AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Card Tokenisation: ಇನ್ನೇನು 2022ರ ಜನವರಿಯಿಂದ ಬರಲಿದೆ ಕಾರ್ಡ್​ ಟೋಕನೈಸೇಷನ್; ಏನಿದು, ಉಪಯೋಗ ಏನು?

2022ರ ಜನವರಿಯಿಂದ ಕಾರ್ಡ್ ಟೋಕನೈಸೇಷನ್ ಬರಲಿದೆ. ಏನಿದು ಟೋಕನೈಸೇಷನ್? ಇದು ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇಲ್ಲಿದೆ.

Card Tokenisation: ಇನ್ನೇನು 2022ರ ಜನವರಿಯಿಂದ ಬರಲಿದೆ ಕಾರ್ಡ್​ ಟೋಕನೈಸೇಷನ್; ಏನಿದು, ಉಪಯೋಗ ಏನು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Sep 21, 2021 | 1:58 PM

Share

ನವದೆಹಲಿ: 2022ರ ಜನವರಿಯಿಂದ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಮಾಡುವ ಆನ್‌ಲೈನ್ ಪಾವತಿಗಳು ಇನ್ನೂ ಹೆಚ್ಚು ಸುರಕ್ಷಿತವಾಗಿರುತ್ತದೆ. ಏಕೆಂದರೆ ನಿಮ್ಮ ಕಾರ್ಡ್ ವಿವರಗಳನ್ನು ಇನ್ನು ಮುಂದೆ ಅಮೆಜಾನ್, ಫ್ಲಿಪ್‌ಕಾರ್ಟ್​ನಂತಹ ಪ್ಲಾಟ್​ಫಾರ್ಮ್​ಗಳಲ್ಲಿ ಸಂಗ್ರಹಿಸುವುದಿಲ್ಲ. ಹಾಗಾಗಿ ಡೇಟಾ ಕಳವಿನ ಭಯ ಇರುವುದಿಲ್ಲ. ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ಗ್ರಾಹಕರ ಕಾರ್ಡ್ ವಿವರಗಳನ್ನು ಸೇವ್ ಮಾಡಲು ಕೇಳುತ್ತವೆ. ಇದರಿಂದ ಖರೀದಿ ಮಾಡಿದಾಗ ಪಾವತಿಯನ್ನು ವೇಗವಾಗಿ ಮಾಡಬಹುದು. ಇಂಥ ಸನ್ನಿವೇಶದಲ್ಲಿ ಡೇಟಾ ಕಳುವಿನ ಅಪಾಯವು ಹೆಚ್ಚಿರುತ್ತದೆ. ಆದರೆ ಈಗ ಪಾವತಿ ಮಾಡುವಾಗ ಕಾರ್ಡ್​ಗಳ ಟೋಕನೈಸೇಷನ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿಸುವುದರಿಂದ ಅಪಾಯವನ್ನು ತಪ್ಪಿಸಬಹುದು.

ಟೋಕನೈಸೇಷನ್ ಎಂದರೇನು? ಟೋಕನೈಸೇಷನ್ ಎನ್ನುವುದು ಕಾರ್ಡ್ ವಿವರಗಳನ್ನು ‘ಟೋಕನ್’ ಎಂಬ ಪರ್ಯಾಯ ಕೋಡ್‌ನೊಂದಿಗೆ ಬದಲಾಯಿಸುವ ಪ್ರಕ್ರಿಯೆ. ಈ ಟೋಕನ್ ಕಾರ್ಡ್, ಟೋಕನ್ ರಿಕ್ವೆಸ್ಟರ್ (ಕಾರ್ಡ್‌ನ ಟೋಕನೈಸೇಷನ್‌ಗಾಗಿ ಗ್ರಾಹಕರ ಕೋರಿಕೆಯನ್ನು ಸ್ವೀಕರಿಸುತ್ತದೆ ಮತ್ತು ಟೋಕನ್ ನೀಡಲು ಕಾರ್ಡ್‌ ನೆಟ್‌ವರ್ಕ್‌ಗೆ ರವಾನಿಸುವ ಸಂಸ್ಥೆ) ಮತ್ತು ಡಿವೈಸ್ (ಸಾಧನ) ಸಂಯೋಜನೆಗೆ ವಿಶಿಷ್ಟವಾಗಿದೆ. ಈ ವ್ಯವಸ್ಥೆಯನ್ನು ಪಾಯಿಂಟ್-ಆಫ್-ಸೇಲ್ (ಪಿಒಎಸ್) ಟರ್ಮಿನಲ್‌ಗಳು ಮತ್ತು ಕ್ಯೂಆರ್ ಕೋಡ್ ಪಾವತಿಗಳಲ್ಲಿ ಪಾವತಿ ಮಾಡಲು ಸಹ ಬಳಸಲಾಗುತ್ತದೆ.

ತಮ್ಮ ಸಿಸ್ಟಂನಲ್ಲಿ ಜನವರಿ 1, 2022ರಿಂದ ಕಾರ್ಡ್ ವಿವರಗಳನ್ನು ಸಂಗ್ರಹಿಸದಂತೆ ಆರ್‌ಬಿಐ ಈಗ ವ್ಯಾಪಾರಿಗಳಿಗೆ ಸೂಚಿಸಿದೆ. ಏಕೆಂದರೆ ಇದು ಕಾರ್ಡ್-ಆನ್-ಫೈಲ್ (CoF) ವಹಿವಾಟುಗಳ ಟೋಕನೈಸೇಷನ್ ಅನ್ನು ವಿಸ್ತರಿಸಿದೆ-ಅಲ್ಲಿ ಕಾರ್ಡ್ ವಿವರಗಳನ್ನು ವ್ಯಾಪಾರಿಗಳು ಸಂಗ್ರಹಿಸುತ್ತಿದ್ದರು. ಜನವರಿ 1, 2022ರಿಂದ ಜಾರಿಗೆ ಬರುವಂತೆ, ಕಾರ್ಡ್ ನೀಡುವವರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ, ಕಾರ್ಡ್ ವಹಿವಾಟು ಅಥವಾ ಪಾವತಿ ನೆಟ್​ವರ್ಕ್​ನಲ್ಲಿ ಯಾವುದೇ ಸಂಸ್ಥೆಯು ನಿಜವಾದ ಕಾರ್ಡ್ ಡೇಟಾವನ್ನು ಸಂಗ್ರಹಿಸಬಾರದು. ಈ ಹಿಂದೆ ಸಂಗ್ರಹಿಸಿದ ಯಾವುದೇ ಡೇಟಾವನ್ನು ಪೂರ್ತಿಯಾಗಿ ತೆಗೆದುಹಾಕಬೇಕು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಹೇಳಿದೆ. ಆರ್‌ಬಿಐ ಈ ಮೊದಲು ಮಾರ್ಚ್ 2020ರಲ್ಲಿ ಡೇಟಾ ಸಂಗ್ರಹಣೆಯನ್ನು ನಿರ್ಬಂಧಿಸಿತ್ತು. ಆದರೆ ಗಡುವನ್ನು ಡಿಸೆಂಬರ್ 31, 2021ಕ್ಕೆ ವಿಸ್ತರಿಸಿತು.

ನಿಮ್ಮ ಕಾರ್ಡ್‌ಗಳನ್ನು ಟೋಕನೈಸ್ ಮಾಡುವುದು ಹೇಗೆ? ಟೋಕನ್ ವಿನಂತಿದಾರರು ಒದಗಿಸಿದ ಆ್ಯಪ್‌ನಲ್ಲಿ ವಿನಂತಿಯನ್ನು ಮಾಡುವ ಮೂಲಕ ಕಾರ್ಡ್​ದಾರರು ತಮ್ಮ ಕಾರ್ಡ್‌ಗಳನ್ನು ಟೋಕನೈಸ್ ಮಾಡಿಕೊಳ್ಳಬಹುದು. ಟೋಕನ್ ವಿನಂತಿಯು ಕಾರ್ಡ್ ನೆಟ್​ವರ್ಕ್​ಗೆ ವಿನಂತಿಯನ್ನು ರವಾನಿಸುತ್ತದೆ. ಇದು ಕಾರ್ಡ್ ನೀಡುವವರ ಒಪ್ಪಿಗೆಯೊಂದಿಗೆ ಕಾರ್ಡ್, ಟೋಕನ್ ವಿನಂತಿದಾರರು ಮತ್ತು ಡಿವೈಸ್ ಸಂಯೋಜನೆಗೆ ಅನುಗುಣವಾದ ಟೋಕನ್ ಅನ್ನು ನೀಡುತ್ತದೆ. ಕಾಂಟ್ಯಾಕ್ಟ್​ಲೆಸ್ (ಸಂಪರ್ಕರಹಿತ) ಕಾರ್ಡ್ ವಹಿವಾಟುಗಳು, ಕ್ಯೂಆರ್ ಕೋಡ್‌ಗಳು ಮತ್ತು ಅಪ್ಲಿಕೇಷನ್‌ಗಳ ಮೂಲಕ ಪಾವತಿಗಳಂತಹ ಎಲ್ಲ ಬಳಕೆಯ ಪ್ರಕರಣಗಳು ಮತ್ತು ಚಾನೆಲ್‌ಗಳಿಗೆ ಮೊಬೈಲ್ ಫೋನ್‌ಗಳು ಅಥವಾ ಟ್ಯಾಬ್​ಲೆಟ್‌ಗಳ ಮೂಲಕ ಟೋಕನೈಸೇಷನ್ ಅನುಮತಿಸಲಾಗಿದೆ.

ವೀಸಾ ಮತ್ತು ಮಾಸ್ಟರ್‌ಕಾರ್ಡ್‌ನಂತಹ ಕಂಪೆನಿಗಳು ಟೋಕನ್ ಸೇವಾ ಪೂರೈಕೆದಾರರಂತೆ ಕಾರ್ಯ ನಿರ್ವಹಿಸುತ್ತವೆ ಮತ್ತು ಮೊಬೈಲ್ ಪಾವತಿ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಟೋಕನ್‌ಗಳನ್ನು ಒದಗಿಸುತ್ತವೆ. ಇದರಿಂದ ಅವುಗಳನ್ನು ಕಾರ್ಡ್ ಸಂಖ್ಯೆ ಮತ್ತು ಸಿವಿವಿ (ಕಾರ್ಡ್​ ಹಿಂಭಾಗದಲ್ಲಿ ಇರುವ ಮೂರಂಕಿಯ ಸಂಖ್ಯೆ) ಬದಲು ಖರೀದಿಗೆ ಪಾವತಿ ಮಾಡಬಹುದು.

ಅದೇ ರೀತಿ, ನಿಮ್ಮ ಕಾರ್ಡ್ ವಿವರಗಳನ್ನು ಗೂಗಲ್ ಪೇ ಅಥವಾ ಪೇಟಿಎಂನಂತಹ ಡಿಜಿಟಲ್ ವ್ಯಾಲೆಟ್‌ಗಳಲ್ಲಿ ನಮೂದಿಸಿದಾಗ ಈ ಪ್ಲಾಟ್‌ಫಾರ್ಮ್‌ಗಳು ಆಯಾ TSP (ಟೋಕನ್ ಸರ್ವೀಸ್ ಪ್ರೊವೈಡರ್ಸ್)ಗಳನ್ನು ಟೋಕನ್ ಕೇಳುತ್ತವೆ. TSPಗಳು ಗ್ರಾಹಕರ ಕಾರ್ಡ್ ನೀಡುವ ಬ್ಯಾಂಕ್​ನಿಂದ ಡೇಟಾ ಪರಿಶೀಲನೆಗೆ ವಿನಂತಿಸುತ್ತವೆ. ಡೇಟಾವನ್ನು ಪರಿಶೀಲಿಸಿದ ನಂತರ, ಒಂದು ವಿಶಿಷ್ಟ ಕೋಡ್ ಅನ್ನು ಸೃಷ್ಟಿಸಲಾಗುತ್ತದೆ ಮತ್ತು ಬದಲಾಯಿಸಲಾಗದಂತೆ ಗ್ರಾಹಕರ ಡಿವೈಸ್​ಗೆ ಜೋಡಣೆ ಮಾಡಲಾಗುತ್ತದೆ ಮತ್ತು ಅದನ್ನು ಬದಲಾಯಿಸಲಾಗುವುದಿಲ್ಲ. ಹೀಗಾಗಿ, ಪ್ರತಿ ಬಾರಿ ಗ್ರಾಹಕರು ತಮ್ಮ ಡಿವೈಸ್​ ಅವನ್ನು ಪಾವತಿ ಮಾಡಲು ಬಳಸುವಾಗ, ಗ್ರಾಹಕರ ನಿಜವಾದ ಡೇಟಾವನ್ನು ಪ್ಲಾಟ್‌ಫಾರ್ಮ್ ಬಹಿರಂಗಪಡಿಸದೆ, ಟೋಕನ್ ಅನ್ನು ಹಂಚಿಕೊಳ್ಳುವ ಮೂಲಕ ವಹಿವಾಟನ್ನು ಅಧಿಕೃತಗೊಳಿಸಲು ಸಾಧ್ಯವಾಗುತ್ತದೆ. ಮೊಬೈಲ್ ವಾಲೆಟ್‌ಗಳು ಮತ್ತು ಫ್ಲಿಪ್‌ಕಾರ್ಟ್‌ನಂತಹ ಭೌತಿಕ ಅಥವಾ ಆನ್‌ಲೈನ್ ಸ್ಟೋರ್‌ಗಳಲ್ಲಿ ಪಾವತಿಗಳಿಗೆ ರಕ್ಷಣೆ ಒದಗಿಸಲು ಟೋಕನ್‌ಗಳನ್ನು ಸೃಷ್ಟಿಸಬಹುದು.

ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್​ಲೈನ್​ನಲ್ಲಿ ಸೇವ್​ ಆಗಲ್ಲ; ಇಲ್ಲಿದೆ ಆರ್​ಬಿಐ ಹೊಸ ನಿಯಮ

(Card Tokenisation Will Roll Out From 2022 January Here Is The Must Know Details About Customers)

Published On - 1:56 pm, Tue, 21 September 21

ಪುಣ್ಯಕ್ಷೇತ್ರ ದರ್ಶನದಿಂದ ಏನೇನು ಪ್ರಯೋಜನ? ತಿಳಿಯಿರಿ
ಪುಣ್ಯಕ್ಷೇತ್ರ ದರ್ಶನದಿಂದ ಏನೇನು ಪ್ರಯೋಜನ? ತಿಳಿಯಿರಿ
ಕೃತ್ತಿಕಾ ನಕ್ಷತ್ರದ ಪ್ರಭಾವದಿಂದಾಗಿ ಈ ದಿನ ಹಲವು ರಾಶಿಯವರಿಗೆ ಶುಭಕರ
ಕೃತ್ತಿಕಾ ನಕ್ಷತ್ರದ ಪ್ರಭಾವದಿಂದಾಗಿ ಈ ದಿನ ಹಲವು ರಾಶಿಯವರಿಗೆ ಶುಭಕರ
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್