ಮೊಮ್ಮಗನ ಶವ ನೋಡಿದ ಅಜ್ಜನಿಗೆ ಹೃದಯಾಘಾತ, ಒಟ್ಟಿಗೆ ಅಂತ್ಯಸಂಸ್ಕಾರ

|

Updated on: Jul 10, 2024 | 11:08 AM

ಮೊಮ್ಮಗನ ಶವ ಕಂಡು ಅಜ್ಜ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಮೊಮ್ಮಗನ ಶವ ನೋಡಿದ ತಕ್ಷಣ ಅಜ್ಜನಿಗೆ ಹೃದಯಾಘಾತವಾಗಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಮೊಮ್ಮಗನ ಶವ ನೋಡಿದ ಅಜ್ಜನಿಗೆ ಹೃದಯಾಘಾತ, ಒಟ್ಟಿಗೆ ಅಂತ್ಯಸಂಸ್ಕಾರ
ಪ್ರಾತಿನಿಧಿಕ ಚಿತ್ರ
Follow us on

ಮೊಮ್ಮಗನ ಶವ ಕಂಡ ಅಜ್ಜನಿಗೆ ಹೃದಯಾಘಾತ(Heart Attack)ವಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಭಾರವಾದ ಮನಸ್ಸಿನಿಂದ ಇಬ್ಬರ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಮಧ್ಯಪ್ರದೇಶದ ಛತ್ತರ್​ಪುರ್ ಗ್ರಾಮದಲ್ಲಿ ನಡೆದಿದೆ.
ಮೊಮ್ಮಗ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಮನೆಗೆ ತರಲಾಯಿತು ಅದನ್ನು ಕಂಡ ಅಜ್ಜ ತಕ್ಷಣವೇ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.

ಅಲ್ಲಿದ್ದವರು ಅವರನ್ನು ಎತ್ತಿ ಕೂರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ. ವೈದ್ಯರ ಪ್ರಕಾರ ಆ ಆಘಾತವನ್ನು ತಾಳಲಾರದೆ ಅವರಿಗೆ ಹೃದಯಾಘಾತವಾಗಿದೆ.

ಬಡಮಲ್ಹಾರದ ಒಂದೇ ಮನೆಯಲ್ಲಿ ಇಬ್ಬರು ಸಾವಿಗೀಡಾಗಿರೋದು ಮಾತ್ರವಲ್ಲದೇ ಇಡೀ ನಗರದಲ್ಲಿ ಶೋಕ ಮಡುಗಟ್ಟಿದೆ.

ವಾರ್ಡ್ 11 ಬಡಮಲ್ಹಾರ ನಿವಾಸಿ ವಿವೇಕ್ ತಂದೆ ಪವನ್ ಜೈನ್ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕ ತನ್ನ ಮನೆಯ ಹಿಂದೆ ನಿರ್ಮಿಸಿದ್ದ ಗೋದಾಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಮತ್ತಷ್ಟು ಓದಿ: Viral Video: ಫ್ಯಾಮಿಲಿ ಜತೆ ಹೋಟೆಲ್​​​ಗೆ ಬಂದ ವ್ಯಕ್ತಿಗೆ ಹೃದಯಾಘಾತ, ತುತ್ತು ಅನ್ನ ತಿನ್ನುವ ಮೊದಲೇ ಬಲಿ

ಮೃತರ ಅಜ್ಜ ಮೊಮ್ಮಗನ ಶವವನ್ನು ನೋಡಿದಾಗ ಹೃದಯಾಘಾತವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪಂಚನಾಮ ಸಿದ್ಧಪಡಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಸಾಲಬಾಧೆಯಿಂದ ಬೇಸತ್ತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಶೋಧದ ವೇಳೆ ಪೊಲೀಸರು ಪತ್ರವನ್ನೂ ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ, ಪತ್ರದಲ್ಲಿ ಬರೆದಿರುವ ವಿಷಯಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಮೃತ ವಿವೇಕ್‌ಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:07 am, Wed, 10 July 24