AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Crisis: ಮಹಾರಾಷ್ಟ್ರದಲ್ಲಿ ರೆಬೆಲ್ ಶಾಸಕರಿಗೆ ಏನೂ ಕೆಲಸವಿಲ್ಲ, ರೆಸಾರ್ಟ್​ನಲ್ಲೇ ವಿಶ್ರಾಂತಿ ಪಡೆಯಬಹುದು; ಸಂಜಯ್ ರಾವತ್ ವ್ಯಂಗ್ಯ

ಬಂಡಾಯ ಶಾಸಕರು ಅಸ್ಸಾಂನಲ್ಲಿ ಇನ್ನೂ ಕೆಲವು ದಿನಗಳ ಕಾಲ ಉಳಿಯುವ ಸಾಧ್ಯತೆಯಿದೆ. ಗುವಾಹಟಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಅನ್ನು ಜುಲೈ 5ರವರೆಗೆ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Maharashtra Crisis: ಮಹಾರಾಷ್ಟ್ರದಲ್ಲಿ ರೆಬೆಲ್ ಶಾಸಕರಿಗೆ ಏನೂ ಕೆಲಸವಿಲ್ಲ, ರೆಸಾರ್ಟ್​ನಲ್ಲೇ ವಿಶ್ರಾಂತಿ ಪಡೆಯಬಹುದು; ಸಂಜಯ್ ರಾವತ್ ವ್ಯಂಗ್ಯ
ಸಂಜಯ್ ರಾವುತ್Image Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on:Jun 28, 2022 | 2:09 PM

Share

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು (Maharashtra Political Crisis) ಮುಂದುವರೆದಿದೆ. ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut) ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ವಿರುದ್ಧ ಇಂದು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಏಕನಾಥ್ ಶಿಂಧೆ (Eknath Shinde) ಮತ್ತು ಇತರ ಬಂಡಾಯ ಶಾಸಕರ ಮನವಿಯ ಕುರಿತು ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ಮಹಾರಾಷ್ಟ್ರದಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಬಂಡಾಯ ಶಾಸಕರು ಜುಲೈ 11ರವರೆಗೆ ಗುವಾಹಟಿಯಲ್ಲಿ ಆರಾಮಾಗಿ ವಿಶ್ರಾಂತಿ ಪಡೆಯಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಸುಪ್ರೀಂ ಕೋರ್ಟ್ ಏಕನಾಥ್ ಶಿಂಧೆ ಮತ್ತು ಇತರ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನೀಡಿದ ಅನರ್ಹತೆಯ ನೋಟಿಸ್‌ಗೆ ಜುಲೈ 12ರೊಳಗೆ ಉತ್ತರವನ್ನು ಸಲ್ಲಿಸಲು ಅನುಮತಿ ನೀಡಿದೆ. ಜುಲೈ 11ರವರೆಗೆ ಗುವಾಹಟಿಯಲ್ಲಿ ರೆಬೆಲ್ ಶಾಸಕರು ವಿಶ್ರಾಂತಿ ಪಡೆಯಬಹುದು. ಹೇಗಿದ್ದರೂ ಮಹಾರಾಷ್ಟ್ರದಲ್ಲಿ ಅವರಿಗೆ ಯಾವುದೇ ಕೆಲಸವಿಲ್ಲ ಎಂದು ಹೇಳಿದ್ದಾರೆ.

ಕೆಲವು ಭಿನ್ನಮತೀಯ ಶಾಸಕರು ವಾಪಾಸ್ ಬರುತ್ತಾರೆಂಬ ಭರವಸೆಯಿದೆ ಎಂದು ರಾವತ್ ಹೇಳಿದ್ದಾರೆ. ಇನ್ನೂ ಕೆಲವು ಶಾಸಕರನ್ನು ನಾವು ಬಂಡಾಯಗಾರರೆಂದು ಪರಿಗಣಿಸುವುದಿಲ್ಲ. ಏಕೆಂದರೆ ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಕುಟುಂಬಗಳು ಸಹ ನಮ್ಮೊಂದಿಗೆ ಸಂಪರ್ಕದಲ್ಲಿವೆ. ಅವರು ನಮ್ಮ ಬಳಿಗೆ ಮರಳುತ್ತಾರೆ ಎಂದು ನಾವು ನಂಬಿದ್ದೇವೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರದ ಬಂಡಾಯ ಸಚಿವರ ಖಾತೆಗಳನ್ನು ಬೇರೆ ಸಚಿವರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ

ಬಂಡಾಯ ಶಾಸಕರು ಅಸ್ಸಾಂನಲ್ಲಿ ಇನ್ನೂ ಕೆಲವು ದಿನಗಳ ಕಾಲ ಉಳಿಯುವ ಸಾಧ್ಯತೆಯಿದೆ. ಜುಲೈ 5ರ ಬಳಿಕವೇ ಅವರು ಮಹಾರಾಷ್ಟ್ರಕ್ಕೆ ಮರಳುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಹೆಚ್ಚು ದಿನಗಳ ಕಾಲ ತಂಗುವ ಸಾಧ್ಯತೆಯಿದೆ. ಹೋಟೆಲ್ ಅನ್ನು ಜುಲೈ 5ರವರೆಗೆ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಡಾಯ ಶಾಸಕರು “ಜೀವಂತ ಶವಗಳು” ಎಂಬ ಹೇಳಿಕೆಯನ್ನು ಪುರುಚ್ಛರಿಸಿರುವ ಸಂಜಯ್ ರಾವತ್, ಅವರ ದೇಹ ಜೀವಂತವಾಗಿದೆ, ಆದರೆ ಅವರ ಆತ್ಮ ಸತ್ತಿದೆ. 40 ವರ್ಷಗಳ ಕಾಲ ಪಕ್ಷದಲ್ಲಿದ್ದು ನಂತರ ಓಡಿಹೋದವರು ಅವರು. ಅವರ ಆತ್ಮಗಳು ಸತ್ತಿವೆ, ಅವರಲ್ಲಿ ಏನೂ ಉಳಿದಿಲ್ಲ. ನಾನು ಯಾರ ಭಾವನೆಗೂ ಧಕ್ಕೆ ತರಲು ಬಯಸಲಿಲ್ಲ, ನಾನು ಸತ್ಯವನ್ನು ಹೇಳಿದ್ದೇನೆ ಎಂದಿದ್ದಾರೆ.

ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಬಿಕ್ಕಟ್ಟಿನಲ್ಲಿ ಬಿಜೆಪಿ ಮತ್ತು ದೇವೇಂದ್ರ ಫಡ್ನವಿಸ್ ಭಾಗಿಯಾಗಬಾರದು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಅವರು ಹಾಗೆ ಮಾಡಿದರೆ, ಅವರ ಪಕ್ಷವಾದ ಬಿಜೆಪಿ, ದೇವೇಂದ್ರ ಫಡ್ನವಿಸ್ ಮತ್ತು ಪಿಎಂ ಮೋದಿ ಅವರ ಹೆಸರುಗಳಿಗೆ ಕಳಂಕ ಬರುತ್ತದೆ ಎಂದು ಹೇಳಿದ್ದಾರೆ.

Published On - 2:08 pm, Tue, 28 June 22