Mahakumbh
ಪ್ರಯಾಗರಾಜ್: ಕಳೆದ 45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭವು (Mahakumbh) 3 ಗಿನ್ನೆಸ್ ಪುಸ್ತಕದ ವಿಶ್ವ ದಾಖಲೆಗಳಿಗೆ ಸಾಕ್ಷಿಯಾಗಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭ ಬುಧವಾರ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ‘ಮಹಾಶಿವರಾತ್ರಿ ಸ್ನಾನ’ದೊಂದಿಗೆ ಮುಕ್ತಾಯಗೊಂಡಿತು. ನಂಬಿಕೆಯ ಸಂಗಮದ ಬಗ್ಗೆ ಮನಮುಟ್ಟುವ ಸಂಗತಿಗಳು ಬೆಳಕಿಗೆ ಬಂದವು. ಅತಿ ಉದ್ದದ ಕೈ ಮುದ್ರಣ ಚಿತ್ರಕಲೆಯಿಂದ ಹಿಡಿದು 70 ದೇಶಗಳಿಂದ ಕುಂಭಮೇಳಕ್ಕೆ ಭೇಟಿ ನೀಡುವ ಜನರವರೆಗೆ, ಮಹಾಕುಂಭ 2025 ತನ್ನ ಭವ್ಯತೆಯಿಂದ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾಕುಂಭವನ್ನು “ವಿಶ್ವದ ಇತಿಹಾಸದಲ್ಲಿ ನಿಜವಾಗಿಯೂ ಎಂದಿಗೂ ಮರೆಯಲಾಗದ ಉತ್ಸವ” ಎಂದು ಕರೆದಿದ್ದಾರೆ. ಮಹಾ ಕುಂಭಮೇಳದ ಅಗಾಧ ಯಶಸ್ಸಿಗೆ ಋಷಿಗಳು, ಸಾಧುಗಳು ಮತ್ತು ಧಾರ್ಮಿಕ ನಾಯಕರ ಆಶೀರ್ವಾದವೇ ಕಾರಣ ಎಂದು ಅವರು ಹೇಳಿದ್ದಾರೆ.ಮಹಾ ಕುಂಭವು ಆರು ವಿಶೇಷ ಸ್ನಾನ ದಿನಾಂಕಗಳಿಗೆ ಸಾಕ್ಷಿಯಾಗಿದೆ. ಜಗತ್ತಿನಾದ್ಯಂತ ಹಲವು ದೇಶಗಳ ಭಕ್ತರು ಭಾಗವಹಿಸಿದ್ದ ಮಹಾಕುಂಭ ಮೇಳದ ಬಗ್ಗೆ ಇರುವ 7 ಅತ್ಯಂತ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪರವಾಗಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ
- ಗಂಗಾ ಶುಚಿಗೊಳಿಸುವ ದಾಖಲೆ ಮಾಡಲಾಯಿತು. 4 ವಿಭಿನ್ನ ಸ್ಥಳಗಳಲ್ಲಿ 360 ಜನರಿಂದ ಶುಚಿಗೊಳಿಸುವ ದಾಖಲೆ ನಿರ್ಮಿಸಲಾಗಿದೆ.
- ಕೈಯಿಂದ ಚಿತ್ರ ಬಿಡಿಸುವುದರಲ್ಲಿ 10,102 ಜನರ ದಾಖಲೆ ನಿರ್ಮಿಸಲಾಯಿತು. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ 10,000ಕ್ಕೂ ಹೆಚ್ಚು ಜನರು ಒಟ್ಟಾಗಿ ಸೇರಿ ವೈವಿಧ್ಯತೆಯಲ್ಲಿ ಏಕತೆ, ಸಾರ್ವಜನಿಕ ಭಾಗವಹಿಸುವಿಕೆ, ಸಾಮಾಜಿಕ ಸಾಮರಸ್ಯ ಮತ್ತು ಸಮಗ್ರತೆಯ ಮನೋಭಾವದ ಮೂಲಕ ತಮ್ಮ ಭಾವನೆಗಳನ್ನು ಪ್ರದರ್ಶಿಸಿದರು.
- 2019ರಲ್ಲಿ ನಡೆದ ಕುಂಭಮೇಳದಲ್ಲಿ 7,660 ಜನರು ಒಟ್ಟಾಗಿ ಸೇರಿ ಈ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಈ ಬಾರಿ ಅದನ್ನು ಬಿಟ್ಟು ಹೊಸ ದಾಖಲೆಯನ್ನು ಸ್ಥಾಪಿಸುವ ಪ್ರಯತ್ನ ಮಾಡಲಾಗಿದೆ.
- ವ್ಯಾಪಕ ಪ್ರಚಾರದ ಮೂಲಕ 19,000 ಜನರ ದಾಖಲೆ. ಈ ಹಿಂದೆ 10,000 ಜನರಿದ್ದರು. 2019ರ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ 10,000 ನೈರ್ಮಲ್ಯ ಕಾರ್ಮಿಕರು ಸಿಂಕ್ರೊನೈಸ್ಡ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದರು.
- ಕುಂಭಮೇಳದಲ್ಲಿ ಪ್ರತಿದಿನ 1.25 ಕೋಟಿಗೂ ಹೆಚ್ಚು ಭಕ್ತರು ಧಾರ್ಮಿಕ ಸಭೆಯಲ್ಲಿ ಸೇರುತ್ತಿದ್ದರು.
- 50 ಲಕ್ಷಕ್ಕೂ ಹೆಚ್ಚು ವಿದೇಶಿಯರು ಮಹಾಕುಂಭಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದರು. ಈ ವರ್ಷ ಮಹಾಕುಂಭಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಅಮೆರಿಕಾ, ಚೀನಾ, ರಷ್ಯಾ ಮತ್ತು ಇತರ ಹಲವು ದೇಶಗಳ ಜನಸಂಖ್ಯೆಯನ್ನು ಮೀರಿಸಿದೆ.
- ಈ ಬಾರಿ ಮಹಾ ಕುಂಭ ಮೇಳಕ್ಕಾಗಿ 16,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲಾಗಿದ್ದು, ಸುಮಾರು 5 ಕೋಟಿ ಭಕ್ತರು ತೀರ್ಥಯಾತ್ರೆಗೆ ಆಗಮಿಸಿದ್ದಾರೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ