ಮಹಾರಾಷ್ಟ್ರ, ಗುಜರಾತ್​ನಲ್ಲಿ ಸಾವಿನ ಪ್ರಮಾಣ ಅತ್ಯಧಿಕ

|

Updated on: Apr 29, 2020 | 11:15 AM

ನವದೆಹಲಿ: ಪೆಡಂಭೂತದಂತೆ ಕಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಬಲಿ ಸಾವಿರದ ಗಡಿ ದಾಟಿದೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್​ನಲ್ಲಿ ಕೊರೊನಾ ಸಾವಿನ ಪ್ರಮಾಣ ಹೆಚ್ಚಿದೆ. ದೇಶದ ಶೇ60ರಷ್ಟು ಕೊರೊನಾ ಸೊಂಕಿತರ ಸಾವು ಈ ಎರಡು ರಾಜ್ಯಗಳಲ್ಲಿ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 50 ಮಂದಿ ಮೃತಪಟ್ಟಿದ್ದಾರೆ. ಅಹಮದಾಬಾದ್​ನಲ್ಲಿ ನಿನ್ನೆ 19 ಮಂದಿ ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ 24 ಗಂಟೆಗಳಲ್ಲಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು […]

ಮಹಾರಾಷ್ಟ್ರ, ಗುಜರಾತ್​ನಲ್ಲಿ ಸಾವಿನ ಪ್ರಮಾಣ ಅತ್ಯಧಿಕ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಪೆಡಂಭೂತದಂತೆ ಕಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಬಲಿ ಸಾವಿರದ ಗಡಿ ದಾಟಿದೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್​ನಲ್ಲಿ ಕೊರೊನಾ ಸಾವಿನ ಪ್ರಮಾಣ ಹೆಚ್ಚಿದೆ. ದೇಶದ ಶೇ60ರಷ್ಟು ಕೊರೊನಾ ಸೊಂಕಿತರ ಸಾವು ಈ ಎರಡು ರಾಜ್ಯಗಳಲ್ಲಿ ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 50 ಮಂದಿ ಮೃತಪಟ್ಟಿದ್ದಾರೆ. ಅಹಮದಾಬಾದ್​ನಲ್ಲಿ ನಿನ್ನೆ 19 ಮಂದಿ ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ 24 ಗಂಟೆಗಳಲ್ಲಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 1,007 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 583 ಮಂದಿ ಬಲಿಯಾಗಿದ್ದಾರೆ.

ಮಾರ್ಕೆಟ್​ಗೆ ವಕ್ಕರಿಸಿದ ಕೊರೊನಾ:
ದೆಹಲಿ ಆಜಾದ್ ಪುರ್ ಸಬ್ಜಿ ಮಾರ್ಕೆಟ್​ಗೆ ಕೊರೊನಾ ವಕ್ಕರಿಸಿದೆ. ಹೋಲ್ ಸೇಲ್ ತರಕಾರಿ ಮಾರ್ಕೆಟ್​ನಲ್ಲಿನ 11 ವ್ಯಾಪಾರಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹಾಗೂ ಮುಂಬೈ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೆ ಎಪಿಎಂಸಿಯಲ್ಲಿ 10 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.