ರಝಾಕಾರರು ಹಚ್ಚಿದ ಬೆಂಕಿಯಿಂದ ನಿಮ್ಮ ಕುಟುಂಬವೇ ನಾಶವಾಗಿದ್ದನ್ನು ಮರೆಯಬೇಡಿ; ಖರ್ಗೆಗೆ ನೆನಪಿಸಿದ ಯೋಗಿ

ಯೋಗಿ ಆದಿತ್ಯನಾಥ್ ಅವರು ಭಾರತದಲ್ಲಿ ಏಕೀಕರಣಗೊಳ್ಳುವ ಮೊದಲು ಹೈದರಾಬಾದ್‌ನಲ್ಲಿ ಉಂಟಾಗಿದ್ದ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಾಲ್ಯದಲ್ಲಿ ದುರಂತ ನಡೆದಿತ್ತು. 1948ರಲ್ಲಿ ಖರ್ಗೆಯವರ ಗ್ರಾಮವನ್ನು ನಿಜಾಮರ ರಝಾಕಾರರು ಸುಟ್ಟು ಹಾಕಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿದ್ದಾರೆ.

ರಝಾಕಾರರು ಹಚ್ಚಿದ ಬೆಂಕಿಯಿಂದ ನಿಮ್ಮ ಕುಟುಂಬವೇ ನಾಶವಾಗಿದ್ದನ್ನು ಮರೆಯಬೇಡಿ; ಖರ್ಗೆಗೆ ನೆನಪಿಸಿದ ಯೋಗಿ
ಯೋಗಿ ಆದಿತ್ಯನಾಥ್ - ಮಲ್ಲಿಕಾರ್ಜುನ ಖರ್ಗೆ
Follow us
ಸುಷ್ಮಾ ಚಕ್ರೆ
|

Updated on: Nov 12, 2024 | 8:09 PM

ಮುಂಬೈ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಮರ ಮತಕ್ಕಾಗಿ ತಮ್ಮ ಕುಟುಂಬದ ತ್ಯಾಗವನ್ನೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮರೆತಿದ್ದಾರೆ ಎಂದು ಹೇಳಿದ್ದಾರೆ. ಖರ್ಗೆಯವರ ಬಾಲ್ಯದ ದುರಂತವನ್ನು ನೆನಪಿಸಿದ ಯೋಗಿ ಆದಿತ್ಯನಾಥ್, 1948ರಲ್ಲಿ ಹೈದರಾಬಾದ್ ನಿಜಾಮರ ರಝಾಕಾರರು ಖರ್ಗೆಯವರ ಗ್ರಾಮವನ್ನು ಸುಟ್ಟುಹಾಕಿದ್ದರು, ಇದರಿಂದ ಖರ್ಗೆಯವರ ತಾಯಿ ಮತ್ತು ಸಹೋದರಿ ಸುಟ್ಟು ಕರಕಲಾಗಿದ್ದರು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಅಚಲ್‌ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಮಲ್ಲಿಕಾರ್ಜುನ ಖರ್ಗೆ ಅವರ “ಬಟೇಂಗೆ ತೋ ಕಟೇಂಗೆ (ವಿಭಜಿಸಿದರೆ ನಾವು ನಾಶವಾಗುತ್ತೇವೆ)” ಎಂಬ ಘೋಷಣೆಯ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. “ನಾನು ಯೋಗಿ, ನನಗೆ ರಾಷ್ಟ್ರವೇ ಮೊದಲು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಷ್ಟೀಕರಣದ ರಾಜಕೀಯವೇ ಮೊದಲು” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ಹರಡುವ ಮೂಲಕ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ; ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಭಾರತದಲ್ಲಿ ಏಕೀಕರಣಗೊಳ್ಳುವ ಮೊದಲು ಹೈದರಾಬಾದ್‌ನಲ್ಲಿ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಬಾಲ್ಯದ ದುರಂತವನ್ನು ವಿವರಿಸಿದ ಯೋಗಿ ಆದಿತ್ಯನಾಥ್, ಖರ್ಗೆಯವರು ನಿಜಾಮರ ಆಳ್ವಿಕೆಯ ಹಿಂದಿನ ಹೈದರಾಬಾದ್ ರಾಜ್ಯದ ಬೀದರ್ ಪ್ರದೇಶದಲ್ಲಿ ಜನಿಸಿದರು. ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಆಗ ಹೈದರಾಬಾದ್‌ನ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿದರು. ಕಾಂಗ್ರೆಸ್ ಕೂಡ ಅದಕ್ಕೆ ಬೆಂಬಲ ನೀಡಿತು. ಸ್ವಾತಂತ್ರ್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದ್ದರಿಂದ ಹಿಂಸಾಚಾರ ಆರಂಭವಾಯಿತು. ನಿಜಾಮರು ಆಗ ಖರ್ಗೆಯವರ ಗ್ರಾಮವನ್ನು ಸುಟ್ಟುಹಾಕಿದರು. ಅಲ್ಲಿನ ಹಿಂದೂಗಳನ್ನು ಬರ್ಬರವಾಗಿ ಕೊಂದರು. ಆ ವೇಳೆ ಮಲ್ಲಿಕಾರ್ಜುನ ಖರ್ಗೆಯವರ ತಾಯಿ, ಸಹೋದರಿ, ಅವರ ಕುಟುಂಬದ ಸದಸ್ಯರು ಸುಟ್ಟು ಹೋದರು. ಈಗ ತಮ್ಮ ಕುಟುಂಬಸ್ಥರು ಮಾಡಿದ ಪ್ರಾಣತ್ಯಾಗವನ್ನೇ ಮರೆತು ಮುಸ್ಲಿಮರ ಮತಕ್ಕಾಗಿ ಖರ್ಗೆ ಅವರ ಪರವಾಗಿ ವಾದ ಮಾಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಸಲು ಜೀತದಾಳು, ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದೆ; ಪ್ರಿಯಾಂಕ್ ಖರ್ಗೆ ಟೀಕೆ

ಖರ್ಗೆಯವರೇ, ನೀವು ಕೋಪ ಮಾಡಿಕೊಳ್ಳಬೇಕಾದುದು ನನ್ನ ಮೇಲಲ್ಲ. ನಿಮಗೆ ಸಿಟ್ಟು ಬರಬೇಕಾದುದು ಹೈದರಾಬಾದ್ ನಿಜಾಮರ ಮೇಲೆ. ಹೈದರಾಬಾದ್ ನಿಜಾಮರ ರಝಾಕಾರರು ನಿಮ್ಮ ಗ್ರಾಮವನ್ನು ಸುಟ್ಟರು, ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟರು. ಅವರು ವಿಭಜನೆಯಾದಾಗಲೂ ಅದೇ ಕ್ರೂರ ರೀತಿಯಲ್ಲಿ ವಿಭಜನೆಯಾಗುತ್ತಾರೆ ಎಂಬ ಸತ್ಯವನ್ನು ದೇಶದ ಮುಂದೆ ಪ್ರಸ್ತುತಪಡಿಸಿ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ