ಪತ್ನಿಯ ಕೊಂದು, ದೇಹ ಕತ್ತರಿಸಿ ಬಿಸಾಡಿದ್ದ ವ್ಯಕ್ತಿ, ರುಂಡ ಸಿಕ್ಕ ಬಳಿಕ ತಪ್ಪೊಪ್ಪಿಕೊಂಡ

ಪತ್ನಿಯ ಕೊಂದು ದೇಹವನ್ನು ಕತ್ತರಿಸಿ ಬಿಸಾಡಿದ್ದ ವ್ಯಕ್ತಿ, ಈಗ ರುಂಡ ಪತ್ತೆಯಾದ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಮಹಾರಾಷ್ಟ್ರದ ಭಿವಂಡಿಯ ಈದ್ಗಾ ರಸ್ತೆ ಕೊಳೆಗೇರಿ ಮತ್ತು ಕಸಾಯಿಖಾನೆ ಪ್ರದೇಶದ ಬಳಿಯ ಕೊಲ್ಲಿಯಲ್ಲಿ ಮಹಿಳೆಯ ರುಂಡ ಪತ್ತೆಯಾಗಿತ್ತು. ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದು,ಕೊನೆಯದಾಗಿ ಆಕೆಯನ್ನು ಕೊಂದಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಮೃತರನ್ನು ಪರ್ವೀನ್ ಅಲಿಯಾಸ್ ಮುಸ್ಕಾನ್ (22) ಎಂದು ಗುರುತಿಸಲಾಗಿದೆ.

ಪತ್ನಿಯ ಕೊಂದು, ದೇಹ ಕತ್ತರಿಸಿ ಬಿಸಾಡಿದ್ದ ವ್ಯಕ್ತಿ, ರುಂಡ ಸಿಕ್ಕ ಬಳಿಕ ತಪ್ಪೊಪ್ಪಿಕೊಂಡ
ಮಹಿಳೆ
Image Credit source: India Today

Updated on: Sep 04, 2025 | 9:39 AM

ಮಹಾರಾಷ್ಟ್ರ, ಸೆಪ್ಟೆಂಬರ್ 04: ಪತ್ನಿಯ ಕೊಂದು ದೇಹವನ್ನು ಕತ್ತರಿಸಿ ಬಿಸಾಡಿದ್ದ ವ್ಯಕ್ತಿ, ಈಗ ರುಂಡ ಪತ್ತೆಯಾದ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಮಹಾರಾಷ್ಟ್ರದ ಭಿವಂಡಿಯ ಈದ್ಗಾ ರಸ್ತೆ ಕೊಳೆಗೇರಿ ಮತ್ತು ಕಸಾಯಿಖಾನೆ ಪ್ರದೇಶದ ಬಳಿ ಮಹಿಳೆಯ ರುಂಡ ಪತ್ತೆಯಾಗಿತ್ತು. ಪೊಲೀಸರು ಆಕೆಯ ಪತಿ(Husband)ಯನ್ನು ಬಂಧಿಸಿದ್ದು,ಕೊನೆಯದಾಗಿ ಆಕೆಯನ್ನು ಕೊಂದಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಮೃತರನ್ನು ಪರ್ವೀನ್ ಅಲಿಯಾಸ್ ಮುಸ್ಕಾನ್ (22) ಎಂದು ಗುರುತಿಸಲಾಗಿದೆ.

ರುಂಡ ಪತ್ತೆಯಾಗಿರುವ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು. ಪತ್ತೆಯಾಗಿರುವ ತಲೆಯನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುಸ್ಕಾನ್ ಅವರ ತಾಯಿ ಅವಶೇಷಗಳನ್ನು ಗುರುತಿಸಿದ್ದಾರೆ.

ಆರಂಭಿಕ ತನಿಖೆಯ ನಂತರ, ಮುಸ್ಕಾನ್ ಅವರ ಪತಿಯನ್ನು ಅನುಮಾನದ ಮೇಲೆ ಬಂಧಿಸಲಾಯಿತು. ನಂತರ ಅವರು ಆಕೆಯ ಗಂಟಲು ಸೀಳಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಕೊಲ್ಲಿಯಲ್ಲಿ ಎಸೆದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.ಮುಸ್ಕಾನ್ ಎರಡು ವರ್ಷಗಳ ಹಿಂದೆ 25 ವರ್ಷದ ಚಾಲಕ ಮೊಹಮ್ಮದ್ ತಹಾ ಅನ್ಸಾರಿ ಅಲಿಯಾಸ್ ಸೋನುವನ್ನು ವಿವಾಹವಾಗಿದ್ದಳು.

ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು, ನಂತರ ಈದ್ಗಾ ಕೊಲ್ಲಿಯ ಬಳಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ತನ್ನ ಒಂದು ವರ್ಷದ ಮಗನೊಂದಿಗೆ ಅಲ್ಲಿ ವಾಸಿಸುತ್ತಿದ್ದರು. ಮುಸ್ಕಾನ್ಯ ತಾಯಿ ಮಗಳು ಎರಡು ದಿನಗಳಿಂದ ಕಾಣೆಯಾಗಿದ್ದಾಳೆ, ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಆಕೆಯ ಪತಿ ಕೂಡ ಯಾವುದೇ ಸರಿ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಬಂಧನದ ನಂತರ, ಆರೋಪಿಯು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ, ಆದರೆ ತನಿಖಾಧಿಕಾರಿಗಳು ಅವನ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ ಮತ್ತು ಅಪರಾಧದ ಹಿಂದಿನ ಕಾರಣಗಳು ಹೆಚ್ಚಿನ ತನಿಖೆಯಲ್ಲಿವೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:

ಚಿನ್ನದಂಥ ಪತ್ನಿ ಇದ್ದರೂ ಇನ್ನೊಬ್ಬಳ ಜತೆ ಲವ್ವಿಡವ್ವಿ: ಹೆಂಡ್ತಿ ಪ್ರಶ್ನಿಸಿದ್ದಕ್ಕೆ ನಡೆಯಿತು ಘೋರ ದುರಂತ

ಆರೋಪಿಯು ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಾ ಒಂದೊಂದು ಬಾರಿ ಒಂದೊಂದು ಕಾರಣಗಳನ್ನು ನೀಡುತ್ತಿದ್ದು, ಎಲ್ಲವನ್ನು ನಂಬುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮಕ್ಕಳಿಗೆ ಹೊಡೆಯುತ್ತಿದ್ದಳು, ಹೀಗಾಗಿ ಕೋಪದಿಂದ ಆಕೆಯನ್ನು ಕೊಂದಿರುವುದಾಗಿ ಆರೋಪಿ ಹೇಳಿದ್ದಾನೆ. ಆಕೆ ಮಾದಕದ್ರವ್ಯ ಸೇವಿಸುತ್ತಿದ್ದಳು ಎಂದೂ ಆತ ಹೇಳಿದ್ದಾನೆ.ಆದರೆ ತನಿಖೆ ಇನ್ನೂ ನಡೆಯುತ್ತಿದೆ. ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಈಗ ತಲೆ ಮಾತ್ರ ಪತ್ತೆಯಾಗಿದ್ದು, ದೇಹದ ಇತರ ಭಾಗಗಳು ಹಾಗೂ ಬಳಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ, ಅವನು ಅವಳನ್ನು ಎಲ್ಲಿ ಮತ್ತು ಹೇಗೆ ಕತ್ತರಿಸಿದ್ದ ಎನ್ನುವ ವಿಚಾರವನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು  ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ