ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷವು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಎಂದೂ ದಲಿತರು, ಹಿಂದುಳಿದ ವರ್ಗಗಳ ಪ್ರಗತಿಗೆ ಪಕ್ಷ ಅವಕಾಶ ನೀಡಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಪುಣೆಯಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ಮಾತನಾಡಿದರು.
ಮಹಾರಾಷ್ಟ್ರದ ಕ್ಷಿಪ್ರ ಅಭಿವೃದ್ಧಿಯು ಅಘಾಡಿ ಜನರ ಕೈಯಲ್ಲಿಲ್ಲ, ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಅವರು ಪಿಎಚ್ಡಿ ಮಾಡಿದ್ದಾರೆ.ನಿಮ್ಮ ಒಗ್ಗಟ್ಟು ಒಡೆದರೆ ಬುಡಕಟ್ಟು ಸಮಾಜ ತನ್ನ ಅಸ್ಮಿತೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದರು.
ಈ ಷಡ್ಯಂತ್ರಕ್ಕೆ ನಾವು ಬಲಿಯಾಗುವುದು ಬೇಡ, ನಾವು ಒಗ್ಗಟ್ಟಾಗಿ ಉಳಿಯಬೇಕು, ಆಗ ಎಲ್ಲರೂ ಸುರಕ್ಷಿತವಾಗಿರುತ್ತೇವೆ ಎಂದರು.
ನಿಮ್ಮ ಮೀಸಲಾತಿಯನ್ನು ಮೊದಲು ಕಾಂಗ್ರೆಸ್ ಕಿತ್ತುಕೊಳ್ಳಲಿದ್ದು, ಕಾಂಗ್ರೆಸ್‌ನ ರಾಜಮನೆತನದವರು ಈ ದೇಶವನ್ನು ಆಳಲು ಹುಟ್ಟಿದವರು ಎಂಬ ಮನಸ್ಥಿತಿ ಯಾವಾಗಲೂ ಇದೆ. ಆದ್ದರಿಂದಲೇ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ದಲಿತರು, ಹಿಂದುಳಿದವರು, ಆದಿವಾಸಿಗಳು ಮುಂದೆ ಹೋಗಲು ಬಿಡಲಿಲ್ಲ ಎಂದು ಹೇಳಿದರು. ಬಿಜೆಪಿ ನೀಡಿರುವ ಪ್ರಣಾಳಿಕೆಯೇ ಮಹಾರಾಷ್ಟ್ರ ಅಭಿವೃದ್ಧಿ ಗ್ಯಾರಂಟಿ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮತ್ತಷ್ಟು ಓದಿ: ಮಹಾರಾಷ್ಟ್ರ ಚುನಾವಣೆ: ಮಹಾ ವಿಕಾಸ್ ಅಘಾಡಿ ಜತೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್
ಮಹಾರಾಷ್ಟ್ರ ಸಮೃದ್ಧಗೊಳ್ಳಬೇಕಿದ್ದರೆ ರೈತರ ಏಳಿಗೆಯಾಗಬೇಕು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ದೊಡ್ಡ ಷಡ್ಯಂತ್ರದ ಬಗ್ಗೆ ನಾನು ಇಂದು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಮ್ಮ ದೇಶದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆಯು ಸುಮಾರು 10% ರಷ್ಟಿದೆ.
#WATCH | Chandrapur, Maharashtra: Addressing a public meeting in Chimur, PM Modi says, “You have seen the double speed of development in the last 2.5 years. Maharashtra is the state with maximum foreign investment… There are new airports and expressways, one dozen Vande Bharat… pic.twitter.com/5vSXaMDv3u
— ANI (@ANI) November 12, 2024
ಕಾಂಗ್ರೆಸ್ ಈಗ ಬುಡಕಟ್ಟು ಸಮಾಜವನ್ನು ಜಾತಿಗಳಾಗಿ ವಿಭಜಿಸುವ ಮೂಲಕ ದುರ್ಬಲಗೊಳಿಸಲು ಬಯಸಿದೆ.ನಮ್ಮ ಬುಡಕಟ್ಟು ಸಹೋದರರು ಎಸ್‌ಟಿ ಎಂಬ ಗುರುತನ್ನು ಕಳೆದುಕೊಳ್ಳಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ರಾಜ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Tue, 12 November 24