ಕಿಡ್ನ್ಯಾಪ್​ ಆಗಿದ್ದೇನೆಂದು ತಂದೆಗೆ ಸುಳ್ಳು ಹೇಳಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮಗಳು

|

Updated on: Mar 21, 2024 | 9:12 AM

ವಿದ್ಯಾರ್ಥಿನಿಯೊಬ್ಬಳು ತಾನು ಕಿಡ್ನ್ಯಾಪ್​ ಆಗಿದ್ದೇನೆ ಸುಳ್ಳು ಹೇಳಿ ತಂದೆಯ ಬಳಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆಕೆ ಸ್ನೇಹಿತರೊಂದಿಗೆ ವಿದೇಶಕ್ಕೆ ತೆರಳಲು ಬಯಸಿದ್ದಳು, ಹೀಗಾಗಿ ಅಪಹರಣ ನಾಟಕವಾಡಿ ತಂದೆಯಿಂದ ಹಣ ಪಡೆಯಲು ನಿರ್ಧರಿಸಿದ್ದಳು ಎಂಬುದು ತಿಳಿದುಬಂದಿದೆ.

ಕಿಡ್ನ್ಯಾಪ್​ ಆಗಿದ್ದೇನೆಂದು ತಂದೆಗೆ ಸುಳ್ಳು ಹೇಳಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮಗಳು
ಅಪಹರಣ
Image Credit source: Investopedia
Follow us on

ಕಿಡ್ನ್ಯಾಪ್​ ಆಗಿದ್ದೇನೆ ಎಂದು ಮಗಳೊಬ್ಬಳು ತಂದೆಗೆ ಸುಳ್ಳು ಹೇಳಿ 30 ಲಕ್ಷ ರೂ. ದೋಚಲು ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೋಟಾಗೆ ಅಧ್ಯಯನಕ್ಕೆಂದು ಹೋಗಿದ್ದ ವಿದ್ಯಾರ್ಥಿನಿ ಅಲ್ಲಿಂದ ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಳು. ಹಾಗಾಗಿ ತಾನು ಅಪಹರಣವಾಗಿದ್ದೇನೆಂದು ತಂದೆಗೆ ಸುಳ್ಳು ಫೋಟೊ ಕಳಿಸಿ 30 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಳು.

ಆಕೆಯನ್ನು ಕಾವ್ಯಾ ಎಂದು ಗುರುತಿಸಲಾಗಿದ್ದು, ಕೋಟಾದ ಹಾಸ್ಟೆಲ್‌ಗೆ ಕೋಚಿಂಗ್​ಗೆ ಸೇರಲು ತನ್ನ ತಾಯಿಯೊಂದಿಗೆ ಬಂದಿದ್ದಳು. ಕಾವ್ಯಾ ಹಾಸ್ಟೆಲ್‌ನಲ್ಲಿ ಕೇವಲ ಮೂರು ದಿನಗಳನ್ನು ಕಳೆದಿದ್ದಷ್ಟೆ ನಂತರ ತನ್ನ ಸ್ನೇಹಿತರೊಬ್ಬರೊಂದಿಗೆ ಇಂದೋರ್‌ಗೆ ಹೋಗಿದ್ದಳು ಅವರು ಕೂಡ ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದರು ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

ವಿದ್ಯಾರ್ಥಿನಿ ತಾನು ಇನ್ನೂ ರಾಜಸ್ಥಾನದ ಕೋಚಿಂಗ್ ಹಬ್‌ನಲ್ಲಿದ್ದೇನೆ ಎಂದು ತನ್ನ ಪೋಷಕರನ್ನು ನಂಬುವಂತೆ ಚಿತ್ರಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 18 ರಂದು, ಕಾವ್ಯಾ ತಂದೆ ರಘುವೀರ್ ಧಾಕಡ್ ಅವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಕೋಟಾ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ಮಗಳ ಕೈ ಮತ್ತು ಕಾಲುಗಳನ್ನು ಕಟ್ಟಿರುವ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದರು.
ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ತನಿಖೆ ನಡೆಸಿ ಇಂದೋರ್​ನಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಮಹಿಳೆ ಕೇವಲ ಮೂರು ದಿನಗಳ ಕಾಲ ಕೋಟಾದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು ಮತ್ತು ತಾಯಿ ಹೋದ ನಂತರ ಅವಳು ಇಂದೋರ್‌ಗೆ ತೆರಳಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಅಲ್ಲಿಯೇ ಇದ್ದಳು.

ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ಕೋಚಿಂಗ್ ಇನ್‌ಸ್ಟಿಟ್ಯೂಟ್ ಹೆಸರಿನಲ್ಲಿ ತರಗತಿ ಪರೀಕ್ಷೆಗಳು ಮತ್ತು ತರಗತಿಗಳಲ್ಲಿ ತಾನಿರುವ ಬಗ್ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಮಹಿಳೆ ಪೋಷಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಳು. ತನಿಖೆಗೆ ಸಹಕರಿಸಿದ ಮಹಿಳೆಯ ಸ್ನೇಹಿತರೊಬ್ಬರು ಮಾತನಾಡಿ, ಕಾವ್ಯ ಮತ್ತು ಆಕೆಯ ಸ್ನೇಹಿತರೊಬ್ಬರು ವಿದೇಶಕ್ಕೆ ಹೋಗಲು ಬಯಸಿದ್ದರು ಆದರೆ ಸಾಕಷ್ಟು ಹಣವಿರಲಿಲ್ಲ ಹಾಗಾಗಿ ಅಪಹರಣ ನಾಟಕವಾಡಿದ್ದಾರೆ ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ