ಭೋಪಾಲ್​ನಲ್ಲಿ ಒಂದೇ ದಿನ 40 ಮಂದಿಗೆ ಕಚ್ಚಿದ ಬೀದಿ ನಾಯಿಗಳು

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. 6 ತಿಂಗಳಲ್ಲಿ ಒಟ್ಟು 10 ಚೀತಾಗಳು ಮೃತಪಟ್ಟಿವೆ. ಮೃತ ಚೀತಾ ಹೆಸರು ಶೌರ್ಯ, ಸಾವಿನ ಕಾರಣವನ್ನು ಖಚಿತಪಡಿಸಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ಸೆಪ್ಟೆಂಬರ್ 2022 ರಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು. ಮತ್ತು 2023 ರ ಆರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲಾಯಿತು. ಇದುವರೆಗೆ 10 ಚೀತಾಗಳು ಸಾವನ್ನಪ್ಪಿವೆ.

ಭೋಪಾಲ್​ನಲ್ಲಿ ಒಂದೇ ದಿನ 40 ಮಂದಿಗೆ ಕಚ್ಚಿದ ಬೀದಿ ನಾಯಿಗಳು
ಬೀದಿನಾಯಿಗಳುImage Credit source: India Today
Follow us
ನಯನಾ ರಾಜೀವ್
|

Updated on: Jan 17, 2024 | 11:52 AM

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬೀದಿ ನಾಯಿ(Stray Dog)ಗಳ ಕಾಟ ಹೆಚ್ಚಾಗಿದೆ. ಮಂಗಳವಾರ ನಗರದಲ್ಲಿ ಸುಮಾರು 40 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ಮಂಗಳವಾರ ಸಂಜೆ ವೇಳೆಗೆ ಬೀದಿನಾಯಿಗಳಿಂದ ಕಚ್ಚಿಸಿಕೊಂಡ 40ಕ್ಕೂ ಹೆಚ್ಚು ವ್ಯಕ್ತಿಗಳು ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಜನವರಿ ಮೊದಲ ವಾರವೊಂದರಲ್ಲೇ ನಗರದ ವಿವಿಧೆಡೆ ನಾಯಿ ಕಡಿತದ ಹತ್ತಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಜನವರಿ 10 ರಂದು ಭೋಪಾಲ್‌ನಲ್ಲಿ ಏಳು ತಿಂಗಳ ಮಗುವನ್ನು ಬೀದಿ ನಾಯಿಗಳು ಕೊಂದು ಹಾಕಿದ್ದವು. ಅಂದಿನಿಂದ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಿದೆ.

ಮಂಗಳವಾರ ಸಂಜೆ, ಮೇಯರ್ ಮಾಲ್ತಿ ರೈ ಅವರು ಪಾಲಿಕೆ ಅಧಿಕಾರಿಗಳ ಸಭೆಯನ್ನು ಕರೆದರು, ಪಾಲಿಕೆ ಆಯುಕ್ತ ನೋಬಲ್ ಫ್ರಾಂಕ್ ಸಹ ಹಾಜರಿದ್ದರು.

ಮತ್ತಷ್ಟು ಓದಿ: ಭೋಪಾಲ್​: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು

ಆದಷ್ಟು ಬೇಗ ಬೀದಿ ನಾಯಿಗಳನ್ನು ಹಿಡಿಯುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಮನೆಯಲ್ಲಿ ಅಥವಾ ಗೂಡಿನಲ್ಲಿ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆಯ ಕಾಮಗಾರಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ