ಜಮ್ಮುವಿನ ಬಾಲಕಿಯ ಮನವಿಗೆ ಕರಗಿದ ಜಿಲ್ಲಾಡಳಿತ, ಹಣ ಬಿಡುಗಡೆ: ಶಿಥಿಲಾವಸ್ಥೆಯಲ್ಲಿರುವ ಶಾಲೆಗೆ ಶೀಘ್ರವೇ ಹೊಸ ರೂಪ

ಸೀರತ್ ನಾಜ್ ಓದುತ್ತಿರುವ ಶಾಲೆಯು ಶೀಘ್ರವೇ ಹೊಸ ರೂಪ ಪಡೆಯಲಿದೆ. ಸೀರತ್ ಅಂದರೆ ಯಾರು ಎಂದು ಯೋಚಿಸುತ್ತಿರಬೇಕಲ್ಲವೇ, ಸ್ವಲ್ಪ ದಿನದ ಹಿಂದೆ ವಿಡಿಯೋ ಮೂಲಕ ಶಾಲೆಯ ಪರಿಸ್ಥಿತಿಯನ್ನು ವಿವರಿಸಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದ ಜಮ್ಮುವಿನ ಬಾಲಕಿ.

ಜಮ್ಮುವಿನ ಬಾಲಕಿಯ ಮನವಿಗೆ ಕರಗಿದ ಜಿಲ್ಲಾಡಳಿತ, ಹಣ ಬಿಡುಗಡೆ: ಶಿಥಿಲಾವಸ್ಥೆಯಲ್ಲಿರುವ ಶಾಲೆಗೆ ಶೀಘ್ರವೇ ಹೊಸ ರೂಪ
ಸೀರತ್ ನಾಜ್
Follow us
ನಯನಾ ರಾಜೀವ್
|

Updated on: Apr 20, 2023 | 10:50 AM

ಸೀರತ್ ನಾಜ್ ಓದುತ್ತಿರುವ ಶಾಲೆಯು ಶೀಘ್ರವೇ ಹೊಸ ರೂಪ ಪಡೆಯಲಿದೆ. ಸೀರತ್ ಅಂದರೆ ಯಾರು ಎಂದು ಯೋಚಿಸುತ್ತಿರಬೇಕಲ್ಲವೇ, ಸ್ವಲ್ಪ ದಿನದ ಹಿಂದೆ ವಿಡಿಯೋ ಮೂಲಕ ಶಾಲೆಯ ಪರಿಸ್ಥಿತಿಯನ್ನು ವಿವರಿಸಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದ ಜಮ್ಮುವಿನ ಬಾಲಕಿ. ತನ್ನ ಶಾಲೆಯಲ್ಲಿ ಕುಳಿತುಕೊಳ್ಳಲು ಬೆಂಚ್ ಇಲ್ಲ, ನೆಲದ ಮೇಲೆ ಕೂರಬೇಕು ಅದರಿಂದ ಬಟ್ಟೆ ಕೊಳೆಯಾಗುತ್ತದೆ, ಶಾಲೆಯ ಕಟ್ಟಡವೆಲ್ಲಾ ಬಿರುಕುಬಿಟ್ಟಿದೆ ಮತ್ತು ಹಳೆಯ ಕಟ್ಟಡ ಹೀಗಾಗಿ ಶಾಲೆಯನ್ನು ದಯವಿಟ್ಟು ಅಭಿವೃದ್ಧಿಪಡಿಸಿ ಎಂದು ಮುದ್ದು ಮುದ್ದು ಮಾತಿನಲ್ಲೇ ಬಾಲಕಿ ಮನವಿ ಮಾಡಿದ್ದಳು.

ವಿಡಿಯೋ ವೈರಲ್ ಆಗಿ ಒಂದು ವಾರದ ಬಳಿಕ ಜಮ್ಮು ಮತ್ತು ಕಾಶ್ಮೀರ ಆಡಳಿತವು ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ. ಇದಕ್ಕಾಗಿ 91 ಲಕ್ಷ ರೂ. ಮಂಜೂರು ಮಾಡಿದೆ. ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ಅವರು ದೂರದ ಲೋಹೈ-ಮಲ್ಹಾರ್ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು.

ಬಾಲಕಿ ವಿಡಿಯೋದಲ್ಲಿ ‘ನೀವು ಹೇಗಿದ್ದೀರಾ, ನೀವು ಎಲ್ಲರ ಮಾತು ಕೇಳುತ್ತೀರಿ ಸಹಾಯ ಮಾಡುತ್ತೀರಿ, ಈಗ ದಯವಿಟ್ಟು ನನ್ನ ಮಾತನ್ನು ಕೂಡ ಕೇಳಿ ಮೋದಿ ಜೀ’ ಎಂದು ಮನವಿ ಮಾಡಿದ್ದಳು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೀಗೆ ನೂರಕ್ಕೂ ಅಧಿಕ ಶಾಲೆಗಳು ಶಿಥಿಲ ಸ್ಥಿತಿಯಲ್ಲಿವೆ ಅವುಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: Viral Video: ಪ್ಲೀಸ್ ಮೋದಿ ಜೀ: ಮುದ್ದು ಮುದ್ದಾಗಿ ಮಾತನಾಡುತ್ತಲೇ ಪ್ರಧಾನಿ ಮೋದಿಯವರ ಬಳಿ ಬೇಡಿಕೆ ಇಟ್ಟ ಜಮ್ಮುವಿನ ಪೋರಿ

ನಾವು ಜಮ್ಮು ಪ್ರಾಂತ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೇರಿ ಒಟ್ಟು 1,000 ಹೊಸ ಶಿಶುವಿಹಾರಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಮತ್ತು ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ಪ್ರತಿ 10 ಜಿಲ್ಲೆಗಳಲ್ಲಿ (ಜಮ್ಮು ಪ್ರಾಂತ್ಯದಲ್ಲಿ) 250 ಶಿಶುವಿಹಾರಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಗ್ರಾಮಸ್ಥರು ಕೂಡ ಶಾಲೆಯ ನವೀಕರಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ನಗರ ಪ್ರದೇಶದ ಶಾಲೆಗಳಂತೆ ಆಧುನಿಕ ಮಾದರಿಯಲ್ಲಿ ಅಭಿವೃದ್ಧಿ ಹೊಂದುವ ಭರವಸೆ ವ್ಯಕ್ತಪಡಿಸಿದರು.

ವಿಡಿಯೋದಲ್ಲಿ ಶಾಲೆಯ ಕಾಂಪೌಂಡ್, ಶಾಲಾ ಕಟ್ಟಡವನ್ನು ತೋರಿಸಿದ್ದಾಳೆ, ಬಳಿಕ ಮೋದಿಯವರೇ ನಿಮ್ಮ ಬಳಿ ನಾನೇನೋ ಹೇಳಬೇಕಿದೆ ಎಂದಿದ್ದಾಳೆ. ಬಾಗಿಲು ಮುಚ್ಚಿರುವ ಎರಡು ರೂಂಗಳನ್ನು ತೋರಿಸಿ ಅದು ಪ್ರಿನ್ಸಿಪಲ್ ಕಚೇರಿ ಹಾಗೂ ಸ್ಟಾಫ್​ರೂಂ ಎಂದು ತಿಳಿಸಿದ್ದಾಳೆ.

ನೋಡಿ ಶಾಲೆಯ ನೆಲವು ಎಷ್ಟು ಗಲೀಜಾಗಿದೆ ನಾವು ಇಲ್ಲಿಯೇ ಕುಳಿತು ಪಾಠ ಕೇಳಬೇಕು, ನಮ್ಮ ಸಮವಸ್ತ್ರಗಳು ಕೂಡ ಹಾಳಾಗುತ್ತಿವೆ, ನಮ್ಮಲ್ಲಿ ಬೆಂಚ್​ಗಳು ಕೂಡ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.

ಮೋದಿಯವರೆ ನೀವು ಇಡೀ ದೇಶದ ಜನರ ಕಷ್ಟಗಳನ್ನು ಕೇಳುತ್ತೀರಿ ನನ್ನ ಮನವಿಯನ್ನು ಕೂಡ ಸ್ವೀಕರಿಸಿ, ನಮಗಾಗಿ ಒಂದು ಶಾಲೆ ಕಟ್ಟಿಸಿಕೊಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ