AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ಗೆ ತೊಂದರೆ ನೀಡಬೇಡಿ, ರೈತರ ಪ್ರತಿಭಟನೆಯನ್ನು ದೆಹಲಿಗೆ ಸ್ಥಳಾಂತರಿಸಿ: ಅಮರಿಂದರ್ ಸಿಂಗ್

Amarinder Singh ನೀವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಯಸಿದರೆ, ನಿಮ್ಮ ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ. ನಿಮ್ಮ ಪ್ರತಿಭಟನೆಗಳಿಂದ ಪಂಜಾಬ್‌ಗೆ ತೊಂದರೆ ನೀಡಬೇಡಿ" ಎಂದು ಎಂದಿದ್ದಾರೆ ಅಮರಿಂದರ್ ಸಿಂಗ್.

ಪಂಜಾಬ್​​ಗೆ ತೊಂದರೆ ನೀಡಬೇಡಿ, ರೈತರ ಪ್ರತಿಭಟನೆಯನ್ನು ದೆಹಲಿಗೆ ಸ್ಥಳಾಂತರಿಸಿ: ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್
TV9 Web
| Edited By: |

Updated on: Sep 13, 2021 | 6:32 PM

Share

ಚಂಢೀಗಡ: ಕಳೆದ ವರ್ಷ ರೈತರ ಪ್ರತಿಭಟನೆ ಆರಂಭವಾದ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh)  ಇಂದು ಪಂಜಾಬ್ ಆರ್ಥಿಕತೆಯ ಮೇಲೆ ಈ ಪ್ರತಿಭಟನೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ಚಳವಳಿಯಲ್ಲಿ ಭಾಗವಹಿಸುವವರು ವದೆಹಲಿಯಲ್ಲಿರುವ “ಕೇಂದ್ರ ಸರ್ಕಾರ” ದ ಮೇಲೆ ಗಮನ ಕೇಂದ್ರೀಕರಿಸುವಂತೆ ಮತ್ತು ರಾಜ್ಯವನ್ನು ಮತ್ತು ಅದರ ಆಡಳಿತವನ್ನು ತಮ್ಮ ಪ್ರಚಾರದಿಂದ ಹೊರಗಿಡುವಂತೆ ಸಿಂಗ್ ರೈತರಿಗೆ ಹೇಳಿದ್ದಾರೆ.

“ನೀವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಯಸಿದರೆ, ನಿಮ್ಮ ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ. ನಿಮ್ಮ ಪ್ರತಿಭಟನೆಗಳಿಂದ ಪಂಜಾಬ್‌ಗೆ ತೊಂದರೆ ನೀಡಬೇಡಿ” ಎಂದು ಎಂದಿದ್ದಾರೆ ಅಮರಿಂದರ್ ಸಿಂಗ್.

ಹೋಶಿಯಾರ್‌ಪುರ ಜಿಲ್ಲೆಯ ಮುಖ್ಲಿಯಾನಾ ಹಳ್ಳಿಯಲ್ಲಿ ಸರ್ಕಾರಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಸಿಂಗ್, ಇಂದಿಗೂ ಸಹ, ರಾಜ್ಯದ 113 ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಇದು ನಮ್ಮ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.  ರೈತರ ಬೇಡಿಕೆಗೆ ತಮ್ಮದೇ ಸರ್ಕಾರದ ಸ್ಪಂದಿಸುವಿಕೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ರೈತರು ಅವರನ್ನು ಭೇಟಿ ಮಾಡಿದ ನಂತರ ಅವರ ಆಡಳಿತವು ಇತ್ತೀಚೆಗೆ ಕಬ್ಬಿನ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಈ ಹಿಂದೆ, ಅವರು ಸ್ವತಃ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದರು ಅದು ಸಾವಿರಾರು ರೈತರನ್ನು ಕೆರಳಿಸಿತು ಮತ್ತು ಬಂಡಾಯ ಮಾಡಿತು. ಅವರಲ್ಲಿ ಸಾವಿರಾರು ಮಂದಿ,ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದವರು ಕಳೆದ ನವೆಂಬರ್‌ನಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಿರತರಾಗಿದ್ದಾರೆ.

ರೈತರು ಕೇಂದ್ರ ಸರ್ಕಾರದ ನೂತನ ಕಾನೂನುಗಳು – ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯಿದೆ, 2020,ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ಪ್ರೇಮ ಪತ್ರ ಎಂದ ಆಮ್ ಆದ್ಮಿ ಪಕ್ಷ 

ಇದನ್ನೂ ಓದಿ: ಮಾನಹಾನಿ ಪ್ರಕರಣ ವಿಚಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್​ನಿಂದ ನೋಟಿಸ್ ಜಾರಿ

(To focus on the Union government in New Delhi leave the state Dont Disturb Punjab says Amarinder Singh To Farmers)