ಮತ್ತೆ ಶುರುವಾಯ್ತು ಲಾಕ್​ಡೌನ್​: ರೂಪಾಂತರಿ ಕೊರೊನಾ ತಡೆಯಲು ಲಾಕ್​ಡೌನ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

|

Updated on: Dec 30, 2020 | 1:04 PM

ರೂಪಾಂತರಿ ಕೊರೊನಾ ತಡೆಯಲು ಲಾಕ್​ಡೌನ್​ ಮಾಡಲು ನಿರ್ಧರಿಸಿದ ಮಹಾರಾಷ್ಟ್ರ. ಜನವರಿ ಅಂತ್ಯದ ತನಕ ಲಾಕ್​ಡೌನ್​.

ಮತ್ತೆ ಶುರುವಾಯ್ತು ಲಾಕ್​ಡೌನ್​: ರೂಪಾಂತರಿ ಕೊರೊನಾ ತಡೆಯಲು ಲಾಕ್​ಡೌನ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ
Follow us on

ಮುಂಬೈ: ಬ್ರಿಟನ್​ ದೇಶದಲ್ಲಿ ಶುರುವಾದ ರೂಪಾಂತರಿ ಕೊರೊನಾ ಭಾರತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತೆ ಲಾಕ್​ಡೌನ್​ ಮೊರೆ ಹೋಗಿದೆ. ಮಹಾರಾಷ್ಟ್ರದಲ್ಲಿ ಜನವರಿ 31ರವರೆಗೆ ಲಾಕ್‌ಡೌನ್ ಗೈಡ್‌ಲೈನ್ಸ್ ಮುಂದುವರಿಸಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ.

(ನವೆಂಬರ್​ 25ರ ನಂತರ ಬ್ರಿಟನ್​ನಿಂದ ಮುಂಬೈಗೆ ಆಗಮಿಸಿರುವ ಒಟ್ಟು 15 ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 3,018 ಕೊರೊನಾ ಪ್ರಕರಣ ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 19,25,066ಕ್ಕೆ ತಲುಪಿದೆ. ಆ ಮೂಲಕ ಭಾರತದ ಒಟ್ಟು ಪ್ರಕರಣಗಳ ಶೇ.60ರಷ್ಟು ಪಾಲು ಮಹಾರಾಷ್ಟ್ರದ್ದಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಉದ್ಧವ್​ ಠಾಕ್ರೆ ಸರ್ಕಾರ ಮತ್ತೆ ಲಾಕ್​ಡೌನ್​ ಹೇರುವುದಾಗಿ ಘೋಷಣೆ ಮಾಡಿದೆ. ಲಾಕ್​ಡೌನ್​ ಹೇರಿದರೂ ಸರ್ಕಾರ ಅನುಮತಿ ನೀಡಿರುವ ಕಾರ್ಯ ಚಟುವಟಿಕೆಗಳು ಯಥಾಪ್ರಕಾರ ಮುಂದುವರೆಯಲಿವೆ ಎಂದು ತಿಳಿಸಲಾಗಿದೆ.

ಮುಂದಿನ ವಾರವೂ ಹಾರುವುದಿಲ್ಲ ಭಾರತ-ಬ್ರಿಟನ್​ ವಿಮಾನಗಳು -ಸಚಿವ ಹರ್ದೀಪ್ ಸಿಂಗ್ ಪುರಿ

Published On - 12:47 pm, Wed, 30 December 20