೇಟಿಯಾಗಲು ಬಂದಿದ್ದ.
ಆದರೆ, ಹನುಮಾನ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಆದರೂ, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್. ಪ್ರಜಾಪತಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ