AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರವಾಗಿರೋ ಮಗು ತನಗೆ ಹುಟ್ಟಬೇಕೆಂಬ ಆಸೆಯಿಂದ ಪತಿ ಬಿಟ್ಟು ಮೈದುನನ ಜತೆ ಓಡಿ ಹೋದ ಮಹಿಳೆ

ಎಲ್ಲರಿಗೂ ಮದುವೆಯಾದ ಬಳಿಕ ತಮಗೆ ಮುದ್ದಾದ ಮಕ್ಕಳು ಹುಟ್ಟಬೇಕು, ಅವರ ಪೋಷಣೆಯಲ್ಲಿ ತಮ್ಮ ಜೀವನ ಕಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಈ ಮಹಿಳೆ ತನ್ನ ಪತಿಗಿಂತ ಮೈದುನ ಸುಂದರವಾಗಿದ್ದಾನೆಂದು ಆತನೊಂದಿಗೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ್​ನಲ್ಲಿ ನಡೆದಿದೆ.

ಸುಂದರವಾಗಿರೋ ಮಗು ತನಗೆ ಹುಟ್ಟಬೇಕೆಂಬ ಆಸೆಯಿಂದ ಪತಿ ಬಿಟ್ಟು ಮೈದುನನ ಜತೆ ಓಡಿ ಹೋದ ಮಹಿಳೆ
ಮದುವೆ Image Credit source: India Today
ನಯನಾ ರಾಜೀವ್
|

Updated on: Oct 03, 2024 | 10:54 AM

Share

ಎಲ್ಲರಿಗೂ ಮದುವೆಯಾದ ಬಳಿಕ ತಮಗೆ ಮುದ್ದಾದ ಮಕ್ಕಳು ಹುಟ್ಟಬೇಕು, ಅವರ ಪೋಷಣೆಯಲ್ಲಿ ತಮ್ಮ ಜೀವನ ಕಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಈ ಮಹಿಳೆ ತನ್ನ ಪತಿಗಿಂತ ಮೈದುನ ಸುಂದರವಾಗಿದ್ದಾನೆಂದು ಆತನೊಂದಿಗೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ್​ನಲ್ಲಿ ನಡೆದಿದೆ.

ಓಡಿ ಹೋದ ಬಳಿಕ ಪತಿ ಮತ್ತು ಅತ್ತೆಯ ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಸಂದೇಶ ಕಳುಹಿಸಿದ್ದಳು, ನನಗೆ ಏನೇ ಆದರೂ ಅದಕ್ಕೆ ನೀವೇ ಜವಾಬ್ದಾರರು ಎಂದು ಬೆದರಿಕೆ ಮೆಸೇಜ್ ಕಳುಹಿಸುತ್ತಿದ್ದಳು.

ಮಾಹಿತಿಯ ಪ್ರಕಾರ, ಬುಧವಾರ ಪತಿ ಮತ್ತು ಅವರ ಕುಟುಂಬ ಮಹಿಳೆಯ ವಿರುದ್ಧ ಛತ್ತರ್‌ಪುರ ಎಸ್‌ಪಿಗೆ ದೂರು ನೀಡಿದ ನಂತರ ವಿಷಯ ಬಯಲಿಗೆ ಬಂದಿದೆ.

ತನ್ನ ಹೆಂಡತಿ ನನ್ನನ್ನು ಎಂದೂ ಪ್ರೀತಿಸಲಿಲ್ಲ, ತನ್ನ ಮಗು ಆಕೆಯ ಹೊಟ್ಟೆಯಲ್ಲಿ ಹೊರುವುದು ಆಕೆಗೆ ಇಷ್ಟವಿರಲಿಲ್ಲ, ಬದಲಿಗೆ ತನ್ನ ತಮ್ಮನ ಹಿಂದೆ ಬಿದ್ದಿದ್ದಳು, ಏಕೆಂದರೆ ಆತ ತನಗಿಂತ ಸುಂದರವಾಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ತನಗೆ ಮದುವೆಯಾಗಿ 10 ವರ್ಷಗಳಾಗಿವೆ, ತಾನು ಸುಂದರವಾಗಿಲ್ಲ ಹಾಗಾಗಿ ತನ್ನಿಂದ ಮಗು ಪಡೆಯುವುದು ಇಷ್ಟವಿಲ್ಲವೆಂದು ಆಕೆ ಹೇಳಿದ್ದಳು.

Viral Post: ಮೂರು ವರ್ಷಗಳಿಂದ ಪ್ರೀತಿಸಿ ಮಂಗಳಮುಖಿಯನ್ನು ಮದುವೆಯಾದ ಯುವಕ

ಪತಿ, ತನ್ನ ಕುಟುಂಬದೊಂದಿಗೆ ಇದೀಗ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ್ದು, ತನ್ನ ಹೆಂಡತಿಯಿಂದ ರಕ್ಷಣೆ ಕೇಳಿದ್ದಾನೆ. ಆಕೆ ಯಾರೊಂದಿಗೆ ಬೇಕಾದರೂ ಇರಲಿ ಆದರೆ ನಮಗೆ ಕಿರುಕುಳ ನೀಡುವುದನ್ನು ನಿಲ್ಲಿಸಲಿ ಎಂದು ಮನವಿ ಮಾಡಿದ್ದು, ಪತ್ನಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ