ವಾಹನ ಚಲಾಯಿಸುವಾಗ ನಿಮಗೂ ನಿದ್ದೆ ಬರುತ್ತಾ, ಇಂದೋರ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಆ್ಯಂಟಿ ಸ್ಲೀಪ್ ಅಲಾರ್ಮ್​ ವಿಶೇಷತೆ ಗೊತ್ತಾ?

|

Updated on: Apr 20, 2023 | 12:29 PM

ಹಲವು ಬಾರಿ ವಾಹನ ಚಲಾಯಿಸುವಾಗ ಒಂದು ಕ್ಷಣ ಕಣ್ಣುಮುಚ್ಚಿದರೆ ಸಾಕು ದೊಡ್ಡ ಅನಾಹುತಗಳೇ ಸಂಭವಿಸುತ್ತವೆ. ವಾಹನಗಳ ವೇಗದಿಂದಾಗಿ ಅಪಘಾತ(Accident) ಗಳು ಸಂಭವಿಸಬಹುದು, ಇನ್ನೂ ಕೆಲವೊಮ್ಮೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಬಹುದು.

ವಾಹನ ಚಲಾಯಿಸುವಾಗ ನಿಮಗೂ ನಿದ್ದೆ ಬರುತ್ತಾ, ಇಂದೋರ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಆ್ಯಂಟಿ ಸ್ಲೀಪ್ ಅಲಾರ್ಮ್​ ವಿಶೇಷತೆ ಗೊತ್ತಾ?
ಆ್ಯಂಟಿ ಸ್ಲೀಪ್ ಅಲಾರ್ಮ್​
Follow us on

ಹಲವು ಬಾರಿ ವಾಹನ ಚಲಾಯಿಸುವಾಗ ಒಂದು ಕ್ಷಣ ಕಣ್ಣುಮುಚ್ಚಿದರೆ ಸಾಕು ದೊಡ್ಡ ಅನಾಹುತಗಳೇ ಸಂಭವಿಸುತ್ತವೆ. ವಾಹನಗಳ ವೇಗದಿಂದಾಗಿ ಅಪಘಾತ(Accident) ಗಳು ಸಂಭವಿಸಬಹುದು, ಇನ್ನೂ ಕೆಲವೊಮ್ಮೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಬಹುದು. ಅದರಲ್ಲಿ ನಿದ್ರೆ(Sleep)ಯು ಕೂಡ ಒಂದು ಕಾರಣ. ಇಂತಹ ಸಂದರ್ಭದಲ್ಲಿ ಕಣ್ಣುಮುಚ್ಚದಂತೆ ನೋಡಿಕೊಂಡು ಎಚ್ಚರವಹಿಸಲು ಇಂದೋರ್​ ವಿದ್ಯಾರ್ಥಿಗಳು ಆ್ಯಂಟಿ ಸ್ಲೀಪ್ ಅಲಾರ್ಮ್​(Anti Sleep Alarm) ಅಭಿವೃದ್ಧಿಪಡಿಸಿದ್ದಾರೆ. ದೂರದ ಪ್ರಯಾಣದಲ್ಲಿ ಆಯಾಸದಿಂದಾಗಿ ನಿದ್ರೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ನಿದ್ರೆ ಬಂದ ತಕ್ಷಣ ಅಲಾರ್ಮ್​ ಶಬ್ದ ಮಾಡುತ್ತದೆ ಮತ್ತು ಕಾರು ನಿಲ್ಲುತ್ತದೆ. ಆಂಟಿ ಸ್ಲೀಪ್ ಅಲಾರ್ಮ್‌ನಲ್ಲಿ ಆಂಟಿ ಸ್ಲೀಪ್ ಗ್ಲಾಸ್‌ಗಳಿವೆ, ಚಾಲನೆ ಮಾಡುವಾಗ ಚಾಲಕ ನಿದ್ರಿಸಿದರೆ, ಅದರ ಬಜರ್ ಸದ್ದು ಮಾಡುತ್ತದೆ. ಚಕ್ರಗಳು ತಾನಾಗಿಯೇ ನಿಲ್ಲುತ್ತವೆ.

ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನ ವಿದ್ಯಾರ್ಥಿ ಅಭಿಷೇಕ್ ಪಾಟಿದಾರ್ ಮತ್ತು ಅವರ ಸ್ನೇಹಿತರು ಈ ಅದ್ಭುತ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದರಲ್ಲಿ ಸೆನ್ಸಾರ್ ಇದ್ದು, ಅಲಾರ್ಮ್​ ಆಗುತ್ತದೆ ಆಗಲೂ ಚಾಲಕ ಕಣ್ಣು ತೆರೆಯದೆ ಇದ್ದರೆ ಆಗ ಕಾರು ನಿಲ್ಲುತ್ತದೆ. ಹೋಶಂಗಾಬಾದ್​ನಲ್ಲಿ ನಡೆದ ಬಸ್​ ಅಪಘಾತದ ಬಳಿಕ ಇಂದೋರ್ ವಿದ್ಯಾರ್ಥಿಗಳು ಹೀಗೊಂದು ಸಾಧನವನ್ನು ಸಿದ್ಧಪಡಿಸಲು ನಿರ್ಧರಿಸಿದ್ದರು. ಇದನ್ನು ಸಿದ್ಧಪಡಿಸಲು 3 ವಾರಗಳನ್ನು ತೆಗೆದುಕೊಂಡಿದ್ದು, ಒಟ್ಟು 5 ಜನರ ತಂಡ ಇದರ ಮೇಲೆ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದಿ: Bihar Governor Convoy Vehicle Accident: ಬಿಹಾರ ರಾಜ್ಯಪಾಲರ ಬೆಂಗಾವಲು ವಾಹನ ಅಪಘಾತ, ಹಲವರಿಗೆ ಗಾಯ

ಮಹಾರಾಷ್ಟ್ರದ ನಾಗ್ಪುರದಲ್ಲಿ ಕೂಡ ಒಂದು ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಚಾಲಕನಿಗೆ ನಿದ್ರೆ ಬಂದಾಗ ಎಚ್ಚರಿಸುತ್ತದೆ ಮತ್ತು ಅಪಘಾತಗಳು ಸಂಭವಿಸದಂತೆ ತಡೆಯುತ್ತದೆ. ನಾಗಪುರ ಸಾರಿಗೆ ಇಲಾಖೆಯಿಂದ ವಾಹನಗಳಲ್ಲಿ ಈ ಸಾಧನ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಎನ್‌ಸಿಆರ್‌ಬಿ ಅಂದರೆ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ವರದಿಯ ಪ್ರಕಾರ, 2021 ರಲ್ಲಿ ದೇಶದಲ್ಲಿ ಸುಮಾರು 4.22 ಲಕ್ಷ ರಸ್ತೆ ಅಪಘಾತಗಳಲ್ಲಿ 1.73 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 23,531 ಜನರು ಕಾರು ಅಪಘಾತಗಳಲ್ಲಿ ಮತ್ತು 14,622 ಮಂದಿ ಟ್ರಕ್‌ಗಳು ಅಥವಾ ಲಾರಿಗಳ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ವರದಿಯ ಪ್ರಕಾರ, 2020 ರಲ್ಲಿ ಒಟ್ಟು 1.20 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, 2019 ರಲ್ಲಿ 1.36 ಲಕ್ಷ ಮತ್ತು 2018 ರಲ್ಲಿ 1.35 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಬಾರಿ ತಮ್ಮ ನಿರ್ಲಕ್ಷ್ಯದಿಂದ ಈ ಅವಘಡಗಳು ಸಂಭವಿಸಿದರೆ ಮತ್ತೊಂದೆಡೆ ಅನೇಕ ಬಾರಿ ಬೇರೆಯವರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ