Maharashtra Crisis: ಬಂಡಾಯ ಶಾಸಕರು ದ್ರೋಹಿಗಳು, ಎಂದಿಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದಿಲ್ಲ: ಆದಿತ್ಯ ಠಾಕ್ರೆ
ಶಿವಸೇನೆಯನ್ನು ಬಿಡಲು ಬಯಸುವವರು ಹೋಗಬಹುದು, ಬರುವವರಿಗೆ ಸದಾ ಬಾಗಿಲು ತೆರೆದಿರಲಿದೆ. ಆದರೆ ಬಂಡಾಯ ಶಾಸಕರು ದ್ರೋಹಿಗಳು ಅವರನ್ನು ಎಂದಿಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಮುಂಬೈ: ಶಿವಸೇನೆಯನ್ನು ಬಿಡಲು ಬಯಸುವವರು ಹೋಗಬಹುದು, ಬರುವವರಿಗೆ ಸದಾ ಬಾಗಿಲು ತೆರೆದಿರಲಿದೆ. ಆದರೆ ಬಂಡಾಯ ಶಾಸಕರು ದ್ರೋಹಿಗಳು ಅವರನ್ನು ಎಂದಿಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಏಕೆಂದರೆ ಶಿಂಧೆ ಬೆಂಬಲಕ್ಕೆ ಒಬ್ಬರ ಹಿಂದೆ ಒಬ್ಬರು ಶಾಸಕರು ಸೇರುತ್ತಿದ್ದಾರೆ. ಪಕ್ಷ ತೊರೆಯಲು ಬಯಸುವವರಿಗೆ ಮತ್ತು ಪಕ್ಷಕ್ಕೆ ಮರಳಲು ಬಯಸುವವರಿಗೆ ಶಿವಸೇನೆಯ ಬಾಗಿಲು ತೆರೆದಿದೆ ಎಂದು ಹೇಳಿದರು. ದೇಶ ವಿರೋಧಿ ಬಂಡಾಯ ಶಾಸಕರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ನೇರವಾಗಿ ನುಡಿದರು.
ಪಕ್ಷದಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದ್ದು, ಸದನದಲ್ಲಿ ತನ್ನ ಬಲವನ್ನು ಸಾಬೀತುಪಡಿಸುವುದಾಗಿ ಬಂಡಾಯ ಶಾಸಕರ ಗುಂಪು ಹೇಳಿದೆ. ಈ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಸಭೆ ನಡೆಸಿದ್ದರು. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, . ಇದರಲ್ಲಿ ಪ್ರಮುಖ ವಿಚಾರವೆಂದರೆ, ಬಂಡಾಯ ಶಾಸಕರು ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ. ಈ ಯುದ್ಧದಲ್ಲಿ ನಾವು ಖಂಡಿತವಾಗಿ ಗೆಲ್ಲುತ್ತೇವೆ’ ಎಂದು ಹೇಳಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ ಕನಿಷ್ಠ 38 ಶಾಸಕರು ಮತ್ತು 10 ಪಕ್ಷೇತರರು ಅಸ್ಸಾಂನ ಗುವಾಹಟಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಬಂಡಾಯ ಶಾಸಕರ ಅನರ್ಹತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಸೇನಾ ತಿಳಿಸಿದೆ.
ನಿಮ್ಮ ಪ್ರಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಸಮರ್ಥ ಆಡಳಿತಗಾರ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನೀವೂ ಕೂಡ ಅಸಮರ್ಥ ನಾಯಕರೇ ಆಗುತ್ತೀರಿ, ಹೀಗಾಗಿ ಇಬ್ಬರೂ ಜನರ ಮುಂದೆ ನಿಲ್ಲೋಣ ತೀರ್ಮಾನವನ್ನು ಜನರೇ ತೆಗೆದುಕೊಳ್ಳುತ್ತಾರೆ, ಎಂದೂ ಸತ್ಯ ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದರು.
ಅತೃಪ್ತ ಶಾಸಕರ ನಾಯಕ ಏಕನಾಥ್ ಶಿಂಧೆ ಜೊತೆಗಿರುವ 50ಕ್ಕೂ ಹೆಚ್ಚು ನಾಯಕರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದಾರೆ. ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದೆ.
ಬಂಡಾಯ ಬಣವು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಸೇನಾ ಮೈತ್ರಿಯನ್ನು ಅಸ್ವಾಭಾವಿಕ ಎಂದು ಕರೆದಿದ್ದು, ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವು ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಮಾಡಿಕೊಳ್ಳುವಂತೆ ಒತ್ತಾಯಿಸಿದೆ.