ಲಖನೌ: ಅಖಿಲ ಭಾರತೀಯ ಆಖಾಡ ಪರಿಷದ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ ಸಾವಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಅವರ ಶವ ನಿನ್ನೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ಬಘಂಬರಿ ಮಠದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಾಂತ ಗಿರಿಯವರ ಶವ ಮೊದಲು ಕಂಡಿದ್ದು ಅವರ ಶಿಷ್ಯನಿಗೆ. ಅಷ್ಟೇ ಅಲ್ಲ, ಸ್ವಾಮೀಜಿ ಮೃತಪಟ್ಟ ಜಾಗದಲ್ಲಿ ಏಳೆಂಟು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದೆ. ವಿಡಿಯೋ ಕೂಡ ರೆಕಾರ್ಡ್ ಮಾಡಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುಪಿ ಪೊಲೀಸರು ಮಹಾಂತ ಗಿರಿಯವರ ಒಬ್ಬ ಶಿಷ್ಯ ಮತ್ತು ಇಬ್ಬರು ಪೂಜಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೇಶದ ಸಾಧುಗಳ ಅತಿದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷರ ಸಾವಿಗೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಆದರೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡಿದ್ದು, ಕೇಂದ್ರ ಸರ್ಕಾರದ ಮೇಲೆಯೂ ಕೆಲವರು ಆರೋಪ ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದವರೂ ಇದ್ದಾರೆ. ಮಧ್ಯಪ್ರದೇಶದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಜ್ಜನ್ ವರ್ಮಾ, ಮಹಾಂತ ಗಿರಿ ಅವರದ್ದು ಆತ್ಮಹತ್ಯೆಯಲ್ಲ. ಕೆಲವು ಪ್ರಮುಖ ಕೇಂದ್ರ ನಾಯಕರ ಆಜ್ಞೆ ಮೇರೆಗೆ ಅವರನ್ನು ಕೊಲ್ಲಲಾಗಿದೆ ಎಂದು ಆರೋಪ ಮಾಡಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆ ಸಿಬಿಐ ತನಿಖೆಗೆ ಆಗ್ರಹಿಸುತ್ತಿವೆ. ಅಖಾಡ ಪರಿಷತ್ನ ಉಪಾಧ್ಯಕ್ಷ ದೇವೇಂದ್ರ ಸಿಂಗ್ ಕೂಡ ಸಿಬಿಐ ತನಿಖೆ ಆಗಬೇಕು ಎಂದು ಹೇಳುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ
ಆಖಾಡ ಪರಿಷದ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿಗೆ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಯಾಗ್ರಾಜ್ಗೆ ತೆರಳಿ ಅಂತಿಮ ಗೌರವ ಸಲ್ಲಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಹಾಂತ ಗಿರಿಯವರ ಸಾವಿನಿಂದ ನಮಗೆಲ್ಲರಿಗೂ ನೋವಾಗಿದೆ. ಆದರೆ ಯಾವುದೇ ಊಹಾಪೋಹಗಳಿಂದ ದೂರ ಇರಿ. ನಾಳೆ 5 ಸದಸ್ಯರಿರುವ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ. ಅದಾದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಹಾಗೇ, ಸಾವಿನ ಸ್ಥಳದಿಂದ ಒಂದಷ್ಟು ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾವಿನ ಪ್ರಕರಣದಲ್ಲಿ ಆರೋಪಿಯಾದವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಸಾಯುವ ಯೋಚನೆ ಮಾಡಿದ ಸ್ಪರ್ಧಿ; ಪರಪುರುಷನ ಜತೆ ಲವ್ವಿ-ಡವ್ವಿಯೇ ಇದಕ್ಕೆ ಕಾರಣ
Card Tokenisation: ಇನ್ನೇನು 2022ರ ಜನವರಿಯಿಂದ ಬರಲಿದೆ ಕಾರ್ಡ್ ಟೋಕನೈಸೇಷನ್; ಏನಿದು, ಉಪಯೋಗ ಏನು?