ಮಹಾರಾಷ್ಟ್ರದ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ 54 ಡಿಟೋನೇಟರ್‌ಗಳು ಪತ್ತೆ

|

Updated on: Feb 21, 2024 | 8:13 PM

ಸೆಂಟ್ರಲ್ ರೈಲ್ವೇ (ಸಿಆರ್) ಮಾರ್ಗದಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುವ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1 ನಲ್ಲಿ ಬಿದ್ದಿರುವ ಪೆಟ್ಟಿಗೆಗಳು ಸಿಕ್ಕಿವೆ.ಬಿಡಿಡಿಎಸ್ ತಂಡವು ಪೆಟ್ಟಿಗೆಗಳನ್ನು ಕಸ್ಟಡಿಗೆ ತೆಗೆದುಕೊಂಡಿತು. ಅವುಗಳನ್ನು ತೆರೆದಾಗ ಅವುಗಳಲ್ಲಿ 54 ಡಿಟೋನೇಟರ್‌ಗಳು (ಸಣ್ಣ ಪ್ರಮಾಣದ ಸ್ಫೋಟಕವನ್ನು ಒಳಗೊಂಡಿರುವ ಸಾಧನ) ಕಂಡುಬಂದಿವೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಾರಾಷ್ಟ್ರದ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ 54 ಡಿಟೋನೇಟರ್‌ಗಳು ಪತ್ತೆ
ಡಿಟೋನೇಟರ್‌
Follow us on

ಮುಂಬೈ ಫೆಬ್ರುವರಿ 21: ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಕಲ್ಯಾಣ್ ರೈಲ್ವೇ ನಿಲ್ದಾಣದ (Kalyan railway station) ಪ್ಲಾಟ್‌ಫಾರ್ಮ್‌ನಲ್ಲಿ ಬುಧವಾರ ಎರಡು ಬಾಕ್ಸ್‌ಗಳಲ್ಲಿ 50 ಕ್ಕೂ ಹೆಚ್ಚು ಡಿಟೋನೇಟರ್‌ಗಳು (detonators) ಪತ್ತೆಯಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಂಟ್ರಲ್ ರೈಲ್ವೇ (ಸಿಆರ್) ಮಾರ್ಗದಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುವ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1 ನಲ್ಲಿ ಬಿದ್ದಿರುವ ಪೆಟ್ಟಿಗೆಗಳನ್ನು ಜಿಆರ್‌ಪಿ ಗಮನಿಸಿದೆ ಎಂದು ಅಧಿಕಾರಿ ಹೇಳಿದರು. ನಂತರ ಶ್ವಾನ ದಳ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ಸಿಬ್ಬಂದಿಯನ್ನು ತಕ್ಷಣವೇ ಸ್ಥಳಕ್ಕೆ ಕರೆಸಲಾಯಿತು.

ಬಿಡಿಡಿಎಸ್ ತಂಡವು ಪೆಟ್ಟಿಗೆಗಳನ್ನು ಕಸ್ಟಡಿಗೆ ತೆಗೆದುಕೊಂಡಿತು. ಅವುಗಳನ್ನು ತೆರೆದಾಗ ಅವುಗಳಲ್ಲಿ 54 ಡಿಟೋನೇಟರ್‌ಗಳು (ಸಣ್ಣ ಪ್ರಮಾಣದ ಸ್ಫೋಟಕವನ್ನು ಒಳಗೊಂಡಿರುವ ಸಾಧನ) ಕಂಡುಬಂದಿವೆ ಎಂದು ಅವರು ಹೇಳಿದರು.

ಅವರು ಇನ್ನೂ ಪ್ರಕರಣ ದಾಖಲಿಸಿಕೊಳ್ಳದಿದ್ದರೂ ಕಲ್ಯಾಣ್ ಜಿಆರ್‌ಪಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಡಿಟೋನೇಟರ್‌ಗಳು ಪತ್ತೆಯಾದ ಸ್ಥಳಕ್ಕೆ ಥಾಣೆ ನಗರ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಸಾಮಾನ್ಯವಾಗಿ, ಥಾಣೆ ಜಿಲ್ಲೆಯಲ್ಲಿ ಅಕ್ರಮವಾಗಿ ಕೆರೆಗಳಲ್ಲಿ ಮೀನು ಹಿಡಿಯಲು ಮತ್ತು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಕಾರ್ಯಾಚರಣೆಗಳನ್ನು ನಡೆಸಲು ಡಿಟೋನೇಟರ್‌ಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ವೈಎಸ್‌ಆರ್‌ಸಿಪಿಗೆ ಸಂಸದ ವಿಪಿಆರ್ ರಾಜೀನಾಮೆ; ಟಿಡಿಪಿ ಸೇರುವ ಸಾಧ್ಯತೆ

ಡಿಟೋನೇಟರ್‌ಗಳನ್ನು ನೀರಿನ ಮೂಲಕ ಆಘಾತ ತರಂಗಗಳನ್ನು ಕಳುಹಿಸಲು ಬಳಸಲಾಗುತ್ತದೆ. ಈ ಮೂಲಕ ಮೀನುಗಳನ್ನು ಕೊಲ್ಲಲಾಗುತ್ತದೆ. ಮುಂಬೈ ನಗರದ ಹೊರವಲಯದಲ್ಲಿರುವ ಕಲ್ಯಾಣ್ ರೈಲು ನಿಲ್ದಾಣವು ದೂರದ ಮತ್ತು ಉಪನಗರ ರೈಲುಗಳ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ ಮತ್ತು ಸಾಮಾನ್ಯವಾಗಿ ತುಂಬಾ ಜನದಟ್ಟಣೆಯಿಂದ ಕೂಡಿರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:54 pm, Wed, 21 February 24