ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು ಗೋಮೂತ್ರದಿಂದ ಬಾಯಿ ತೊಳೆದುಕೊಳ್ಳಿ: ತ್ರಿಪುರಾದ ಕಾನೂನು ಸಚಿವ
ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು ವಿರೋಧ ಪಕ್ಷಗಳು ಗೋಮೂತ್ರದಿಂದ ಬಾಯಿ ತೊಳೆಯಬೇಕು. ಹಿಂಸಾಚಾರ ಮತ್ತು ಅಶಾಂತಿ ಹೊರತುಪಡಿಸಿ ತ್ರಿಪುರಾದಲ್ಲಿ ತಮ್ಮ ಹಿಂದಿನ ಆಡಳಿತದಲ್ಲಿ ಅವರು ಏನು ಮಾಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಚಿವರು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು “ಗೋಮೂತ್ರದಿಂದ (cow urine) ಬಾಯಿಯನ್ನು ತೊಳೆದುಕೊಳ್ಳಿ” ಎಂದು ತ್ರಿಪುರಾ (Tripura) ಸಚಿವರೊಬ್ಬರು ಹೇಳಿರುವುದು ವಿವಾದಕ್ಕೀಡಾಗಿದೆ. ರಾಜ್ಯ ಕಾನೂನು ಸಚಿವ ರತನ್ ಲಾಲ್ ನಾಥ್ (Ratan Lal Nath)ಅವರು ಮುಂಬರುವ ರಾಜ್ಯ ಚುನಾವಣೆಗೆ ತಮ್ಮ ಉದ್ದೇಶಿತ ಸ್ಥಾನ ಹೊಂದಾಣಿಕೆ ಕುರಿತು ಎರಡು ವಿರೋಧ ಪಕ್ಷಗಳಾದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಅನ್ನು ಟೀಕಿಸುವ ಸಂದರ್ಭದಲ್ಲಿ ಭಾನುವಾರ ಈ ರೀತಿ ಹೇಳಿದ್ದಾರೆ. “ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು ವಿರೋಧ ಪಕ್ಷಗಳು ಗೋಮೂತ್ರದಿಂದ ಬಾಯಿ ತೊಳೆಯಬೇಕು. ಹಿಂಸಾಚಾರ ಮತ್ತು ಅಶಾಂತಿ ಹೊರತುಪಡಿಸಿ ತ್ರಿಪುರಾದಲ್ಲಿ ತಮ್ಮ ಹಿಂದಿನ ಆಡಳಿತದಲ್ಲಿ ಅವರು ಏನು ಮಾಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಚಿವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪುನರುಜ್ಜೀವನಗೊಳಿಸಲು ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಒಂದೇ ವೇದಿಕೆಯ ಅಡಿಯಲ್ಲಿ ಬರಬೇಕಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ ಅಜಯ್ ಕುಮಾರ್ ಹೇಳಿದ್ದನ್ನು ಉಲ್ಲೇಖಿಸಿ ಸಚಿವರು ಈ ಟೀಕೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ತ್ರಿಪುರಾದಲ್ಲಿ “ಪ್ರಜಾಪ್ರಭುತ್ವಕ್ಕೆ ಅಪಾಯವಿದೆ” ಎಂದು ಎಡ ಮತ್ತು ಕಾಂಗ್ರೆಸ್ ನಾಯಕರು ಈ ಹಿಂದೆ ಆರೋಪಿಸಿದ್ದರು.
ಇದನ್ನೂ ಓದಿ:ನ್ಯಾಯಾಧೀಶರ ನೇಮಕಾತಿ ಸಮಿತಿಯಲ್ಲಿ ಕೇಂದ್ರದ ಪ್ರತಿನಿಧಿಗಳು ಇರಬೇಕು: ಸಚಿವ ಕಿರಣ್ ರಿಜಿಜು
ಸಿಪಿಎಂ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಚೌಧರಿ, ನಾಥ್ ಅವರ ಗೋಮೂತ್ರ ಹೇಳಿಕೆಯನ್ನು ಟೀಕಿಸಿದ್ದು ನಿಯಮಿತವಾಗಿ ಗೋಮೂತ್ರ ಕುಡಿಯುವವರು ಗಣತಂತ್ರ (ಪ್ರಜಾಪ್ರಭುತ್ವ)ದ ಉಲ್ಲೇಖದಿಂದ ಕಿರಿಕಿರಿಗೊಳ್ಳುವುದು ಸಹಜ ಎಂದಿದ್ದಾರೆ.
ತ್ರಿಪುರಾದಲ್ಲಿ ತಮ್ಮ ಆಡಳಿತದಲ್ಲಿ ವಿರೋಧ ಪಕ್ಷಗಳು ಗೂಂಡಾಗಳ ಬೆಂಬಲದೊಂದಿಗೆ ಸರ್ಕಾರವನ್ನು ನಡೆಸುತ್ತಿವೆ ಎಂದು ಬಿಜೆಪಿ ಸಚಿವರು ಆರೋಪಿಸಿದ್ದರು.
ಎಡರಂಗದ ಆಡಳಿತದಲ್ಲಿ ಸಿಪಿಎಂ ಬೆಂಬಲಿತ ಗೂಂಡಾಗಳಿಂದ ಕೊಲ್ಲಲ್ಪಟ್ಟರು ಎಂದು ಹೇಳಲಾದ ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ಹೇಳಿದ ಅವರು ಪರಿಮಳ ಸೇನ್, ನಿತಾಯಿ ದೇಬನಾಥ್, ಬಿಶು ಸಹಾ, ಸಾಧನ್ ದೇಬನಾಥ್, ರುನು ಬಿಸ್ವಾಸ್, ಪರಿಮಳ್ ಸಹಾ, ಮಧುಸೂಧನ್ ಸಹಾ, ದೇಬಲ್ ದೇಬ್, ಮಂತು ದಾಸ್ ಮತ್ತು ಇತರರಿಗೆ ಅವರು ಏನು ಉತ್ತರ ನೀಡುತ್ತಾರೆ ಎಂದು ಕೇಳಿದ್ದಾರೆ. ನಾಥ್ ಅವರು 2017 ರಲ್ಲಿ ಬಿಜೆಪಿಗೆ ಪಕ್ಷಾಂತರವಾಗುವ ಮೊದಲು 34 ವರ್ಷಗಳ ಕಾಲ ಕಾಂಗ್ರೆಸ್ ನಾಯಕರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ