Fixed Deposits: ಎಸ್ಬಿಐ, ಪಿಎನ್ಬಿ, ಬಿಒಬಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 5 ವರ್ಷಗಳ ಎಫ್‌ಡಿ ದರ ಹೋಲಿಕೆ ಇಂತಿದೆ
ಫಿಕ್ಸೆಡ್ ಡೆಪಾಸಿಟ್ಸ್ಗಳ ಮೇಲೆ 5 ವರ್ಷಗಳ ಅವಧಿಗೆ ಪ್ರಮುಖ ಬ್ಯಾಂಕ್ಗಳಲ್ಲಿ ಬಡ್ಡಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್- ಎಫ್‌ಡಿ) ಹೂಡಿಕೆಯು ಸಾಂಪ್ರದಾಯಿಕ ಮತ್ತು ವಿಶ್ವಾಸಾರ್ಹ ಮಾರ್ಗಗಳಲ್ಲಿ ಒಂದಾಗಿದೆ. ಬಡ್ಡಿದರಗಳ ಕುಸಿತದ ಹೊರತಾಗಿಯೂ ಇದು ಸುರಕ್ಷಿತ ಮಾರ್ಗ ಎಂದು ಪರಿಗಣಿಸುವುದರಿಂದ ಇದು ಅನೇಕರಿಗೆ ಆದ್ಯತೆಯ ಆಯ್ಕೆಯಾಗಿದೆ. ಎಫ್‌ಡಿಗಳು ನಿರ್ದಿಷ್ಟ ಅವಧಿಯ ಆಧಾರದ ಮೇಲೆ ನಿಶ್ಚಿತ ಆದಾಯವನ್ನು (Fixed Income) ನೀಡುತ್ತವೆ. ದೇಶದ ಎಲ್ಲ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳು 7 ದಿನಗಳಿಂದ 10 ವರ್ಷಗಳವರೆಗಿನ ಎಫ್‌ಡಿ ಅವಧಿಯನ್ನು ನೀಡುತ್ತವೆ. ವಿವಿಧ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿ ದರಗಳು ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ಪ್ರಕಾರಗಳ ಮೇಲೆ ಬದಲಾಗುತ್ತವೆ.
ನಾಲ್ಕು ಪ್ರಮುಖ ಬ್ಯಾಂಕ್ಗಳು ನೀಡುತ್ತಿರುವ 5 ವರ್ಷಗಳ ಅವಧಿಯ ಇತ್ತೀಚಿನ ಫಿಕ್ಸೆಡ್ ಬಡ್ಡಿ ದರಗಳ ನೋಟ ಇಲ್ಲಿದೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಿಂದ ರೂ. 2 ಕೋಟಿಗಿಂತ ಕಡಿಮೆ ಇರುವ ನಿಶ್ಚಿತ ಠೇವಣಿಗಳ ಮೇಲೆ ಶೇ 5.30ರ ಬಡ್ಡಿದರಗಳನ್ನು ಮೂರು ವರ್ಷ ಮೇಲ್ಪಟ್ಟು ಮತ್ತು ಐದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ಸಾಮಾನ್ಯರಿಗೆ ನೀಡುತ್ತದೆ. ಆದರೆ ಹಿರಿಯ ನಾಗರಿಕರು ಶೇಕಡಾ 0.50ರಷ್ಟು ಹೆಚ್ಚುವರಿಯಾಗಿ ಗಳಿಸುತ್ತಾರೆ. ಅಂದರೆ ಅದೇ ಅವಧಿಗೆ ಶೇ 5.80 ಬಡ್ಡಿ ದೊರೆಯುತ್ತದೆ. ಈ ದರವು ಜನವರಿ 1, 2021ರಿಂದ ಅನ್ವಯವಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಗಸ್ಟ್ನಲ್ಲಿ ವಿವಿಧ ಅವಧಿಗಳಿಗೆ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಪ್ರಸ್ತುತ FDಯ ಮೂರು ವರ್ಷಗಳ ಮೇಲಿನ ಅವಧಿಗೆ ಶೇ 5.25ರ ಬಡ್ಡಿಯನ್ನು ನೀಡುತ್ತಿದೆ. ಮತ್ತು ಸಾಮಾನ್ಯ ಗ್ರಾಹಕರಿಗೆ ಐದು ವರ್ಷಗಳವರೆಗೆ ಮತ್ತು ಹಿರಿಯ ನಾಗರಿಕರು ಅದೇ ಅವಧಿಗೆ ಶೇ 5.75ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
ಬ್ಯಾಂಕ್ ಆಫ್ ಬರೋಡಾ ನಮ್ಮ ದೇಶದ ಇನ್ನೊಂದು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾವು ಸಾಮಾನ್ಯ ಗ್ರಾಹಕರಿಗೆ ಮೂರು ವರ್ಷಗಳ ಮೇಲಿನ ಐದು ವರ್ಷಗಳ ಎಫ್‌ಡಿ ಅವಧಿಯ ಮೇಲೆ ಶೇ 5.25ರ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಅದೇ ಅವಧಿಗೆ ಹೆಚ್ಚುವರಿ ಶೇ 0.50ರ ಬಡ್ಡಿಯನ್ನು ಪಡೆಯುತ್ತಾರೆ. ಈ ದರವು ನವೆಂಬರ್ 16, 2020ರಿಂದ ಅನ್ವಯ ಆಗುತ್ತದೆ.
HDFC ಬ್ಯಾಂಕ್ HDFC ಬ್ಯಾಂಕ್ ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಕೊನೆಯ ಬಾರಿಗೆ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳನ್ನು ಮೇ 21, 2021ರಂದು ಪರಿಷ್ಕರಿಸಲಾಗಿದೆ. ಬ್ಯಾಂಕ್ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈಗ ಮೂರು ವರ್ಷದಿಂದ ಐದು ವರ್ಷಗಳವರೆಗೆ ರೂ. 2 ಕೋಟಿಯವರೆಗೆ ಸಾಮಾನ್ಯ ಸಾರ್ವಜನಿಕರಿಗೆ FDಗಳ ಮೇಲೆ ಶೇ 5.30ರ ಬಡ್ಡಿಯನ್ನು ನೀಡುತ್ತಿದೆ. ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಂತೆ, HDFC ಬ್ಯಾಂಕ್ ಕೂಡ ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುತ್ತಿದೆ. ಈಗ ಹಿರಿಯ ನಾಗರಿಕರು ತಮ್ಮ ಠೇವಣಿ ಮೇಲೆ ಅದೇ ಅವಧಿಗೆ ಶೇ 5.80ರ ಬಡ್ಡಿಯನ್ನು ಪಡೆಯಬಹುದು.
ಇದನ್ನೂ ಓದಿ: Personal Loan: ವಯಕ್ತಿಕ ಸಾಲಕ್ಕೆ ಯಾವ ಬ್ಯಾಂಕ್ನಲ್ಲಿ ಅಗ್ಗದ ಬಡ್ಡಿ ದರ? ಇಲ್ಲಿದೆ ಪರ್ಸನಲ್ ಲೋನ್ ಫುಲ್ ಡೀಟೇಲ್ಸ್
Gold Loan: ಚಿನ್ನದ ಸಾಲ ಮರುಪಾವತಿ ವಿವಿಧ ವಿಧಾನಗಳ ಬಗ್ಗೆ ಗ್ರಾಹಕರಿಗೆ ಗೊತ್ತಿರಲೇಬೇಕಾದ ಮಾಹಿತಿ ಇಲ್ಲಿದೆ
(Fixed Deposits Rate Of SBI BOB PNB And HDFC Comparison For Tenure of 5 Years)