ಮದ್ರಾಸ್ ಹೈಕೋರ್ಟ್‌ನಲ್ಲೂ ತಮಿಳು ಅಧಿಕೃತ ಭಾಷೆಯಾಗಲಿ: ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯ ಮಂಡಿಸಿದ ಸಿಎಂ ವಿಜಯ್

ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳು ಭಾಷೆ ಅಧಿಕೃತವಾಗಲು ತಮಿಳುನಾಡು ಸಿಎಂ ವಿಜಯ್ ನಿರ್ಣಯ ಮಂಡಿಸಿದ್ದಾರೆ. ಸಾಮಾನ್ಯ ಜನರಿಗೆ ಮಾತೃಭಾಷೆಯಲ್ಲಿ ನ್ಯಾಯ ಸಿಗುವ ಉದ್ದೇಶದಿಂದ ಈ ಪ್ರಸ್ತಾಪ. ಸುಪ್ರೀಂ ಕೋರ್ಟ್ 2012ರಲ್ಲಿ ತಿರಸ್ಕರಿಸಿದ್ದರೂ, ಡಿಜಿಟಲ್ ನ್ಯಾಯಾಲಯ ಹಾಗೂ ಎಐ ಭಾಷಾಂತರ ತಂತ್ರಜ್ಞಾನದಿಂದಾಗಿ ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರ ಆಗ್ರಹಿಸಿದೆ. ಉತ್ತರ ಭಾರತದ ಹೈಕೋರ್ಟ್‌ಗಳಲ್ಲಿ ಹಿಂದಿ ಬಳಕೆಗೆ ಅವಕಾಶವಿರುವಂತೆ ತಮಿಳಿಗೂ ಅವಕಾಶ ಬೇಕೆಂಬುದು ಇದರ ಸಾರ.

ಮದ್ರಾಸ್ ಹೈಕೋರ್ಟ್‌ನಲ್ಲೂ ತಮಿಳು ಅಧಿಕೃತ ಭಾಷೆಯಾಗಲಿ: ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯ ಮಂಡಿಸಿದ ಸಿಎಂ ವಿಜಯ್
ವಿಜಯ್

Updated on: Sep 03, 2026 | 2:08 PM

ಚೆನ್ನೈ, ಸೆಪ್ಟೆಂಬರ್ 03: ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಕಲಾಪ ಮತ್ತು ತೀರ್ಪುಗಳಲ್ಲಿ ಇಂಗ್ಲಿಷ್ ಜೊತೆಗೆ ತಮಿಳು ಭಾಷೆಯನ್ನೂ ಬಳಸಲು ಅನುಮತಿ ನೀಡುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ ಮಂಡಿಸಿದ್ದಾರೆ. ಸಾಮಾನ್ಯ ಜನರಿಗೆ ತಮ್ಮ ಭಾಷೆಯಲ್ಲೇ ನ್ಯಾಯ ಸಿಗುವಂತಾಗಲು ಸಂವಿಧಾನದ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳು ಇದಕ್ಕೆ ಒಪ್ಪಿಗೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ನಿರ್ಣಯದ ಅನ್ವಯ, ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿಗಳು, ದಾಖಲೆಗಳು ಮತ್ತು ವಕೀಲರ ವಾದ-ಪ್ರತಿವಾದಗಳನ್ನು ತಮಿಳಿನಲ್ಲೇ ಸಲ್ಲಿಸಲು ಅವಕಾಶ ಕೋರಲಾಗಿದೆ. ಜೊತೆಗೆ ನ್ಯಾಯಾಲಯದ ಆದೇಶಗಳು ಹಾಗೂ ತೀರ್ಪುಗಳನ್ನು ತಮಿಳಿನಲ್ಲೇ ಪ್ರಕಟಿಸಿ, ಅಗತ್ಯ ಕಾನೂನು ಬಳಕೆಗಾಗಿ ಇಂಗ್ಲಿಷ್ ಅನುವಾದವನ್ನು ಜತೆಗಿರಿಸಲು ಪ್ರಸ್ತಾಪಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ತಮಿಳು ಭಾಷೆ ಬಳಕೆಯಲ್ಲಿದ್ದು, ಇದನ್ನು ಹೈಕೋರ್ಟ್‌ಗೂ ವಿಸ್ತರಿಸುವುದು ಸಹಜವಾದ ಮುಂದಿನ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಹಿಂದೆ 2006 ರಲ್ಲಿ ಇಂತಹದೇ ನಿರ್ಣಯ ಅಂಗೀಕಾರವಾಗಿದ್ದರೂ, 2012 ರಲ್ಲಿ ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿತ್ತು. ಆದರೆ ಈಗ ಡಿಜಿಟಲ್ ನ್ಯಾಯಾಲಯಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತ್ವರಿತ ಭಾಷಾಂತರ ತಂತ್ರಜ್ಞಾನಗಳು ಲಭ್ಯವಿರುವುದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ. ಉತ್ತರ ಭಾರತದ ಹಲವು ಹೈಕೋರ್ಟ್‌ಗಳಲ್ಲಿ ಹಿಂದಿ ಬಳಕೆಗೆ ನೀಡಿರುವಂತೆಯೇ, ತಮಿಳುನಾಡಿಗೂ ತನ್ನ ಮಾತೃಭಾಷೆ ಬಳಕೆಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳು ಸಮ್ಮತಿ ನೀಡಬೇಕೆಂಬುದು ಈ ನಿರ್ಣಯದ ಪ್ರಮುಖ ಆಶಯವಾಗಿದೆ.

ನ್ಯಾಯಾಲಯ ನೀಡುವ ತೀರ್ಪುಗಳು ಮತ್ತು ಆದೇಶಗಳನ್ನು ತಮಿಳು ಭಾಷೆಯಲ್ಲೇ ಪ್ರಕಟಿಸಬೇಕು. ಕಾನೂನು ಅಗತ್ಯತೆಗಳಿಗಾಗಿ ಅದರ ಜತೆಗೆ ಇಂಗ್ಲಿಷ್ ಅಧಿಕೃತ ಅನುವಾದ ಲಭ್ಯವಿರಲಿದೆ. ಹೈಕೋರ್ಟ್‌ನಲ್ಲಿ ಅರ್ಜಿಗಳು, ದಾಖಲೆಗಳು ಹಾಗೂ ವಕೀಲರ ವಾದ-ಪ್ರತಿವಾದಗಳನ್ನು ತಮಿಳಿನಲ್ಲೇ ಸಲ್ಲಿಸಲು ನಿಯಮಬದ್ಧ ಅವಕಾಶ ಕಲ್ಪಿಸಬೇಕು.

ಮತ್ತಷ್ಟು ಓದಿ: ಯೂನಿಫಾರ್ಮ್ ನಲ್ಲಿದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು: ಪೊಲೀಸರಿಗೆ ಹೈಕೋರ್ಟ್ ಫುಲ್ ಕ್ಲಾಸ್

ನ್ಯಾಯಾಲಯ ನೀಡುವ ತೀರ್ಪುಗಳು ಮತ್ತು ಆದೇಶಗಳನ್ನು ತಮಿಳು ಭಾಷೆಯಲ್ಲೇ ಪ್ರಕಟಿಸಬೇಕು. ಕಾನೂನು ಅಗತ್ಯತೆಗಳಿಗಾಗಿ ಅದರ ಜತೆಗೆ ಇಂಗ್ಲಿಷ್ ಅಧಿಕೃತ ಅನುವಾದ ಲಭ್ಯವಿರಲಿದೆ. ನ್ಯಾಯಮೂರ್ತಿಗಳು, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ತಮಿಳು ಕಾನೂನು ಪರಿಭಾಷೆ ಮತ್ತು ತಾಂತ್ರಿಕ ಅನುವಾದದಲ್ಲಿ ವಿಶೇಷ ತರಬೇತಿ ನೀಡುವ ವ್ಯವಸ್ಥೆ ರೂಪಿಸಬೇಕು.

ಕೆಳ ನ್ಯಾಯಾಲಯಗಳಲ್ಲಿ ಯಶಸ್ವಿ ಬಳಕೆ: ತಮಿಳುನಾಡಿನ ಜಿಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳು, ನ್ಯಾಯಮಂಡಳಿಗಳಲ್ಲಿ ಈಗಾಗಲೇ ತಮಿಳು ಯಶಸ್ವಿಯಾಗಿ ಬಳಕೆಯಲ್ಲಿದೆ. ಆದ್ದರಿಂದ ಇದನ್ನು ಹೈಕೋರ್ಟ್‌ಗೂ ವಿಸ್ತರಿಸುವುದು ಆಡಳಿತಾತ್ಮಕವಾಗಿ ಸಹಜವಾದ ಮುಂದಿನ ಹೆಜ್ಜೆಯಾಗಿದೆ.

ಇಂಗ್ಲಿಷ್ ತೆಗೆದುಹಾಕುವ ಉದ್ದೇಶವಿಲ್ಲ: ಇದು ಇಂಗ್ಲಿಷ್ ಭಾಷೆಯನ್ನು ಬದಿಗೊತ್ತುವ ನಿರ್ಧಾರವಲ್ಲ; ಬದಲಿಗೆ ಸಾಮಾನ್ಯ ನಾಗರಿಕರಿಗೆ ತಮ್ಮ ಕೇಸಿನ ವಿವರ ಮತ್ತು ನ್ಯಾಯದ ಪ್ರಕ್ರಿಯೆ ನೇರವಾಗಿ ಅರ್ಥವಾಗುವಂತೆ ಮಾಡುವ ಜನಪರ ಕ್ರಮವಾಗಿದೆ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿಯ ನಿರ್ಣಯವನ್ನು ತಮಿಳುನಾಡು ವಿಧಾನಸಭೆ 2006 ರಲ್ಲೇ ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ 2012ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದೀಗ ಬದಲಾದ ಕಾಲಘಟ್ಟದಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯಿಸಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ರಿಯಲ್-ಟೈಮ್ ಅನುವಾದ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿರುವುದರಿಂದ, ಭಾಷಾಂತರ ಸಮಸ್ಯೆಗಳು ಸುಲಭವಾಗಿ ಬಗೆಹರಿಯಲಿವೆ ಎಂಬುದು ಸರ್ಕಾರದ ಬಲವಾದ ವಾದವಾಗಿದೆ.

ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಈಗಾಗಲೇ ಸಂವಿಧಾನದ 348(2) ನೇ ವಿಧಿಯಡಿ ಹಿಂದಿ ಭಾಷಾ ಬಳಕೆಗೆ ರಾಷ್ಟ್ರಪತಿಗಳ ಸಮ್ಮತಿ ನೀಡಲಾಗಿದೆ. ಅದೇ ಮಾದರಿಯನ್ನು ದಕ್ಷಿಣದ ರಾಜ್ಯಗಳಿಗೂ ಅನ್ವಯಿಸಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us