ಗ್ವಾಲಿಯರ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ರಸ್ತೆ ಹದಗೆಟ್ಟಿದ್ದಕ್ಕೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿರುವ ಮಧ್ಯಪ್ರದೇಶದ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ (Pradhuman Singh Tomar) ಕೆಸರಾದ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬನ ಪಾದಗಳನ್ನು ತೊಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ವಿನಯ್‌ನಗರ ಪ್ರದೇಶದ ರಸ್ತೆಯೊಂದರಲ್ಲಿ ಚರಂಡಿ ಅಗೆಯುವಾಗ ಇಡೀ ರಸ್ತೆ ಮಣ್ಣಿನಿಂದ ತುಂಬಿತ್ತು. ಈ ವೇಳೆ ಪ್ರದ್ಯುಮನ್ ಸಿಂಗ್ ತೋಮರ್ ಆ ಕಾಲೋನಿಗೆ ಪರಿಶೀಲನೆಗಾಗಿ ಹೋದ ನಂತರ ಅಲ್ಲಿನ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್, ರಸ್ತೆ ಹಾನಿಗೊಳಗಾದ ಕಾರಣಕ್ಕಾಗಿ ನಾನು ಜನರಲ್ಲಿ ಕ್ಷಮೆಯಾಚಿಸಿದ್ದೇನೆ. ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಸರಿಪಡಿಸುವ ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.
Madhya Pradesh Min Pradhuman Singh washed the feet of a person as the minister apologised for the bad condition of road in Gwalior
I apologised to people for the bad condition of the road & promised to repair the road which was dug for a sewer line work, said the minister (16.1) pic.twitter.com/nK8MzZBBto
— ANI MP/CG/Rajasthan (@ANI_MP_CG_RJ) January 17, 2023
ಇದನ್ನೂ ಓದಿ: ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು ಗೋಮೂತ್ರದಿಂದ ಬಾಯಿ ತೊಳೆದುಕೊಳ್ಳಿ: ತ್ರಿಪುರಾದ ಕಾನೂನು ಸಚಿವ
ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ತನ್ನ ಕೆಲಸದ ಶೈಲಿಯಿಂದ ಯಾವಾಗಲೂ ಗಮನ ಸೆಳೆಯುತ್ತಾರೆ. ಆಗಾಗ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವುದು ಮತ್ತು ರಸ್ತೆಗಳನ್ನು ಗುಡಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಖುದ್ದಾಗಿ ಮಾಡುತ್ತಾರೆ. ಪ್ರದ್ಯುಮನ್ ಸಿಂಗ್ ತೋಮರ್ ಗ್ವಾಲಿಯರ್ನ ಬಿಜೆಪಿ ಶಾಸಕ. ಈ ವರ್ಷದ ಅಕ್ಟೋಬರ್‌ನಲ್ಲಿ ಸ್ಥಳೀಯರಿಂದ ಹದಗೆಟ್ಟ ರಸ್ತೆಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿದ ಅವರು ನಂತರ ರಸ್ತೆಗಳ ನಿರ್ಮಾಣದವರೆಗೆ ಬರಿಗಾಲಿನಲ್ಲಿ ಇರುವುದಾಗಿ ಪ್ರತಿಜ್ಞೆ ಮಾಡಿದ್ದರು.