AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಅತ್ಯಾಚಾರ ಪ್ರಕರಣದ ಸಂತೃಸ್ತೆಯ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಉದ್ಧವ್ ಠಾಕ್ರೆ ಸರ್ಕಾರ

ಆರೋಪಿ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗುಪ್ತಾಂಗಕ್ಕೆ ಕಬ್ಬಿಣದ ರಾಡ್​ ಹಾಕಿ ಚಿತ್ರಹಿಂಸೆ ನೀಡಿದ್ದ.

ಮುಂಬೈ ಅತ್ಯಾಚಾರ ಪ್ರಕರಣದ ಸಂತೃಸ್ತೆಯ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಉದ್ಧವ್ ಠಾಕ್ರೆ ಸರ್ಕಾರ
ಉದ್ಧವ್ ಠಾಕ್ರೆ
TV9 Web
| Edited By: |

Updated on:Sep 13, 2021 | 6:35 PM

Share

ಮುಂಬೈ: ಇತ್ತೀಚಿಗಷ್ಟೇ ನಡೆದಿದ್ದ ನಿರ್ಭಯಾ ಮಾದರಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬಕ್ಕೆ 20 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಘೋಚಿಸಿದೆ. ಪರಿಹಾರದ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಇನ್ನಿತರ ಸರ್ಕಾರಿ ಯೋಜನೆಗಳಿಂದ ಭರಿಸಲಾಗುವುದು ಎಂದು ಸಹ ತಿಳಿದುಬಂದಿದೆ. ಈಕುರಿತು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಳೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಿಎಂ ಉದ್ಧವ್ ಠಾಕ್ರೆ ಸಭೆ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ನೀಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ.

ಸಾಕಿನಾಕಾ ಏರಿಯಾದಲ್ಲಿ ಟೆಂಪೋ ಮೇಲೆ ಅತ್ಯಾಚಾರಕ್ಕೆ ಒಳಗಾಗಿದ್ದ 34ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸುಮಾರು 33 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಅವರು ಉಸಿರು ಚೆಲ್ಲಿದ್ದಾರೆ. ಆರೋಪಿ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗುಪ್ತಾಂಗಕ್ಕೆ ಕಬ್ಬಿಣದ ರಾಡ್​ ಹಾಕಿ ಚಿತ್ರಹಿಂಸೆ ನೀಡಿದ್ದ. ಒಂದು ಸರ್ಜರಿ ಆಗಿದ್ದರೂ ಮಹಿಳೆ ಚೇರಿಸಿಕೊಂಡಿರಲಿಲ್ಲ. ಎಚ್ಚರವೂ ಆಗಿರಲಿಲ್ಲ.  ಇದು ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ನೆನಪಿಸುವಂತಿದೆ. ಅಂದು ಚಲಿಸುತ್ತಿದ್ದ ಬಸ್​ ಮೇಲೆ ನಿರ್ಭಯಾಳನ್ನು ರೇಪ್ ಮಾಡಲಾಗಿತ್ತು.

ಸಕಿನಾಕಾ ಏರಿಯಾದಲ್ಲಿ ನಿಂತಿದ್ದ ಟೆಂಪೋದ ಮೇಲೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿತ್ತು. ರಕ್ತದ ಮಡುವಿನಲ್ಲಿ ನರಳುತ್ತ ಬಿದ್ದಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೇ, ಕೆಲವೇ ಹೊತ್ತಲ್ಲಿ ಆರೋಪಿಯನ್ನೂ ಬಂಧಿಸಿದ್ದರು. ಪ್ರಸ್ತುತ ಪ್ರಕರಣದ ಸಂಬಂಧ ತನಿಖೆಯೂ ನಡೆಯುತ್ತಿದೆ.  ಗುರುವಾರ ಮತ್ತು ಶುಕ್ರವಾರದ ನಡುವಿನ ರಾತ್ರಿಯಲ್ಲಿ ಈ ದುರ್ಘಟನೆ ನಡೆದಿತ್ತು. ಶುಕ್ರವಾರ ಮುಂಜಾನೆ ಹೊತ್ತಿಗೆ ಪೊಲೀಸರಿಗೆ ಯಾರೋ ಕರೆ ಮಾಡಿ, ಇಲ್ಲೊಬ್ಬ ವ್ಯಕ್ತಿ ಮಹಿಳೆಯೊಬ್ಬರನ್ನು ಥಳಿಸುತ್ತಿದ್ದಾನೆ ಎಂದು ಹೇಳಿದ್ದರು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಮಹಿಳೆಗೆ ತೀವ್ರ ರಕ್ತಸ್ರಾವ ಆಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಬದುಕುಳಿಯಲಿಲ್ಲ ಮುಂಬೈ ಅತ್ಯಾಚಾರ ಸಂತ್ರಸ್ತೆ; 33 ತಾಸುಗಳ ಜೀವನ್ಮರಣ ಹೋರಾಟ ಅಂತ್ಯ

ಮಹಾರಾಷ್ಟ್ರದಲ್ಲಿ ಮಹಿಳೆಯರು ಈಗ ಸುರಕ್ಷಿತರಲ್ಲವೇ? ಮೂರು ಭೀಕರ ಪ್ರಕರಣಗಳು ಈ ಅಂಶವನ್ನು ಸಾರಿ ಹೇಳುತ್ತವೆ

(Maharashta CM Uddhav Thackeray announces 20 lakh for sakinaka rape victim dependents)

Published On - 6:20 pm, Mon, 13 September 21