AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುದ್ದಿವಂತ ಸಿನಿಮಾದ ರೀತಿ ಮದ್ವೆ ವಂಚನೆ: ಯುವತಿಯರನ್ನ ಬುಟ್ಟಿಗೆ ಬೀಳಿಸಿಕೊಂಡು ಮದ್ವೆಯಾಗಿ ಕೈಕೊಡುವುದೇ ಇವನ ಕಾಯಕ

ಬುದ್ದಿವಂತ ಸಿನಿಮಾದಲ್ಲಿ ಉಪೇಂದ್ರ ಸ್ಟೈಲ್ ನಲ್ಲಿ ಯುವಕನೋರ್ವ ಯುವತಿಯರನ್ನು ಮದುವೆಯಾಗಿ ವಂಚಿಸುವುದನ್ನೇ ಚಾಳಿಯನ್ನಾಗಿ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಇಲ್ಲದ ಅಮಾಯಕ ಯುವತಿಯರನ್ನೇ ಟಾರ್ಗೆಟ್ ಮಾಡಿ ಮದುವೆಯಾಗುವ ನೆಪದಲ್ಲಿ ವಂಚನೆ ಮಾಡುವುದೇ ಇವನು ಕಾಯಕ. ಈಗಾಗಲೇ ಒಂದು ಬಾರಿ ಜೈಲಿಗೆ ಹೋಗಿ ಬಂದರೂ ಸಹ ಬುದ್ಧಿ ಕಲಿಯದ ಆಸಾಮಿ ಅದೇ ಚಾಳಿ ಮುಂದುವರಿಸಿ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಬುದ್ದಿವಂತ ಸಿನಿಮಾದ ರೀತಿ ಮದ್ವೆ ವಂಚನೆ:  ಯುವತಿಯರನ್ನ ಬುಟ್ಟಿಗೆ ಬೀಳಿಸಿಕೊಂಡು ಮದ್ವೆಯಾಗಿ ಕೈಕೊಡುವುದೇ ಇವನ ಕಾಯಕ
ಮಿಥುನ್ ಕುಮಾರ್
ಶಿವಪ್ರಸಾದ್​ ಬಿ.
| Edited By: |

Updated on: Aug 30, 2025 | 5:31 PM

Share

ಬೆಂಗಳೂರು, (ಆಗಸ್ಟ್ 30): ಮದುವೆ (marriage) ನೆಪದಲ್ಲಿ ಯುವತಿರಿಗೆ ವಂಚನೆ ಮಾಡುತ್ತಿದ್ದ ಯುವಕ ಸಿಕ್ಕಬಿದ್ದಿದ್ದಾನೆ. ಬುದ್ದಿವಂತ ಸಿನಿಮಾದ ಹೀರೋ ಉಪೇಂದ್ರ ಸ್ಟೈಲ್ ನಲ್ಲಿ ಯುವತಿಯರನ್ನು ಮದುವೆಯಾಗಿ ವಂಚಿಸುವುದೇ ಕಾಯಕ ಮಾಡಿಕೊಂಡಿದ್ದವು ಇದೀಗ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ (Bengaluru) ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್, ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಗಿ ಮದುವೆಯಾಗುತ್ತಾನೆ. ಆರು ತಿಂಗಳ ಸಂಸಾರ ಮಾಡಿ, ಆದಾದ ನಂತರ ದುಡ್ಡು, ಒಡವೆ ದೋಚಿ ಪರಾರಿಯಾಗುತ್ತಾನೆ. ಅದರಂತೆ ಪರಿಚಯವಾಗಿದ್ದ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ. ಇದೀಗ ಪೊಲೀಸರು, ಮಿಥುನ್ ಕುಮಾರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

6 ವರ್ಷಗಳ ಹಿಂದೆ ಯುವತಿಯೊಬ್ಬಳಿಗೆ ಈ ಮಿಥುನ್ ಕುಮಾರ್ ಪರಿಚಯವಾಗಿದ್ದು, ಒಂದು ವರ್ಷದ ಹಿಂದೆ ಆ ಯುವತಿಯನ್ನೇ ವಿವಾಹ ಆಗಿದ್ದಾನೆ. ನಾಲ್ಕು ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದಾನೆ. ನಂತರ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮೋಸ ಹೋದ ಯುವತಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಂಚಕ ಮಿಥುನ್​ ನನ್ನು ಬಂಧಿಸಿದ್ದಾರೆ.ತಂದೆ ತಾಯಿ ಇಲ್ಲದ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ ವಂಚಿಸುವ ಮಿಥುನ್ ಕುಮಾರ್ ನ ಕಾಯಕವಾಗಿದೆ.

ಇದನ್ನೂ ಓದಿ: 50 ಲಕ್ಷ ರೂ. ಖರ್ಚು ಮಾಡಿ ಮದ್ವೆ: ಮೂರೇ ವರ್ಷದಲ್ಲಿ ಮಹಿಳಾ ಟೆಕ್ಕಿ ದುರಂತ ಸಾವು

ಈ ಹಿಂದೆಯೂ ಇಂಥದ್ದೇ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ಕುಮಾರ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿತ್ತು. ಆಗ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಆದರೂ ಬುದ್ಧಿ ಕಲಿಯದ ಮಿಥುನ್, ಮತ್ತೆ ಬೇರೊಬ್ಬ ಯುವತಿಯನ್ನು ನಂಬಿಸಿ ಮದುವೆಯಾಗಿ ಕೈ ಕೊಟ್ಟು ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ