ಉತ್ತರ ಪ್ರದೇಶ: ಯುವಕನನ್ನು ಥಳಿಸಿ ಬಾಯಿಯೊಳಗೆ ಮೂತ್ರ ಮಾಡಿದ್ದ ವ್ಯಕ್ತಿಯ ಬಂಧನ

ಯುವಕನೊಬ್ಬನನ್ನು ಥಳಿಸಿ ಬಾಯಿಯೊಳಗೆ ಮೂತ್ರ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಸೋನ್​ಭದ್ರಾ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಯುವಕನನ್ನು ಕೆಟ್ಟದಾಗಿ ಥಳಿಸಿ, ಮುಖ, ಬಾಯಿಗೆ ಮೂತ್ರ ವಿಸರ್ಜಿಸಿದ್ದಲ್ಲದೇ ಘಟನೆಯ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದಾನೆ.

ಪೊಲೀಸ್
Follow us
ನಯನಾ ರಾಜೀವ್
|

Updated on: Oct 03, 2024 | 9:40 AM

ಯುವಕನೊಬ್ಬನನ್ನು ಥಳಿಸಿ ಬಾಯಿಯೊಳಗೆ ಮೂತ್ರ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಸೋನ್​ಭದ್ರಾ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಯುವಕನನ್ನು ಕೆಟ್ಟದಾಗಿ ಥಳಿಸಿ, ಮುಖ, ಬಾಯಿಗೆ ಮೂತ್ರ ವಿಸರ್ಜಿಸಿದ್ದಲ್ಲದೇ ಘಟನೆಯ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದಾನೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಯನ್ನೂ ಬಂಧಿಸಲಾಗಿದೆ. ಶಕ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವಕನನ್ನು 22 ವರ್ಷದ ಪವನ್ ಖಾರ್ವಾರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 26 ರ ಸಂಜೆ, ಅಂಕಿತ್ ಭಾರ್ತಿ ಎಂಬ ವ್ಯಕ್ತಿ ಮತ್ತು ಅವನ ಕೆಲವು ಸಹಚರರು ಪವನ್ ಮೇಲೆ ಹಲ್ಲೆ ನಡೆಸಿದ್ದಾರೆ.

ಮತ್ತಷ್ಟು ಓದಿ: ಹನುಮಾನ್ ದೇವಾಲಯದಲ್ಲಿ ಅರ್ಚಕನ ಕೊಲೆ; ಕಳ್ಳತನದ ದೂರು ನೀಡಿದ್ದರೂ ತಲೆಕೆಡಿಸಿಕೊಳ್ಳದ ಪೊಲೀಸರು

ಈ ವೇಳೆ ಬಾಯಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಕ್ತಸಿಕ್ತವಾಗಿದ್ದ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಘಟನೆಯ ಬಳಿಕ ಯುವಕ ಸಹೋದರ ಶಿವಕುಮಾರ್ ಖಾರ್ವಾರ್ ಅವರೊಂದಿಗೆ ಮಧ್ಯಪ್ರದೇಶದ ಬೈದಾನ್‌ಗೆ ಹೋಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್ ಹೇಳಿದ್ದಾರೆ.

ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಕಾರಣ ಪೊಲೀಸರಿಗೆ ವಿಷಯವನ್ನು ತಿಳಿಸಲಿಲ್ಲ, ಘಟನೆ ನಡೆದ ಸುಮಾರು ಒಂದು ವಾರದ ನಂತರ, ಶಿವಕುಮಾರ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

ಸಿಎಂ, ಡಿಜಿಪಿ ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದರು ಆಗ ಪೊಲೀಸರ ಗಮನಕ್ಕೆ ಈ ವಿಷಯ ಬಂದಿದೆ. ಆರೋಪಿ ಅಂಕಿತ್ ಭಾರ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ

ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು

ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!

‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್

ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ

ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ

ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ

ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!

ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್